ಸೆಂಟ್ರಿಂಗ್ ಸಾಮಾಗ್ರಿ ಕಳುವಿನ ಪ್ರಕರಣದ ಆರೋಪಿ ಬಂಧನ- Accused in centring equipment theft case arrested

SUDDILIVE || THIRTHAHALLI

ಸೆಂಟ್ರಿಂಗ್ ಸಾಮಾಗ್ರಿ ಕಳುವಿನ ಪ್ರಕರಣದ ಆರೋಪಿ ಬಂಧನ- Accused in centring equipment theft case arrested     

Accused, arrest


ಕಟ್ಟಡದ ಸೆಂಟ್ರಿಗ್ ಸಾಮಾಗ್ರಿಗಳನ್ನ ಕದ್ದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಬಂಧಿಸಿ ಆತನಿಂದ ಸಾಮಾಗ್ರಿಗಳನ್ನ ವಶಕ್ಕೆ ಪಡೆದಿದ್ದಾರೆ. 

ತೀರ್ಥಹಳ್ಳಿ ತಾಲ್ಲೂಕು ಕೂಡಿಗೆ ಗ್ರಾಮದ ಗಬಡಿಯ ಮೇಘರಾಜ ರವರು ಹೊಸದಾಗಿ ಮನೆಯ ಕಟ್ಟಡ ನಿರ್ಮಿಸುತ್ತಿದ್ದು ಸದರಿ ಕಟ್ಟಡದ ಮೊದಲ ಮಹಡಿ ಆರ್ಸಿಸಿ ಮುಗಿಸಿ 02 ನೇ ಮಹಡಿ ಸ್ಲಾಬ್ ಮಾಡಲು ಅಂದಾಜು 45,000/- ರೂ ಬೆಲೆಯ ಒಟ್ಟು 150 2X3 ಅಡಿಯ ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ತಮ್ಮ ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಕಟ್ಟಡದ ಪಕ್ಕದಲ್ಲಿಯೇ ಇಟ್ಟಿದ್ದು ದಿನಾಂಕ 02-09-2025 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 03-09-2025 ರ ಬೆಳಿಗ್ಗೆ 07:00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಸೆಂಟ್ರಿಂಗ್ ಶೀಟನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣವನ್ನ ವಶಕ್ಕೆ ಪಡೆದಿದ್ದಾರೆ. 

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಮಾಡಲು  ದಿನಾಂಕ:24-02-2026 ರಂದು  ನಿಖಿಲ್ ಬಿ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಕಾರಿಯಪ್ಪ ಎ.ಜಿ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ,  ರಮೇಶ್ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2  ಶಿವಮೊಗ್ಗ ಜಿಲ್ಲೆ, ಅರವಿಂದ್ ಎನ್ ಕಲಗುಚ್ಚಿ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಶ್ರೀ ರಾಜಶೇಖರ್ ಎಲ್ ಮಾನ್ಯ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ಮಾರ್ಗದರ್ಶನದಲ್ಲಿ, 

ಸುನೀಲ್ ಬಿ.ಸಿ ಪಿ.ಎಸ್.ಐ ಮಾಳೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಶ್ರೀ ಸುರಕ್ಷಿತ, ಹೆಚ್.ಸಿ 430, ಶ್ರೀ ಪುನೀತ್ ಕುಮಾರ್ ಎಸ್ ಎನ್ ಸಿಪಿಸಿ 1604, ಶ್ರೀ ಸಂತೋಷ್ಕುಮಾರ್, ಸಿಪಿಸಿ 1652, ಶ್ರೀ ಚೇತನ್ ಕುಮಾರ್ ಸಿ.ಪಿ.ಸಿ 1678, ಶ್ರೀ ಮೇಘರಾಜ್ ಹೆಚ್.ಸಿ 249, ,ಶ್ರೀ ಅಭಿಲಾಷ್ ಸಿಪಿಸಿ 1676, ಮಂಜು ಸಿಪಿಸಿ 1897, ಶ್ರೀ ವಸಂತ ಸಿಪಿಸಿ 1899, ಶ್ರೀ ಸಾದುದ್ದೀನ್ ಹೆಚ್ ಸಿ 297, ಶ್ರೀ ರಾಮಪ್ಪ ಹೆಚ್ ಸಿ 386, ಸುರೇಶ್ ನಾಯ್ಕ ಸಿ.ಪಿ.ಸಿ 1627 ಆಗುಂಬೆ ಪೊಲೀಸ್ ಠಾಣೆ ಮತ್ತು ಅಬಿಲಾಷ್ ಎ.ಪಿ.ಸಿ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು  ಪ್ರಕರಣದ ಆರೋಪಿತರಾದ ರಶೀದ್ @ ಮೊಹಿದ್ದೀನ್, 42 ವರ್ಷ, ಮುಸ್ಲಿಂ ಜನಾಂಗ, ಗುಜರಿ ವ್ಯಾಪಾರ ಕೆಲಸ, ವಾಸ ಕುಂಬ್ರಿಕೊಡ್ಲು ಶಿರೂರು ಗ್ರಾಮ ಬೈಂದೂರು ತಾಲ್ಲೂಕು ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ ಅಂದಾಜು 1,00,000 ರೂ ಮೌಲ್ಯದ ಒಟ್ಟು 150 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಅಂದಾಜು 1,00,000 ರೂ ಮೌಲ್ಯದ, ಮಹಿಂದ್ರಾ ಸುಪ್ರಾ ಮ್ಯಾಕ್ಸಿ ಟ್ರಕ್ ಗೂಡ್ಸ್ ವಾಹನವನ್ನು ಅಮಾನತ್ತು ಪಡಿಸಿಕೊಂಡಿದ್ದು ಅಮಾನತ್ತು ಪಡಿಸಿಕೊಂಡ 150 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳಲ್ಲಿ 50 ಸೆಂಟ್ರಿಂಗ್ ಶೀಟ್ ಆನವಟ್ಟಿ ಠಾಣಾ ಗುನ್ನೆ ನಂ 192/2025 ಕಲಂ 303(2) ಬಿ.ಎನ್.ಎಸ್ ಕೇಸಿಗೆ ಸಂಬಂಧಪಟ್ಟಿದ್ದಾಗಿರುತ್ತದೆ.   

ಸದರಿ ಪತ್ತೆಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

Accused in centring equipment theft case arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close