ಕುತೂಹಲದ ಹಂತ ತಲುಪಿದ ಸ್ವಾತಿ ಆತ್ಮಹತ್ಯೆ ಪ್ರಕರಣ- Swathi's suicide case reaches a curious stage

 SUDDILIVE || SHIVAMOGGA

ಕುತೂಹಲದ ಹಂತ ತಲುಪಿದ ಸ್ವಾತಿ ಆತ್ಮಹತ್ಯೆ ಪ್ರಕರಣ- Swathi's suicide case reaches a curious stage    

Swathi, case

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಭದ್ರಾಪಡೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದ ಜಗದೀಶ್ ನ ಆತ್ಮಹತ್ಯೆ ಬೆನ್ನಲ್ಲೇ ಆತನ ಪತ್ನಿ ಸ್ವಾತಿ ಪೊಲೀಸ್ ಮೋಹನನ ಕಿರುಕುಳ ಎಂದು ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಬಂಧನವಾಗಿದೆ.

ಮನೋಜ್ ಎಂಬಾತ ಈಗ ಭದ್ರಾವತಿ ಪೊಲೀಸರ ಅತಿಥಿಯಾಗಿರುವುದು ಕುತೂಹಲ ಮೂಡಿಸಿದೆ. ಮನೋಜ್ ಮತ್ತು ಸ್ವಾತಿ ನಡುವಿನ ಮೊಬೈಲ್ ಸಂಭಾಷಣೆ ಈ ಪ್ರಕರಣಕ್ಕೆ ತಿರುವು ಪಡೆದುಕೊಂಡಿದೆ. ಪೊಲೀಸ್ ತನಿಖೆಯಲ್ಲಿ ಪ್ರೀತಿ ಹಾಗೂ ಅವರಿಬ್ಬರ ನಡುವಿನ ಸಂಬಂಧಗಳು ಪತ್ತೆಯಾಗಿದೆ. ಈ ಸಂಬಂಧ ಒಪ್ಪಿತವೋ, ಅನೈತಿಕವೋ ಎಂಬುದು ತಿಳಿದು ಬರಬೇಕಿದೆ. 

ಒಟ್ಟಿನಲ್ಲಿ ಮನೋಜನ ಬಂಧನ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ಅಂದ ಮಾತ್ರಕ್ಕೆ ಈ ಪ್ರಕರಣದಲ್ಲಿ ಪೊಲೀಸ್ ಮೋಹನ್ ಒಬ್ಬನೇ ಎಫ್ಐಆರ್ ನಲ್ಲಿ ಆರೋಪಿತನಾಗಿದ್ದರೂ ತನಿಖೆ ಹಂತದಲ್ಲಿ ಮನೋಜ ಎಂಬಾತನ ಮದ್ಯಪ್ರವೇಶ ಮತ್ತಷ್ಟು ಕುತೂಹಲದ ಹಂತಕ್ಕೆ ತಲುಪಿ ರೋಚಕತೆ ಮೂಡಿಸಿದೆ. 

ಹಾಗಾದರೆ, ಪೊಲೀಸ್ ಮೋಹನ್ ಸೇಫಾ ಎಂಬ ಅನುಮಾನ ಓದುಗರಲ್ಲಿ ಮೂಡಬಹುದು. ಪೊಲೀಸರು ಸೇಫ್ ಎಂಬುದನ್ನ ಸ್ಪಷ್ಟಪಡಿಸೊಲ್ಲ. ಕಾರಣ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ, ಈಗಲೇ ನಿರ್ಧಾರಕ್ಕೆ ಬರಲಿಕ್ಕೆ ಆಗೊಲ್ಲ ಎನ್ನುತ್ತಾರೆ ಎಸ್ಪಿ ನಿಖಿಲ್. ಸಧ್ಯಕ್ಕೆ ಪೊಲೀಸ್ ಮೋಹನ್ ಅಮಾನತು ಆಗಿದ್ದಾರೆ. ಅವರ ಪತ್ತೆಗೆ ತಂಡ ರಚನೆಯಾಗಿದೆ. ಮೋಹನನಿಗೂ ಮನೋಜನಿಗೂ ಸಂಬಂಧವಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಒಟ್ಟಿನಲ್ಲಿ ತನಿಖೆಯ ಹಂತದಲ್ಲಿ ಮನೋಜನ ಪ್ರವೇಶ ಕುತೂಹಲಕಾರಿಯಾಗಿದೆ. 

Swathi's suicide case reaches a curious stage

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close