ಅರ್ಷದ್, ಅನಂತ ಹಾಗೂ ಜಗದೀಶ...

SUDDILIVE || SHIVAMOGGA

ಅರ್ಷದ್, ಅನಂತ ಹಾಗೂ ಜಗದೀಶ...!Arshad, Anantha and Jadeesha

Anantha, jagadeesh

ಬ್ಯಾಂಕ್ ಖಾತೆ ಆರಂಭಿಸಲು 2000 ರೂ ಕಮಿಷನ್ ಕೊಡುವುದಾಗಿ ಆಸೆ ತೋರಿಸಿ 82 ಕೋಟಿಗೂ ಹಣ ಲಪ್ಟಾಯಿಸಿದ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. 

2024 ರಲ್ಲಿ ವಿಲ್ಸನ್ ಎಂಬಾತ ಎಪಿಎಂಸಿಯಲ್ಲಿ ಟೆಕ್ನೋ ರಿಂಗ್ಸ್ ನಲ್ಲಿ ಕೆಲಸದಲ್ಲಿದ್ದಾಗ ಜಗದೀಶ್ ಎಂಬಾತನು ಅದೇಕಂಪನಿಯಲ್ಲಿದ್ದ. ಜಗದೀಶನು  ಬ್ಯಾಂಕ್‌ ಖಾತೆಗಳನ್ನು ಓಪನ್‌ ಮಾಡಿ ಕೊಟ್ಟಲ್ಲಿ  ಕಮಿಷನ್ ನೀಡುವುದಾಗಿ ನಂಬಿಸಿ, ವಿಲ್ಸನ್‌ ರವರ ಖಾತೆಯನ್ನು ಪಡೆದುಕೊಂಡಿದ್ದನು. ಆತನ ಹೆಸರಿನಲ್ಲಿ ಬ್ಯಾಂಕ್ ಆಫ್  ಮಹಾರಾಷ್ಟ್ರ ಮತ್ತು ಎಸ್ ಬಿಐ ಬ್ಯಾಂಕ್ ನಲ್ಲಿ ಅಕೌಂಟ್ ಆರಂಭಿಸಿ ಜಗದೀಶನಿಗೆ ಕೊಟ್ಟಿದ್ದನು.

ಜಗದೀಶನಿಗೆ ಕೊಟ್ಟ ವಿಲ್ಸನ್ ನ ಬ್ಯಾಂಕ್ ಅಕೌಂಟ್ ಗಳು ಸೈಬರ್ ಕ್ರೈಂಗೆ ಸೀಜ್ ಆಗಿದ್ದವು. ಇದನ್ನ ಬ್ಯಾಂಕ್ ಸಿಬ್ಬಂದಿಗಳು ವಿಲ್ಸನ್ ಬಳಿ ಹೇಳಿಕೆ ಪಡೆದುಕೊಂಡು ಸಹಿ ಮಾಡಿಕೊಂಡು ಹೋಗಿದ್ದರು. 

ಪ್ರಕರಣದಲ್ಲಿ ಆರೋಪಿ ಪತ್ತೆ ಬಗ್ಗೆ ಎಸ್ಪಿ ನಿಖೀಲ್ ಬಿ ಅಡಿಷನಲ್ ಎಸ್ಪಿ ಕಾರಿಯಪ್ಪ ಎ ಜಿ ಹಾಗೂ ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಪಿಐ ಮಂಜುನಾಥ್ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ ಎನ್,  ಎಎಸ್ಐ, ಕಿರಣ್‌ ಕುಮಾರ್‌, ಚಂದ್ರಶೇಖರ ಸಿಹೆಚ್‌ಸಿ, ಗಿರೀಶ ಸ್ವಾಮಿ,  ಆಂಡ್ರ್ಯೂಸ್‌ , ಮತ್ತು ಗೌತಮ್‌ ಜಿ ಎನ್ ಸಿಪಿಸಿ  ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. 

ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಎ1. ಜಗದೀಶ್ ಆರ್. ಸಿ ತಂದೆ ಚಾಮಯ್ಯ, 43 ವರ್ಷ, ಎಲೆಕ್ಟ್ರಾನಿಕ್ಸ್  ವ್ಯಾಪಾರ ಕೆಲಸ, ವಾಸ ಶಾರದಮ್ಮ ಕಾಂಪೌಂಡ್, ಶರಾವತಿ ನಗರ, ಶಿವಮೊಗ್ಗ. ಎ2. ಅರ್ಷಾದ್ ತಂದೆ ಅಮೀರ್, 39 ವರ್ಷ,  ಮೀನು ವ್ಯಾಪಾರಿ, ವಾಸ ಶಂಕರಪುರ,3 ನೇ  ಕ್ರಾಸ್, ಚಿಕ್ಕಮಗಳೂರು. ಎ3. ಅನಂತ. ಟಿ ತಂದೆ ತಿಪ್ಪೇಶ, 34 ವರ್ಷ ,  ಮಾರ್ಕೆಟಿಂಗ್ ನೆಟ್  ವರ್ಕ್ ಕೆಲಸ , 6 ನೇ ಮೈನ್ ರಸ್ತೆ, ವಜ್ರೇಶ್ವರಿ ದೇವಸ್ಥಾನದ ಹತ್ತಿರ, ಹೊಸಮನೆ ಶಿವಮೊಗ್ಗರವರನ್ನು ಬಂಧಿಸಿದೆ. 

ಆರೋಪಿತರ ಬಳಿ  ವಿವಿಧ ಹೆಸರಿನಲ್ಲಿರುವ 15 Mule accounts ಪತ್ತೆಯಾಗಿರುತ್ತವೆ. ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ  ಸುಮಾರು 82,00,15,712/- ರೂ ಗೂ  ಹೆಚ್ಚು ಹಣ ವಂಚನೆಯಾಗಿರುತ್ತದೆ. ಆರೋಪಿತರು ವಂಚನೆಗೆ ಬಳಿಸಿದ 15 Mule accounts ಗಳಲ್ಲಿ ಒಟ್ಟು   14,71,91,174/- ರೂ ಗೂ  ಹೆಚ್ಚು ಹಣ ವರ್ಗಾವಣೆಯಾಗಿದೆ.  ಅಲ್ಲದೆ ಸದರಿ ಆರೋಪಿಗಳಿಂದ ಒಟ್ಟು  ಕೃತ್ಯಕ್ಕೆ ಬಳಸಿದ 1) 02 Mobiles, 2) 11 ATM card, 3) 09 QR Code Scanner, 4) 15  Airtel SIM cards, 5) 15 Mule  Bank Accounts ವಶಪಡಿಸಿಕೊಳ್ಳಲಾಗಿದೆ. ನಂತರ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಿರುತ್ತೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿತರ ಪತ್ತೆ ಕ್ರಮಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

Arshad, Anantha and Jadeesha

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close