ಸ್ನೇಹಿತನ ಮರ್ಡರ್-Friend was murdered by slitting his throat.

 SUDDILIVE || SHIVAMOGGA

ಸ್ನೇಹಿತನ ಮರ್ಡರ್-Friend was murdered by slitting his throat

Slitting, throat

ಸ್ನೇಹಿತರ ನಡುವೆಯೇ ಗಲಾಟೆಯಲ್ಲಿ ಓರ್ವನನ್ನ ಚಾಕುವಿನಿಂದ ಇರಿದುಕೊಂದಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ನಿನ್ನೆ ರಾತ್ರಿ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಫೆ.19 ರಂದು ತಡರಾತ್ರಿ ನಡೆದ ಘಟನೆ ನಡೆದಿದ್ದು ಘಟನೆಯಲ್ಲಿ ಗಾಯಗೊಂಡಿದ್ದ ಸ್ನೇಹಿತ ಚಿಕಿತ್ಸೆ ಫಲಕಾರಿಯಾಗಿದೆ ಅಸು ನೀಗಿದ್ದಾನೆ. 

ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ 2 ದಿನದ ಬಳಿಕ ಸಾವಾಗಿದೆ. ಮೃತ ವ್ಯಕ್ತಿಯನ್ನ ತೌಫಿಕ್ (40) ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದ ಆರೋಪಿಯನ್ನ ಸಯ್ಯದ್ ಅನ್ವರ್(35) ಎಂದು ಗುರುತಿಸಲಾಗಿದೆ. 

ಆರೋಪಿ ಸಯ್ಯದ್ ಅನ್ವರ್ ಶಿವಮೊಗ್ಗ ನಗರದ ಇಮಾಮ್ ಬಾಡದ ನಿವಾಸಿಯಾಗಿದ್ದಾನೆ. ಇಬ್ಬರೂ ಬೆಕ್ಕಿನಕಲ್ಮಠದ ಬಳಿ ಗಾರೆ ಕೆಲಸಕ್ಕೆ ಹೋಗುತ್ತಿದ್ದರು.  ಕೂಲಿ ಕೆಲಸ ಮಾಡಿಕೊಂಡಿದ್ದ ತೌಫಿಕ್ ಮತ್ತು ಸಯ್ಯದ್ ಅನ್ವರ್ ಫೆ.19 ರಂದು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ವೇಳೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಅನ್ವರ್ ಚಾಕುವಿನಿಂದ ತೌಫಿಕ್ ನ ಕುತ್ತಿಗೆಗೆ ಚಾಕು ಇಳಿಸಿದ್ದ ಎರಡು ದಿನಗಳ ಹಿಂದೆ ಶಿವಮೊಗ್ಗ ನಗರದ ಬೆಕ್ಕಿನ ಕಲ್ಮಠ ಬಳಿ ನಡೆದಿದೆ. 

ತಡರಾತ್ರಿಯಲ್ಲಿ ಕುತ್ತಿಗೆ ಬಳಿ ಕೈ ಇಟ್ಟುಕೊಂಡು, ತೌಫಿಕ್ ಬಿಹೆಚ್ ರಸ್ತೆಗೆ ಬಂದು ಕುಳಿತಿದ್ದನು. ಈ ವೇಳೆ ಗಮನಿಸಿದ 112 ಪೊಲೀಸರು,  ತೌಫಿಕ್ ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದ ತೌಫಿಕ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿಯೇ ಸಾವಾಗಿದೆ. ತೌಫಿಕ್ ಮೃತದೇಹ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಕೋಟೆ ಪೊಲೀಸರು ಆರೋಪಿ ಸಯ್ಯದ್ ಅನ್ವರ್ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Friend was murdered by slitting his throat

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close