SUDDILIVE || SHIVAMOGGA
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಡೆದ ದರೋಡೆ ಪ್ರಕರಣ, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ- Robbery case at Shivamogga railway station, accused remanded in judicial custody
ಶಿವಮೊಗ್ಗದ ರೈಲ್ವೆ ಸ್ಟೇಷನಲ್ಲಿ ದರೋಣೆ ನಡೆದಿದೆ ಎಂದು ಪ್ರಯಾಣಿಕರನ್ನ ಬೆಚ್ಚಿಬೀಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನ ಶಿವಮೊಗ್ಗ ರೈಲ್ವೆ ರಕ್ಷಣಾ ಪಡೆ (RPF) ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಶಿವಮೊಗ್ಗ (SME) ಹಾಲ್ಟ್ ನಲ್ಲಿ ಬೋಗಿ ಒಳಗೆ ನುಗ್ಗಿ ದರೋಡೆ ಪ್ರಕರಣ ನಡೆದಿತ್ತು.11.02.2026 ರ ಬೆಳಗಿನ ಜಾವ 00:20 ಗಂಟೆ ಸುಮಾರಿಗೆ ಶಿವಮೊಗ್ಗ (SME) ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ ದರೋಡೆ ಘಟನೆ ಸಂಭವಿಸಿತ್ತು.
10.02.2026 ರಂದು ಸುಮಾರು 23:55 ಗಂಟೆಗೆ, ರೈಲು ಸಂಖ್ಯೆ 16582 (ಶಿವಮೊಗ್ಗ– ಯಶವಂತಪುರ ಎಕ್ಸ್‌ಪ್ರೆಸ್), S-9 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಯಶವಂತಪುರ ರೈಲು ನಿಲ್ದಾಣದ ಕಡೆಗೆ ಹೋಗುತ್ತಿದ್ದ ವೇಳೆ(SME) ಹಾಲ್ಟ್ ರೈಲ್ವೆ ನಿಲ್ದಾಣದ ಬಳಿ, ಅಪರಿಚಿತ ವ್ಯಕ್ತಿಯೊಬ್ಬ ಪ್ರಯಾಣಿಕನಿಗೆ ಚಾಕುವಿನಿಂದ ಬೆದರಿಸಿ ಬಲವಂತವಾಗಿ ೧೭,೦೦೦/- ರೂ ಮೌಲ್ಯದ ಮೊಬೈಲ್ ಫೋನ್ (ಮೊಟೊರೊಲಾ G-96) ದರೋಡೆ ನಡೆಸಿದ್ದನು. ದರೋಡೆ ನಡೆಸಿ ತಕ್ಷಣ ಚಲಿಸುವ ರೈಲಿನಿಂದ ಹಾರಿ ಸ್ಥಳದಿಂದ ಪರಾರಿಯಾಗಿದ್ದಾನು.
ದೂರಿನ ಆಧಾರದ ಮೇಲೆ, ಸರ್ಕಾರಿ ರೈಲ್ವೆ ಪೊಲೀಸರು/ಶಿವಮೊಗ್ಗ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತ್ವರಿತವಾಗಿ ಕೈಗೊಂಡ ಶಿವಮೊಗ್ಗ ರೈಲ್ವೆ ರಕ್ಷಣಾ ಪಡೆ (RPF)ಯ ಕಮಾಂಡರ್ ಬಿ.ಕೆ ಪ್ರಕಾಶ ನೇತೃತ್ವದಲ್ಲಿ ಮಹೇಶ್, ಸಬ್-ಇನ್ಸ್‌ಪೆಕ್ಟರ್/ಜಿಆರ್‌ಪಿ, ಅವರ ತಂಡಗಳೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಕಣ್ಗಾವಲು ಮತ್ತು ಕ್ಷೇತ್ರ ವಿಚಾರಣೆ ನಡೆಸಿದರು.
ಆರೋಪಿ ರಾಜೀವ್ ಗಾಂಧಿ ನಿವಾಸಿ ಪರಶುರಾಮ್ @ ಚಿಂಗಾರಿ (29 ವರ್ಷ)ರನ್ನಬಂಧಿಸಲಾಗಿತ್ತು. ಕದ್ದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದನು. ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಹುಸೇನ್ ಪತ್ತೆಹಚ್ಚಿ ಬಂಧಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಯಾಣಿಕರು ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ರೈಲ್ವೆ ಸಹಾಯವಾಣಿ 139 ಗೆ ವರದಿ ಮಾಡಲು ಸೂಚಿಸಲಾಗಿದೆ.
Robbery case at Shivamogga railway station, accused remanded in judicial custody

