SUDDILIVE || SHIVAMOGGA
ಪಕ್ಕದ ಅಂಗಡಿಯಲ್ಲಿ ಬೀಗ ಕೊಟ್ಟು ಹೋದ ಯುವಕ ನಾಪತ್ತೆ-A young man who locked the shop and submit the key to a nearby shop has gone missing
ವಿದ್ಯಾನಗರ 3ನೇ ಕ್ರಾಸ್, ಪುಷ್ಪ ಲೇಔಟ್ ವಾಸಿ ಪೀತಮ್ ಎಂಬುವವರ ಸಹೋದರ ಚಿನ್ನಬೆಳ್ಳಿ ವ್ಯಾಪಾರಿ ಗೌತಮ್ ಎಂಬ ಎಂಬ 33 ವರ್ಷದ ವ್ಯಕ್ತಿ ಜ.29 ರಂದು ಬೆಳಗ್ಗೆ ಮನೆಯಿಂದ ಉಪ್ಪಾರಕೇರಿಯ ಅಂಗಡಿಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಇದಕ್ಕೂ ಮೊದಲು ಬೆಳಿಗ್ಗೆ ಗೌತಮ್ ಜೊತೆ ಪ್ರೀತಮ್ ಕುಟುಂಬ ಕುಂಸಿ ಶನೀಶ್ವರ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಮಧ್ಯಾಹ್ನ 2-30 ರ ಸಮಯದಲ್ಲಿ ಉಪ್ಪಾರಕೇರಿಯಲ್ಲಿನ ಚಿನ್ನಾಭರಣದ ಅಂಗಡಿಗೆ ಹೋಗಿ ರಾತ್ರಿ 8 ಗಂಟೆಗೆ ಅಂಗಡಿ ಬೀಗ ಸಹ ಹಾಕಿಹೋಗಿದ್ದಾನೆ. ಬೀಗವನ್ನ ಪಕ್ಕದ ಚಿನ್ನಾಬೆಳ್ಳಿ ಅಂಗಡಿ ಮಾಲೀಕರಿಗೆ ಕೊಟ್ಟು ಸಹೋದರ ಪ್ರೀತಮ್ ಗೆ ಬೀಗ ಕೊಡಿ ಎಂದು ಹೇಳಿ ಹೋದ ಗೌತಮ್ ನಾಪತ್ತೆಯಾಗಿದ್ದಾನೆ.
ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ತೆಳುವಾದ ಗಡ್ಡಮೀಸೆ ಬಿಟ್ಟಿರುತ್ತಾರೆ. ಎಡಗೈ ಮೇಲೆ SRG ಎಂಬ ಹಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್ ಹಾಗೂ ನೀಲಿ ಜೀನ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಕುರಿತು ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯ ತಿಳಿಸಿದೆ.
A young man who locked the shop and submit the key to a nearby shop has gone missing
