ಕೂಡ್ಲಿಗೆರೆ ಗ್ರಾಮಸ್ಥರು ಭಯಭೀತರಾಗಿದ್ದೇಕೆ?Why are the villagers of Kudligere scared?

 SUDDILIVE || BHADRAVATHI

ಕೂಡ್ಲಿಗೆರೆ ಗ್ರಾಮಸ್ಥರು ಭಯಭೀತರಾಗಿದ್ದೇಕೆ?Why are the villagers of Kudligere scared?    

Kudligere, Bear

ತಾಲೂಕಿನ ಉಕ್ಕುಂದದಲ್ಲಿ ಕರಡಿಯೊಂದು ದಾಳಿ ನಡೆಸಿ ವ್ಯಕ್ತಿಯೋರ್ವನಿಗೆ ತೀವ್ರ ಗಾಯಗೊಳಿಸಿದ ಬೆನ್ನಲ್ಲೇ ಭದ್ರಾವತಿ-ಚನ್ನಗಿರಿ ರಸ್ತೆಯ ಕೂಡ್ಲಿಗೆರೆ ರಸ್ತೆಯಿಂದ 250 ಮೀಟರ್ ಅಂತರದಲ್ಲಿ ಮನೆಯ ಗೇಟಿನ ಮುಂದೆ 3 ಕರಡಿಗಳು ಪ್ರತ್ಯಕ್ಷವಾಗಿದೆ. 

ಇಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ  ಕೂಡ್ಲಿಗೆರೆ  ಶರತ್ ಎಂಬುವರ ಮನೆಬಳಿ  3ಕರಡಿಗಳು ಪ್ರತ್ಯಕ್ಷವಾಗಿದೆ. ಶರತ್  ಅವರ ಮನೆಯ ಸಾಕು ನಾಯಿಗಳು ಮಾಮೂಲಿಗಿಂತ ಜೋರಾಗಿ ಬೊಗಳುತ್ತಿದ್ದ ಕಾರಣ ಶರತ್  ಅವರು ಸಿಸಿ ಕ್ಯಾಮೆರಾವನ್ನ ಪರಿಶೀಲಿಸಿದ್ದಾರೆ.‌ ಪರಿಶೀಲಿಸಿದಾಗ ಕರಡಿಗಳು ಮನೆಯ ಗೇಟ್ ಬಳಿ ಓಡಾಡಿದ್ದು ಗಮನಕ್ಕೆ ಬಂದಿದೆ.‌

ಇದರಿಂದ ಕೂಡ್ಲಿಗೆರೆಯ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಯಾವ ಸಬೂಬು ಹೇಳಲಿದೆ. ಯಾವ ಕ್ರಮ ಜರುಗಿಸಲಿದೆ ಕಾದು ನೋಡಬೇಕಿದೆ.

Why are the villagers of Kudligere scared?    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close