ಹಂಪ್ಸ್ ಅವಾಂತರ, ಬೈಕ್ ಸವಾರ ತೀವ್ರ ನಿಗಾ ಘಟಕದಲ್ಲಿ- Humps accident, biker in intensive care unit

 SUDDILIVE || SHIVAMOGGA

ಹಂಪ್ಸ್ ಅವಾಂತರ, ಬೈಕ್ ಸವಾರ ತೀವ್ರ ನಿಗಾ ಘಟಕದಲ್ಲಿ- Humps accident, biker in intensive care unit   

Humps, accident


ನಗರದ ಎಲ್ ಬಿ ಎಸ್ ನಗರದಲ್ಲಿರುವ ವಿಜಯ ಬ್ಯಾಂಕ್ ಬಳಿಯ ಹಂಪ್ಸ್ ಹಾರಿ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಸಂಗೀತ ಮೊಬೈಲ್ ಶಾಪ್ ನ ಮ್ಯಾನೇಜರ್ ಗೆ ತಲೆಗೆ ತೀವ್ರ ರೀತಿ ಪೆಟ್ಟು ಬಿದ್ದಿದೆ ಅವರನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾದಿ-ಎ-ಹುದಾ ಬಳಿಯ ವಿಸಡಂ ಶಾಲೆಯ ಬಳಿಯ ನಿವಾಸಿಯಾದ ಸಯ್ಯದ ಸುಹೇಲ್ ಉಲ್ಲಾ (32) ಎಂಬ ಯುವಕ ಬೈಕ್ ನಲ್ಲಿ ಸವಳಂಗ ರಸ್ತೆಯಲ್ಲಿ ಬರುವಾಗ ಎಲ್ ಬಿಎಸ್ ನಗರದ ತಿರುವಿನಲ್ಲಿರುವ  ಬ್ಯಾಂಕ್ ಎದುರಿನ‌ ಹಂಪ್ಸ್ ಕಾಣದೆ ಹಾರಿಸಿದ ಪರಿಣಾಮ ತೀವ್ರ ಗಂಭೀರ ಗಾಯಗಳಾಗಿವೆ. ಈ ಘಟನೆ ರಾತ್ರಿ ಸುಮಾರು 11 ಗಂಟೆಗೆ ಸಂಭವಿಸಿದೆ.  

ಗಾಯಗೊಂಡ ಬೈಕ್ ಸವಾರನನ್ನ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 72 ಗಂಟೆಯ ವರೆಗೆ ಯುವಕನನ್ನ ತೀವ್ರ ನಿಗಾ ವಹಿಸಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. 

Humps accident, biker in intensive care unit

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close