ಬೀದಿ ಮೇಲೆ ಬಿಟ್ಟ ನಿರುಪಯುಕ್ತ ಮಾರಾಟ ಪರಿಕರಗಳಿಗೆ ಮುಹೂರ್ತ ಫಿಕ್ಸ್ ಮಾಡಿದ ಪಾಲಿಕೆ- Muhurat Fix for useless sales tools left on the street

SUDDILIVE || SHIVAMOGGA

ಬೀದಿ ಮೇಲೆ ಬಿಟ್ಟ ನಿರುಪಯುಕ್ತ  ಮಾರಾಟ ಪರಿಕರಗಳಿಗೆ ಮುಹೂರ್ತ ಫಿಕ್ಸ್ ಮಾಡಿದ ಪಾಲಿಕೆ- Muhurat Fix for useless sales tools left on the street   

Muhurta, fix



ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫುಟ್ ಪಾತ್ / ರಸ್ತೆ /ಸಾರ್ವಜನಿಕ ಸ್ಥಳಗಳಲ್ಲಿರುವ ಅನುಪಯುಕ್ತ / ನಿಷ್ಕ್ರಿಯ / ಬೀದಿ ಬದಿ ಗಾಡಿಗಳು, ಮಾರಾಟ ಪರಿಕರಗಳನ್ನು ಬೀದಿಯಲ್ಲೇ ಬಿಟ್ಟಿರುವ ಮಾಲೀಕರಿಗೆ ಪಾಲಿಕೆ ಎಚ್ಚರಿಕೆಯ ನೋಟೀಸ್ ಜಾರಿಮಾಡಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ಫುಟ್ ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದ ಕೈಗಾಡಿಗಳು ನಿಷ್ಕ್ರಿಯ, ಅನುಪಯುಕ್ತ, ಕಬ್ಬಿನ ಹಾಲಿನ ಗಾಡಿ, ಐಸ್ ಕ್ರೀಂ ಗಾಡಿ, ಮಾರಾಟಕ್ಕೆ ನಿಷ್ಕ್ರಿಯಗೊಂಡ ವಾಹನ ಇತ್ಯಾದಿ ಮಾರಾಟ ಪರಿಕರಗಳು ತಾತ್ಕಾಲಿಕ ಶಡ್ ಗಳು ಇತ್ಯಾದಿಯನ್ನು ಅನಧಿಕೃತವಾಗಿ ಬಿಟ್ಟಿರುವುದು ಕಂಡು ಬಂದಿರುತ್ತದೆ.

ಈ ಸಾರ್ವಜನಿಕ ಪ್ರಕಟಣೆಯ 15 ದಿನದ ಒಳಗೆ ಸಂಬಂಧಿಸಿದವರು ಕೂಡಲೇ ಸದರಿ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ ಅನುಪಯುಕ್ತವಸ್ತು ಇತ್ಯಾದಿ ತೆರವುಗೊಳಿಸುವುದು.

ತಪ್ಪಿದಲ್ಲಿ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಸದರಿ ಸಾಮಗ್ರಿ ವಶಪಡಿಸಿಕೊಂಡು " ಸ್ಕ್ರಾಪ್ " ಮಾಡುವುದಲ್ಲದೇ ಸಂಬಂಧಿಸಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮವಿಡಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ. 

Muhurat Fix for useless sales tools left on the street

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close