SUDDILIVE || BHADRAVATHI
ಯುವಕರ ನಡುವೆ ಗಲಾಟೆ ಓರ್ವನ ಕುತ್ತಿಗೆಗೆ ಚಾಕು ಇರಿತ- A fight between youths resulted in a knife stab to the neck
ಭದ್ರಾವತಿಯ ದೊಡಂಘಟ್ಟದಲ್ಲಿ ಇಬ್ಬರು ಯುವಕರ ನಡುವೆ ಗಲಾಟೆಯಾಗಿದ್ದು 8 ಜನ ಯುವಕರು ಬಂದು ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಇದರಲ್ಲಿ ಓರ್ವನನ್ನ ಶಿವಮೊಗ್ಗದ ಮೆಗ್ಗಾನ್ ಗೆ ಶಿಫಾರಸು ಮಾಡಲಾಗಿದೆ.
ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.ಈ ಘಟನೆಗೆ ಕಾರಣ ವೇನು ಎಂಬುದು ತಿಳಿಯಬೇಕಿದೆ. ಆದರೆ ದೊಣಂಬಘಟ್ಟದಲ್ಲಿ ಫಾಜಿಲ್ (20) ಎಂಬಾತನಿಗೂ ಹುಸ್ಮಾನ್ ಮತ್ತು ಅಸ್ಲಾಮ್ ಜೊತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಫಾಜಿಲ್ ಗೆ ಗಂಟಲಿಗೆ ಚಾಕು ಇರಿಯಲಾಗಿದೆ.
ಈ ಘಟನೆ ಸಂಬಂಧ ಮೊಹಮದ್ ಐಮಾನ್, ಮೊಮದ್ ಅಯೂಬ್, ಮೊಹಮದ್ ಇಸ್ಮಾಯಿಲ್, ಮೊಹಮದ್ ನೂರು, ಇಮ್ರಾನ್ ಅಲಿ, ಇಸ್ಮಾಯಿಲ್, ಮೊಹಮದ್ ಅಮ್ರೀನ್ ಈ 8 ಜನರು ಫಾಜಿಲ್ ನ ಸಹಚರರು ಎನ್ನಲಾಗಿದೆ.
ಫಾಜಿಲ್ ನ ಕುತ್ತಿಗೆಗೆ ಸರಿಯಾಗಿ ಚಾಕು ಇರಿದಿರುವುದರಿಂದ ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಿದ್ದಾರೆ ಸಲಾಗಿದೆ. ಮತ್ತೊರ್ವನಿಗೆ ತಲೆ ಕೈ, ಎದೆಗೆ ಚಾಕುವಿನಿಂದ ದಾಳಿ ನಡೆಸಲಾಗಿದೆ. ಇವರೆಲ್ಲಾ 18-21 ವರ್ಷದ ಯುವಕರಾಗಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
A fight between youths resulted in a knife stab to the neck

