SUDDILIVE || SHIVAMOGGA
ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿ ರಣೋತ್ಸಾಹ-BJP's enthusiasm before election announcement
ಯಾವ ಪಕ್ಷಗಳು ಏನು ಮಾಡುತ್ತಿವೆಯೋ ಗೊತ್ತಿಲ್ಲ. ಆದರೆ ಬಿಜೆಪಿ ಮಾತ್ರ ಸ್ಥಳೀಯ ಚುನಾವಣೆಗಾಗಿ ಸಾಲು ಸಾಲು ಸರಣಿ ಸಭೆಗಳನ್ನ ಆರಂಭಿಸಿದೆ. ಕಾರ್ಯಕರ್ತರ ಚುನಾವಣೆ ಎಂದು ಹೆಸರಿರುರುವ ಜಿಪಂ, ತಾಪಂ ಗ್ರಾಪಂ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆಗೆ ಬಿಜೆಪಿ ಕಚೇರಿ ಇಂದು ಸಾಕ್ಷಿಯಾಗಿವೆ.
ಡಿಸಿಎಂ ಡಿಕೆ ಶಿವಕುಮಾರ್ ಸ್ಥಳೀಯ ಚುನಾವಣೆ ನಡೆಸಲು ಸರ್ಕಾರ ಸಿದ್ದ ಎಂದು ಹೇಳಿರುವ ಬೆನ್ನಲ್ಲೇ ಬಿಜೆಪಿ ತಾನು ಚುನಾವಣೆ ಗೆಲ್ಲುವ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಅವರ ನೇತೃತ್ವದಲ್ಲಿ ನಗರ ಮಹಾಮಂಡಲದ ಶಹರ ಘಟಕದ ವಿಶೇಷ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಂಘಟನಾತ್ಮಕವಾಗಿ ಚುನಾವಣೆ ಗೆಲ್ಲುವ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಅವರಿಗೆ ಸಲಹೆ ಸೂಚನೆ ನೀಡಿದ್ದಾರೆ.
ಅವರ ಸೂಚನೆಯ ಮೇರೆಗೆ ಮುಂದಿನ ಕಾರ್ಯಕ್ರಮ ರೂಪಿಸಲು ಪಕ್ಷ ಸಜ್ಜುಗೊಂಡಿದೆ. ಅಲ್ಲಿಗೆ ಸ್ಥಳೀಯ ಚುನಾವಣೆಗೆ ಬಿಜೆಪಿ ತನ್ನ ಕಸರತ್ತನ್ನ ಆರಂಭಿಸಿದಂತಾಗಿದೆ. ವಿಶೇಷವೇನೆಂದರೆ ಪಕ್ಷದ ಕಚೇರಿಯಲ್ಲೇ ಖಾಸಗಿ ಹೋಟೆಲ್ ನಲ್ಲಿ ಆಯೋಜನೆಗೊಳ್ಳುತ್ತಿದ್ದ ರೀತಿಯಲ್ಲಿ ಸಭೆ ಆಯೋಜಿಸಿರುವುದು ಮತ್ತೊಂದು ವಿಶೇಷವಾಗಿತ್ತು.
ಅಲ್ಲಿಗೆ ಬಿಜೆಪಿ ಸ್ಥಳೀಯ ಚುನಾವಣಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ಎಂದರೆ ಬಿಜೆಪಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಚುನಾವಣೆ ಘೋಷಣೆಗೂ ಮುನ್ನ ಪಕ್ಷದ ರಣ ಊಲ್ಲಾಸವನ್ನ ಮೆಚ್ಚಲೇ ಬೇಕಾಗಿದೆ.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ, ವಿಧಾನಪರಿಷತ್ ಶಾಸಕರಾದ ಡಿ ಎಸ್ ಅರುಣ್, ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನಪರಿಷತ್ ಶಾಸಕರಾದ *ಡಾ. ಧನಂಜಯ್ ಸರ್ಜಿ, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್ ದತ್ತಾತ್ರಿ*, ಜಿಲ್ಲಾ ಮಾಜಿ ಅಧ್ಯಕ್ಷರಾದ, ಟಿ ಡಿ ಮೇಘರಾಜ್, ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಉ.ಕ ಮಾಜಿ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ ಬಿ ಹರಿಕೃಷ್ಣ, ಮಾಲತೇಶ್ ಸಿ ಹೆಚ್, ಶಿವಮೊಗ್ಗ ನಗರ ಅಧ್ಯಕ್ಷ ರಾದ ಮೋಹನ್ ರೆಡ್ಡಿ, ಹಾಗೂ ಅಪೇಕ್ಷಿತರು ಉಪಸ್ಥಿತರಿದ್ದರು....
BJP's enthusiasm before election announcement

