SUDDILIVE || SHIVAMOGGA
ಸೂಳೆಬೈಲಿಗೆ ಹೋಗಿ ಬಂದ ಮೇಲೆ ಎರಡುದಿನ ನಿದ್ದೆ ಮಾಡಿಲ್ಲ, ರಾಜ್ಯದಲ್ಲಿ ಹಿಂದೂ ಕಗ್ಗೊಲೆಯಾಗ್ತಾಯಿದೆ, ರಾಜ್ಯದಲ್ಲಿ ಸರ್ಕಾರ ಸತ್ತಿದೆ-ಗುಡುಗಿದ ಈಶ್ವರಪ್ಪ-I haven't slept for two days after returning from Sulebailu, Hindus are being massacred in the state, the government is dead in the state - Thundered Eshwarappa
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಕೇಂದ್ರದ ಹೈ ಕಮಾಂಡ್ ಸಹ ಸತ್ತು ಹೋಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ಕೋಟಿ ಜನರ ಪರವಾಗಿ ಸಿಎಂ,ಡಿಸಿಎಂ ಫ್ರೀಡಂ ಫಾರ್ಕ್ ನಲ್ಲಿ ಧರಣಿ ಕುಳಿತುಕೊಳ್ಳಲಿ, ಧರಣಿ ಕೂತಾಗ ಆದ್ರೂ ಸತ್ತಿರುವ ಹೈಕಮಾಂಡ್ ಗೆ ಜೀವ ಬರಬಹುದು. ಸತ್ತೋಗಿರೋ ರಾಜ್ಯ ಸರ್ಕಾರದಿಂದ ಏನು ಅಭಿವೃದ್ದಿ ಆಗುತ್ತಿಲ್ಲ. ರಾಜ್ಯ ಸರ್ಕಾರ ಸತ್ತ ಹೋಗಿರೋ ಪರಿಣಾಮ ರಾಜ್ಯದಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆ ಜಾಸ್ತಿ ಆಗ್ತಿದೆ ಎಂದು ಗುಡುಗಿದರು.
ಬೀಡಾ ಅಂಗಡಿಗಳಲ್ಲಿ ಗಾಂಜಾ ಸಿಕ್ತಾಯಿದೆ
ರಾಜ್ಯದ ಎಲ್ಲಾ ಕಡೆ ಹಿಂದೂಗಳ ಕಗ್ಗೋಲೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇನ್ನೂ ಎಷ್ಟು ಕೂಲೆ ಆಗಬೇಕು ಹೇಳಿ? ಸರ್ಕಾರವೇ ಇಲ್ಲ ಎಂದು ಕೊಂಡು ರಾಷ್ಟ್ರದ್ರೋಹಿಗಳು ಭಯ ಇಲ್ಲದೇ ನೃತ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮುಸ್ಲಿಂಮರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಒಂದೆಡೆ ಕೊಲೆ ಸೂಲಿಗೆ, ಮತ್ತೊಂದೆಡೆ ಗಾಂಜಾ ಡ್ರಗ್ಸ್ ಮಾಫಿಯ ಹೆಚ್ಚಾಗಿದೆ. ಬೀಡಾ ಅಂಗಡಿಯಲ್ಲಿ ಗಾಂಜಾ ಸಿಗುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ,ಸಿಎಂ ಅಧಿಕಾರದ ದಾಹದಿಂದ ರಾಜ್ಯದ ಅಭಿವೃದ್ದಿ ಕುಂಠಿತ ಆಗಿದೆ. ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಶೂನ್ಯವಾಗಿದೆ. ದಲಿತ ಮುಖ್ಯಮಂತ್ರಿ ನೋ ಅಥವಾ ನಿಮಗೆ ಇಷ್ಟ ಬಂದವರಿಗೆ ಸಿಎಂ ಕೊಡಿ, ದೆಹಲಿಗಾದ್ರೂ ಹೋಗಿ ಸ್ವರ್ಗಕ್ಕಾದ್ರೂ ಹೋಗಿ ರಾಜ್ಯದ ಜನ ನರಕದಲ್ಲಿದ್ದಾರೆ. ಶಿವಮೊಗ್ಗದ ಸೂಳೆಬೈಲಿನಲ್ಲಿ ಸಂಕೇತನ ಹತ್ಯೆ ಆಯ್ತು, ಸಿಎಂ ಡಿಸಿಎಂ ಗೆ ಕೇಳುತ್ತೇನೆ ನಿಮ್ಮ ಮಗನಿಗೆ ಹೀಗ್ ಆಗಿದ್ರೆ ಏನ್ ಮಾಡ್ತಿದ್ರಿ? ಎಂದು ಪ್ರಶ್ನಿಸಿದರು.
ಸೂಳೆಬೈಲಿಗೆ ಹೋದ ಬಂದ ಮೇಲೆ ನಿದ್ದೆ ಮಾಡಿಲ್ಲ
ಸ್ಪಷ್ಟವಾಗಿ ಯಾರು ಈ ಘಟನೆ ಮಾಡಿದ್ದಾರೆ ಅಂತ ಕಾಣುತ್ತಿದೆ. ಸೂಳೆಬೈಲಿಗೆ ಹೋಗಿ ಬಂದ ಮೇಲೆ ಎರಡು ದಿನ ನಿದ್ದೆ ಮಾಡಿಲ್ಲ ನಾನು, ಮಕ್ಕಳನ್ನ ಬಿಟ್ಟು ಕೊಲೆ ಮಾಡಿಸುತ್ತಿದ್ದಾರೆ ಷಂಡರು, ಷಂಡ ಸರ್ಕಾರ ,ಹೇಡಿ ಸರ್ಕಾರ ರಾಜ್ಯದಲ್ಲಿರೋದು. ನಿಮ್ಮ ಮಕ್ಕಳ ಕೂಲೆಯಾದರೇ ಆಗ ಎಚ್ಚೇತ್ತುಕೊಳ್ಳುತ್ತೀರಾ? ಆ ಪರಿಸ್ಥಿತಿ ಬರೋದು ಬೇಡ ಅಂತ ನಾನು ಬೇಡ್ಕೊಳ್ತೇನೆ ಎಂದು ಹೇಳಿದರು.
ಸತ್ತೋಗಿರೋ ಸರ್ಕಾರವನ್ನ ವಿರೋಧ ಪಕ್ಷ ಎಷ್ಟು ಶಂಖ ಹೊಡೆದರು ಏನು ಪ್ರಯೋಜನ ಇಲ್ಲ. ರಾಜ್ಯದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಸ್ಲಿಂಮರು ಕೊಲೆ ಮಾಡುತ್ತಿದ್ದರೆ ಉರ್ದು ಪತ್ರಿಕೆ ಪ್ರಿಂಟ್ ಮಾಡದೇ ಇರ್ತಾರಾ? ಹೈಕಮಾಂಡ್ ಬಾಯಿ ಬಿಡಬೇಕು ಹೈಕಮಾಂಡ್ ಏನು ಮೂಖರಾ? ರಾಜ್ಯ ಸರ್ಕಾರ ವಿಫಲ ಆಗಿರೋದಕ್ಕೆ ನೂರು ಉದಾಹರಣೆ ನೀಡಬಹುದು. ಆಶ್ರಯ ಮನೆಗಳಿಗೆ 12 ಕೋಟಿ ನೀಡೋಕೆ ಇವರ ಕೈಯಲ್ಲಿ ಆಗ್ತಿಲ್ಲ ಎಂದರು.
ಬಜೆಟ್ ನಲ್ಲಿ ಗ್ಯಾರೆಂಟಿ ಕೊಡಲ್ಲ ಎಂದು ಘೋಷಿಸಲಿ
ಗ್ಯಾರಂಟಿ ಹೊರೆ ಆಗ್ತಿದೆ ಎನ್ನುವ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಂಡಕಾರಿದ ಈಶ್ವರಪ್ಪ, ಗ್ಯಾರಂಟಿ ಹೊರೆಯಾಗುತ್ತಿದೆ. ಆದ್ರೂ ತೂಗಿಸುತ್ತೇವೆ ಎಂದಿದ್ದಾರೆ. ಮಾನಾ ಮರ್ಯಾದೆ ಇಲ್ಲದೆ ಇರೋ ವ್ಯಕ್ತಿಗಳು ಹೇಳಿಕೆಗಳಿವು. ಒಂದು ಕಡೆ ಸ್ಪಷ್ಟವಾಗಿ ಹೇಳ್ತಾರೆ ಗ್ಯಾರಂಟಿ ಹೊರೆ ಅಂತ. ಮತ್ತೊಂದು ಕಡೆ ಹೇಳ್ತಾರೆ ತೂಗಿಸುತ್ತಿದ್ದೇವೆ ಅಂತ. ಸುಪ್ರೀ ಕೋರ್ಟ್ ಬೇಡಪ್ಪ ಕೊಡಬೇಡಿ ಅಂದಿದೆ. ಈ ಬಜೆಟ್ ನಲ್ಲಾದ್ರೂ ನಾವು ಗ್ಯಾರಂಟಿ ಕೊಡಲ್ಲ ಅಂತ ಸರ್ಕಾರ ಘೋಷಣೆ ಮಾಡಿಕೊಳ್ಳಲಿ ಎಂದು ಸವಾಲು ಎಸೆದರು.
ನಾವು ಅಧಿಕಾರಕ್ಕೆ ಬರಬೇಕಿತ್ತು ಹಾಗಾಗಿ ಜನರ ಮೂಗಿಗೆ ತುಪ್ಪ ಹಚ್ಚಿದ್ದೇವು ಜನ ಮತ ನೀಡಿದ್ರು, ಇಲ್ಲಿ ತನಕ ಇಷ್ಟು ಮಾಡಿದ್ದೇವೆ ಇನ್ನೂ ಮುಂದೆ ಕೊಡಲ್ಲ ಅಂತ ಹೇಳಿ. ಗ್ಯಾರಂಟಿ ನಿಲ್ಲಿಸಿ ಎಲ್ಲಾ ಅಭಿವೃದ್ದಿ ಮಾಡ್ತೇವೆ ಅಂತ ಹೇಳಿ. ಜನ ಏನು ನಿಮಗೆ ಕೇಳಿರಲಿಲ್ಲ ಗ್ಯಾರಂಟಿ ಕೊಡಿ ಅಂತ ಎಂದು ತಿಳಿ ಹೇಳಿದರು.
I haven't slept for two days after returning from Sulebailu
