SUDDILIVE || SHIVAMOGGA
ಕುತೂಹಲ ಮೂಡಿಸಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರ ವಿರುದ್ಧ ಕಾರ್ಯಕರ್ತರೊಬ್ಬರ ಪೋಸ್ಟ್- An activist's post against the former BJP district president arouses curiosity
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕನಿಂದಲ್ಲೇ ಬಿಜೆಪಿ ನಾಯಕನಿಗೆ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ. ಶಿವಮೊಗ್ಗ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷನಿಂದ ಕೊಲೆ ಬೆದರಿಕೆ ಆರೋಪವನ್ನ ಅದೇ ಪಕ್ಷದ ಕಾರ್ಯಕರ್ತ ಮಾಡಿರುವುದು ಕುತೂಹಲ ಮೂಡಿಸಿದೆ.
ಫೇಸ್ ಬುಕ್ ನಲ್ಲಿ ಕೊಲೆ ಬೆದರಿಕೆ ಬಗ್ಗೆ ಪೋಸ್ಟ್ ಹಾಕಲಾಗಿದೆ. ಬಿಜೆಪಿಯ ಐಟಿ ಸೆಲ್ ನಲ್ಲಿ ಕಾರ್ಯ ನಿರ್ವಹಿಸಿದ ತೀರ್ಥೆಶ್ ಎಂಬುವರಿಗೆ ಟಿಡಿ ಮೇಘರಾಜ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಮಾಡಿರುವುದು ಜಿಲ್ಲ ಬಿಜೆಪಿಯಲ್ಲಿ ಎಲ್ಲಾವೂ ಸರಿಯಿಲ್ಲ ಎಂಬುದನ್ನ ಸ್ಪಷ್ಟಪಡಿಸುತ್ತಿದೆ. ಶಿಸ್ತಿನ ಪಕ್ಷದಲ್ಲಿ ಈ ಆರೋಪ ಸಂಚಲನ ಮೂಡಿಸಿದೆ.
ಹಿಂದಿನ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಇಬ್ಬರು ನಾಯಕರು ಈ ಬಾರಿ ಚುನಾವಣೆಗೂ ಮುನ್ನ ಮಾಜಿ ಜಿಲ್ಲಾಧ್ಯಕ್ಷರ ವಿರುದ್ಧ ಪ್ರಾಮಾಣಿಕ ಕಾರ್ಯಕರ್ತನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತೀರ್ಥೇಶ್ ದೂರಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಜಿ ಸಿಎಂ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲಿಯೇ ಪಕ್ಷದ ಕಾರ್ಯಕರ್ತರ ನಡುವಿನ ಆರೋಪ ಮತ್ತು ಪ್ರತ್ಯಾರೋಪ ಕುತೂಹಲ ಮೂಡಿಸಿದೆ.
An activist's post against the former BJP district president arouses curiosity

