ಕಾನೂನು ವಿರೋಧಿಯಾಗಿದ್ದರೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಕಟ್ಟಿಹಾಕಿರುವ ಶಕ್ತಿಯಾದರೂ ಯಾವುದು? What is the power that binds the authorities to act if they are against the law?

SUDDILIVE || SHIVAMOGGA

ಕಾನೂನು ವಿರೋಧಿಯಾಗಿದ್ದರೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಕಟ್ಟಿಹಾಕಿರುವ ಶಕ್ತಿಯಾದರೂ ಯಾವುದು? What is the power that binds the authorities to act if they are against the law?     

Power, binds

ಅಧಿಕಾರಿಗಳ ದಿವ್ಯ ನಿರ್ಲಕ್ಷಗಳಿಂದಾಗಿ ಸಾರ್ವಜನಿಕರು ಗುದ್ದಾಡುವಂತಾಗಿದೆ. ಹಿಟ್ಟಿನಗಿರಣಿಯ ಶಬ್ದಗಳು ಮರುಕಳಿಸುತ್ತಿದ್ದು ಬಡಾವಣೆ ನಿವಾಸಿಗಳು ನೀಡಿದ ದೂರನ್ನ ಅಧಿಕಾರಿಗಳು ನಿರ್ಲಕ್ಷಿಸಿದ ಪರಿಣಾಮ ಡಿ.30 ರಂದು ಶಾಸಕರ ಎದುರೆ ಹಿಟ್ಟಿನ ಗಿರಣಿ ಮಾಲೀಕರು ಮತ್ತು ಸಂತ್ರಸ್ತರು ಬಡಿದಾಡಿಕೊಂಡು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಶಿವಮೊಗ್ಗದ ಗಾಡಿಕೊಪ್ಪದ ಪುರುದಾಳ್ ರಸ್ತೆಯಲ್ಲಿರುವ ಲಕ್ಷ್ಮೀ ರಂಗನಾ ಹಿಟ್ಟಿನ ಗಿರಣಿ ನಡೆಸಲು ಪಾಲಿಕೆಯಿಂದ ಪರವಾನಗಿ ಪಡೆಯದೆ ನಡೆಸಲಾಗುತ್ತಿದೆ ಎಂಬುದು ಪಾಲಿಕೆ ನೀಡಿದ ದಾಖಲಾತಿಯಿಂದಲೇ ಪತ್ತೆಯಾಗಿದೆ. 


ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಗಾಡಿಕೊಪ್ಪದಲ್ಲಿ  ಅನಧಿಕೃತವಾಗಿ ಮೂರು ವರ್ಷಗಳಿಂದ ನಡೆಯುತ್ತಿರುವ ಹಾಗೂ ಹೆಚ್ಚು ಶಬ್ದಮಾಲಿನ್ಯ ಮಾಡುತ್ತಿರುವ ಶ್ರೀ‌ಲಕ್ಷ್ಮೀರಂಗನಾಥ ಹಿಟ್ಟಿನ ಗಿರಣಿಯ ವಿರುದ್ದ ದೂರು ನೀಡಿದರೂ  ದಿವ್ಯ ನಿರ್ಲಕ್ಷ್ಯ ವಹಿಸಿದ್ದರಿಂದ ಮಾಲೀಕರು ಮತ್ತು ಸಂತ್ರಸ್ತರ ನಡುವೆ ಗಲಾಟೆ ಮತ್ತು ವೈಮನಸ್ಸಿಗೆ ದಾರಿಮಾಡಿಕೊಟ್ಟಿರುವುದಲ್ಲದೆ ಈ  ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತವಾಗಿ ತೆರಿಗೆ ವಂಚನೆ ಮಾಡಿ ನಡೆಸುತ್ತಿರುವ ಹಿಟ್ಟಿನಗಿರಣಿಯ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಭಯ ಅಥವಾ ಕೆಳಹಂತದ ಅಧಿಕಾರಿಗಳು ಆಮೀಶಕ್ಕೆ ಬಲಿಯಾಗಿ ದೂರುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತಿಲ್ಲವೆ ? ಎಂಬ ಅನುಮಾನಗಳನ್ನ ಸಂತ್ರಸ್ತರು ಸುದ್ದಿಲೈವ್ ಗೆ ದೂರು ನೀಡಿದ್ದಾರೆ.  

ಪಾಲಿಕೆ ಪರವಾನಿಗೆ ಇಲ್ಲದೆ ಕಮರ್ಷಿಯಲ್ ವಿದ್ಯುತ್ ಸಂಪರ್ಕವನ್ನ ನೀಡಬಹುದಾ ಎಂಬ ಶಂಕೆ ಮೂಡಿದೆ. ಪಾಲಿಕೆ ಪರವಾನಿಗೆಯನ್ನ ಪಡೆಯದೆ ಹಿಟ್ಟಿನ ಗಿರಣಿಗೆ ಕಮರ್ಷಿಯಲ್ ವಿದ್ಯುತ್ ಸಂಪರ್ಕ ಕೊಡಬಹುದೆ ? ಶಬ್ದ ಮಾಲಿನ್ಯ ಕುರಿತು ದೂರು ನೀಡಿದರೂ ಮಾಲಿನ್ಯ ಮಂಡಳಿ ಡೆಸಿಬಲ್ ಚೆಕ್ ಮಾಡಿ ವರದಿ ನೀಡಲು ಯಾವುದಾದರೂ ಅಭ್ಯಂತರ ಇದೆಯಾ ? ಈ ಅನುಮಾನಗಳಿಗೆ ಎಲ್ಲಾ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. 

ಶಾಸಕರ ಮುಂದೆ ನಡೆದ ಜಗಳ ಮುಂದಿನ ದಿನಗಳಲ್ಲಿ ಅತಿರೇಕಕ್ಕೆ ತಲುಪುವುದಿಲ್ಲವೆಂಬುದು ಏನು ಗ್ಯಾರೆಂಟಿ? ಎಲ್ಲಾದರೂ ಪ್ರಾಣ ಹಾನಿಯಾದರೆ ಇದರ ಜವಬ್ದಾರಿಯನ್ನ ಪೊಲೀಸರು ಹೊರಿಸಬೇಕಿದೆ.  ಕಾನೂನು ಪ್ರಕಾರ ಇದ್ದರೆ ಹಿಟ್ಟಿನ ಗಿರಣಿ ನಡೆಸಲಿ ಬಿಡಿ, ಒಂದು ವೇಳೆ ಕಾನೂನು ಅಡಿ ಗಿರಣಿ ನಡೆಸದಿದ್ದರೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಡೆಯುತ್ತಿರುವ ಕಾಣದ ಕೈಗಳಾದರೂ ಯಾವುದು ಎಂಬುದು ಸ್ಪಷ್ಟವಾಗಬೇಕಿದೆ. 

What is the power that binds the authorities to act if they are against the law? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close