ತಮ್ಮ ಅವಧಿಯಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕದ ಬಿಜೆಪಿ ನಾಯಕರು ದಿಶಾ ಮೀಟಿಂಗ್ ನಲ್ಲಿ ಪುಂಖಾನುಪುಂಖದ ಭಾಷಣ-Punkhanupunkha's speech at the BJP Disha meeting

 SUDDILIVE || SHIVAMOGGA

ತಮ್ಮ ಅವಧಿಯಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕದ ಬಿಜೆಪಿ ನಾಯಕರು ದಿಶಾ ಮೀಟಿಂಗ್ ನಲ್ಲಿ ಪುಂಖಾನುಪುಂಖದ ಭಾಷಣ-Punkhanupunkha's speech at the BJP Disha meeting, which did not put a brake on illegal activities during his tenure

Bjp, pukhanupunkha


ಶಿವಮೊಗ್ಗದ ಜಿಲ್ಲಾಪಂಚಾತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯತೆ ಹಾಗೂ ಮೇಲ್ವಿಚರಣಾ ಸಮಿತಿ (ದಿಶಾ) ಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಯ ಬಗ್ಗೆ ಕೂಗು ಕೇಳಿ ಬಂದಿದೆ. ಎಸ್ಪಿ ಮಿಥುನ್ ಕುಮಾರ್ ಇದ್ದಾಗ ಯಾರೂ ಮಾತನಾಡದ ದಿಶಾ ಸದಸ್ಯರು ಹೊಸ ಎಸ್ಪಿ ನಿಖಿಲ್ ಅವರು ಬಂದ ವೇಳೆಯಲ್ಲೇ ಧ್ವನಿ ಹೆಚ್ಚಾಗಿರುವುದು ಅಚ್ಚರಿ ಮೂಡಿಸಿದೆ. 

ದಿಶಾ ಸಭೆಯಲ್ಲಿದ್ದ ಎಸ್ಪಿ ನಿಖಿಲ್ ಕಾರ್ಯಕ್ರಮವೊಂದಕ್ಕೆ ಎದ್ದ ವೇಳೆಯಲ್ಲಿ ನಿಮ್ಮ ಬಳಿ ಸಾಕಷ್ಟು ಮಾತಕತೆ ನಡೆಸಯವುದಿದೆ ಎರಡು ನಿಮಿಷ ಎಂದು ಹೇಳಿದ ಸಂಸದರು ಶಿಕಾರಿಪುರದಲ್ಲಿ oc ನಡೆಸಲು ಸಹಕರಿಸುವಂತೆ ಆಗ್ರಹಿಸಿ ಒಂದಿಷ್ಟು ಜನ ಬಂದಿದ್ದರು. ಇವರನ್ನ ಹಿಡಿಸಿಕೊಡಲು ಸಹಾಯ ಮಾಡದ ಸಂಸದರು ಏಕಾಏಕಿ ನೂತನ ಎಸ್ಪಿ ಮುಂದೆ ಮಾತುಕತೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಇದಕ್ಕೆ ಪೂರಕದಂತೆ ಮಲ್ಲಿಕಾರ್ಜುನ ಹಕ್ರೆಯವರು ಸಾಗರದ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸ್ಪಿರಿಟ್ ಸೇರಿಸಿ ಮಾರಾಟ ಮಾಡಲಾಗುತ್ತಿದೆ. ಹುಬ್ಬಳ್ಳಿಯಿಂದ ಬರುತ್ತಿದ್ದಾರೆ. ಇದಕ್ಕೆ ಅಧಿಕಾರದಲ್ಲಿ ಇದ್ದವರೆ ಸಹಕಾರ ನೀಡುತ್ತಿದ್ದೀರಿ ಎಂದು ಸಭೆಗೆ ಹೇಳಿ ಇವುಗಳಿಂದ ಜನ ಲಿವರ್ ಕಿಡ್ನಿ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದನ್ನ ನಿಯಂತ್ರಿಸಬೇಕು ಎಂದು ದೂರಿದರು. 

ಇದಾದ ನಂತರ ಮಾತನಾಡಿದ  ದಿಶಾ ಸಮಿತಿ ಸದಸ್ಯರಾದ ಕುಸುಮ ಎಂಬುವರು ಮಾತನಾಡಿ, ಆಗುಂಬೆ ಭಾಗದಲ್ಲಿ ಶಾಲಾ ಮಕ್ಕಳಿಂದ ಮದ್ಯ ತರಿಸುವ ವ್ಯವಸ್ಥೆಯಿದೆ. ಇಸ್ಪೀಟ್ ಗಳನ್ನ ಕದ್ದು ಮುಚ್ಚಿ ಆಡುತ್ತಾರೆ. ಇವುಗಳನ್ನ ನಿಯಂತ್ರಿಸುವಂತೆ ಕೋರಿದರು. ಬಿಜೆಪಿ ಸರ್ಕಾರವಿದ್ದಾಗಲೇ ಅಕ್ರಮ ಮರಳು, ಅಕ್ರಮ ಓಸಿ, ಇಸ್ಪೀಟು, ದಿನಸಿ ಅಂಗಡಿಯಲ್ಲೂ  ಮದ್ಯ ಮಾರಾಟ ಅವ್ಯವಹತವಾಗಿತ್ತು. 

ಆ ವೇಳೆ ತಡೆಯದ ಈ ಎಲ್ಲಾ ನಾಯಕರು ಮಿಥುನ್ ಕುಮಾರ್ ಎಸ್ಪಿ ಆಗಿದ್ದಾಗ ಭೇಟಿ ಮಾಡಿ ಮಾತನಾಡದ ಈ ನಾಯಕರು ನೂತನ ಎಸ್ಪಿ ಆಗಿ ಬಂದ ನಿಖಿಲ್ ಅವರನ್ನ ಹಿಡಿದುಟ್ಟುಕೊಂಡು ಪುಂಖಾನುಪುಂಖವಾಗಿ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. 

ಗುಂಡಪ್ಪ ಶೆಡ್ ನಲ್ಲಿ ಅಂಡರ್ ಪಾಸ್ ಮಾಡುವ ಬಗ್ಗೆ ಸೂಚನೆ

ಗುಂಡಪ್ಪ ಶೆಡ್ ನಲ್ಲಿ ಅಂಡರ್ ಪಾಸ್ ನಿರ್ಮಿಸಲು ದಿಶಾ ಸಮಿತಿಯಲ್ಲಿ ಚರ್ಚಿಸಲಾಯಿತು. ಎಷ್ಟು ಮನೆಗಳು ಹೋಗಲಿದೆ ಎಂಬುದನ್ನ ಸರ್ವೆ ಮಾಡದ ಪಾಲಿಕೆ ಆಯುಕ್ತರ ಬಗ್ಗೆ ಸಂಸದರು ಬೇಸರ ವ್ಯಕ್ತಪಡಿಸಿದರು. ಸರ್ವೆ ಮಾಡಲು ಎಡಿಸಿ ಸೂಚನೆ ಬರಬೇಕಿದೆ ಎಂದ ಪಾಲಿಜೆಯರಿಗೆ ಈ ಹಿಙದಿನ ಆಯುಕ್ತರಿಗೆ ಪಟ್ಟಿ ನೀಡಲಾಗಿದೆ. ಆದಷ್ಟು ಬೇಗ ಮಾಡಲು ಸೂಚಿಸಿದರು. ಸಾಗರ ಮತ್ತು ಭಟ್ಕಳದ ಗಡಿಭಾಗದಲ್ಲಿರುವ ಮೇಗಾನೆ ಮೂಲಭೂತ ಸೌಕರ್ಯಗಳಿಲ್ಲ. ರಸ್ತೆ, ನೆಟವರ್ಕ್ ಸೌಕರ್ಯ ಒದಗಿಸಲು ಮನವಿ ಸಲ್ಲಿಸದರು. 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬೈಂದೂರು ಸೇರಿದಂತೆ 398 ಟವರ್ ನಿರ್ಮಿಸಬೇಕು ಎಂದು ಸೂಚಿಸಲಾಗಿತ್ತು. ಇದರಲ್ಲಿ 153 ಟವರ್ ನಿರ್ಮಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದಕ್ಕೆ ಸೂಕ್ತ ಸೇವೆ ಸಲ್ಲಿಸಲು ಸಂಸದರು  ಸೂಚಿಸಿದರು. ಕೇಂದ್ರ ಸರ್ಕಾರ ಹಣ ನೀಡಿದೆ ಡ್ರೈವ್ ಪರೀಕ್ಷೆ ನಡೆಸಿದ್ದೀರಾ ಎಂದು ಕೇಳಿದ ಸಂಸದರಿಗೆ ಖಾಸಗಿಯವರಿಗೆ ಬೀಡಲಾಗಿದೆ. ಟ್ಯೂನಿಂಗ್ ಕೆಲಸಗಳು ಆಗ್ತಾಯಿಲ್ಲ ಏಕೆ ಎಂದುಬಪ್ರಶ್ನಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close