SUDDILIVE || SHIKARIPURA
ಆತ ನಾಡಬಂದೂಕು ತಯಾರಿಕೆಗಾಗಿ ಪಕ್ಕದ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದ, 7 ನಾಡಬಂದೂಕು ಪೊಲೀಸರ ವಶಕ್ಕೆ-He had chosen the house next door to manufacture firearms, 7 firearms seized by police
ಶಿಕಾರಿಪುರ ಗ್ರಾಮಾಂತರ ಭಾಗದಲ್ಲಿ ಬರುವ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದು ತಯಾರಿಸಿ ಮಾರಾಟ ಮಾಡಿಕೊಂಡಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ದಾಗ 7 ನಾಡಬಂದುಕುಗಳು ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ವಸ್ತುಗಳು ಪತ್ತೆಯಾಗಿವೆ
ಬದ್ರಾಪುರ ಗ್ರಾಮದಲ್ಲಿ ಮೂರನೇ ತಿರುವಿನಲ್ಲಿ ವಾಸವಾಗಿದ್ದ ಲಕ್ಷ್ಮಣ್ ಎಂಬ ಕಾರ್ಪೆಂಟರ್ ತನ್ನ ಪಕ್ಕದ ಮನೆ ಎಲ್ಲಿಯೇ ಅಕ್ರಮ ಬಂದೂಕು ತಯಾರಿಕೆಯ ಅಡ್ಡವನ್ನು ಮಾಡಿಕೊಂಡಿದ್ದನು ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಸಿಪಿಐ ಸಂತೋಷ್ ಎಂ ಪಾಟೀಲ್ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಶರತ್ ಸಿಬ್ಬಂದಿಗಳಾದ ಸಿ ಎಚ್ ಸಿ ಕೊಟ್ರೇಶಪ್ಪ ಪ್ರದೀಪ್ ಕೆ ಸಿ ಪಿ ಸಿ ನಾಗರಾಜ್ ರವಿ ನಾಯಕ ರವಿಕುಮಾರ್ ಒಳಗೊಂಡ ವಿಶೇಷ ತಂಡವು ದಾಳಿ ನಡೆಸಿತ್ತು.
ಲಕ್ಷ್ಮಣಪ್ಪ ಎಂಬ ಕಾರ್ಪೆಂಟರ್ ಅವರ ಮನೆಗೆ ನ್ಯಾಯಾಲಯದ ಸರ್ಚ್ ವಾರೆಂಟ್ ಮೂಲಕ ದಾಳಿ ನಡೆಸಲಾಗಿತ್ತು ದಾಳಿಯಲ್ಲಿ ಏಳು ನಾಡ ಬಂದೂಕುಗಳು ಪತ್ತೆಯಾಗಿವೆ. ಹಾಗೂ ಅದಕ್ಕೆ ಸಂಬಂಧಪಟ್ಟಂತಹ ವಸ್ತುಗಳು ಸಹ ಪತ್ತೆಯಾಗಿದ್ದು ಆರೋಪಿತನನ್ನು ವಶಕ್ಕೆ ಪಡೆಯಲಾಗಿದೆ.
ತನಿಕಾ ತಂಡದ ಉತ್ತಮ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ನಿಖಿಲ ರವರು ಪ್ರಶಂಸಿ ಅಭಿನಂದಿಸಿದ್ದಾರೆ.
7 firearms seized by police

