ಕೊನೆಗೂ ಬಿತ್ತು ಸುಲ್ತಾನ್ ಗೋಲ್ಡ್ ಇರುವ ಎಸ್ ಕೆ ಎಂ ಪ್ಲಾಜಾಕ್ಕೆ ಪಾಲಿಕೆ ಬೋರ್ಡ್-The municipal board has finally approved the construction of SKM Plaza, where Sultan Gold is located

 SUDDILIVE || SHIVAMOGGA

ಕೊನೆಗೂ ಬಿತ್ತು ಸುಲ್ತಾನ್ ಗೋಲ್ಡ್ ಇರುವ ಎಸ್ ಕೆ ಎಂ ಪ್ಲಾಜಾಕ್ಕೆ ಪಾಲಿಕೆ ಬೋರ್ಡ್-The municipal board has finally approved the construction of SKM Plaza, where Sultan Gold is located   





ಈ ಎಸ್ ಕೆ ಎಂ ಪ್ಲಾಜಾ ಕಟ್ಟಡಕ್ಕೆ ಕೊನೆಗೂ ಮಹಾನಗರ ಅಲಿಕೆ ಇದು ಪಾಲಿಕೆ ಜಾಗ ಎಂದು ನಾಮಫಲಕ ಹಾಕಿರುವುದು ಕಟ್ಟಡಕ್ಕೆ ಕಳೆ ಬಂದಿದೆ. ಆರಂಭದಿಂದಲೂ ಈ ಜಾಗ ಪಾಲಿಕೆ ಜಾಗ ಎಂದು ಹೇಳಿಕೊಂಡು ಬಂದರೂ ನ್ಯಾಯಾಲಯದ ಕಟಕಟ್ಟೆಗೆ ಏರಲಾಗಿತ್ತು. 

ಸರ್ವೆ ನಂಬರ್ 501/Block-2, 669/A1 ಜಾಗದಲ್ಲಿ ಮಾಜಿ ಮೇಯರ್ ಎಸ್ ಕೆ ಮರಿಯಪ್ಪನವರ ಮಾಲಿಕತ್ವದಲ್ಲಿ ಎಸ್ ಕೆ ಎಂ‌. ಪ್ಲಾಜಾ ಎಂಬ ಕಟ್ಟಡ ನಿರ್ಮಿಸಲಾಗಿತ್ತು. ಇದನ್ನ ಪ್ರಶ್ನಿಸಿ ನಾಗರೀಕ ಹಿತರಕ್ಷಣ ವೇದಕೆ ಇದನ್ನ ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿದ್ದರು. 

ಡಿ.11 2025 ರಲ್ಲಿ ಹೈಕೋರ್ಟ್ ಇದು ಪಾಲಿಕೆ ಜಾಗ ಎಂದು ಹೇಳಿ ತೀರ್ಪು ನೀಡಿತ್ತು. ಮೊದಲಿಗೆ ನಾಗರೀಕ ಹಿತರಕ್ಷಣ ವೇದಿಕೆಯು ಎಸ್ಕೆಎಂ ಪ್ಲಾಜಾವನ್ನ ಪಾಲಿಕೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಆಡಿಟರ್ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಡಿಸಿ ಡಿಎಂಎ (ಡೈರೆಕ್ಟರ್ ಆಫ್ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್) ಗೆ ಪತ್ರ ಬರೆದಿದ್ದರು. 


ಡಿಎಂಎಯಲ್ಲೂ ಎಸ್ಕೆಎಂ ಪ್ಲಾಜಾ ಜಾಗ ಪಾಲಿಕೆ ಜಾಗದಲ್ಲಿದೆ ಎಂದು ತೀರ್ಪು ಹೊರಬಿದ್ದಿತ್ತು. ಈ ತೀರ್ಪಿನ ವಿರುದ್ಧ ಮರಿಯಪ್ಪನವರೆ ರಾಜ್ಯ ಹೈಕೋರ್ಟ್ ಗೆ ರಿಟ್ ಪಿಟಿಷನ್ ಹಾಕಿದ್ದರು. ಈಗ ನ್ಯಾಯಾಲಯ ನಾಗರೀಕ ಹಿತರಕ್ಷಣ ವೇದಿಕೆಯ ಪರವಾಗಿ ಪಾಲಿಕೆಯ ಜಾಗ ಎಂದು ತೀರ್ಪು ನೀಡಿದೆ. ಜೊತೆಗೆ  ಪಾಲಿಕೆ ತಕ್ಷಣವೇ ಬಿಲ್ಡಿಂಗ್ ನ್ನು ಸ್ವಾದಿನಕ್ಕೆ ಪಡೆದು ಕೊಳ್ಳಲು ಸೂಚಿಸಿದೆ.  

ಆದರೆ ಈ ಆದೇಶವು ಪಾಲಿಕೆಗೆ ಬರಲು ತಡವಾಗಿತ್ತು. ಜ.3 ರವರೆಗೂ ನ್ಯಾಯಾಲಯ ರಜಾ ಇದ್ದಿದ್ದರಿಂದ ಪಾಲಿಕೆ ವಶ ಪಡಿಸಿಕೊಳ್ಳಲು ಹೇಳಿದ್ದ ನ್ಯಾಯಾಲಯದ ಆದೇಶ ಪಾಲಿಕೆಗೆ ಸಿಕ್ಕಿದ್ದು ತಡವಾಗಿತ್ತು. ನಿನ್ನೆ ಮಾಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಅವರೆ ಸ್ಥಳಕ್ಕೆ ಹೋಗಿ ನಾಮಫಲಕ ಹಾಕಿ ಬಂದಿದ್ದಾರೆ. 

ಅತಿಕ್ರಮಣ ಮಾಡಿರುವ ಬಗ್ಗೆ ಮಾಲೀಕರಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ. ಅದೂ ಸಹ ನ್ಯಾಯಾಲಯದ ಮೂಲಕವೇ ಆಗಬೇಕಿದೆ. ಇದರ ಬಗ್ಗೆ ಮುಂದೆ ಏನಾಗಲಿದೆ ಕಾದು ನೋಡಬೇಕಿದೆ. ಕಟ್ಟಡ ಖಾಲಿ ಮಾಡಲು ಪಾಲಿಕೆ ಸಮಯ ನೀಡಿರುವುದು ತಿಳಿದು ಬಂದಿದೆ. 

The municipal board has finally approved the construction of SKM Plaza, where Sultan Gold is located

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close