ಗ್ಯಾರಂಟಿ ಸ್ಕೀಮ್ ಗಳ ಪೂರೈಕೆಗೆ ದರ ಏರಿಕೆ-ತೇಜಸ್ವಿ ಸೂರ್ಯ-Price hike for supply of guarantee schemes - Tejaswi Surya

 SUDDILIVE ||SHIVAMOGGA

ಗ್ಯಾರಂಟಿ ಸ್ಕೀಮ್ ಗಳ ಪೂರೈಕೆಗೆ ದರ ಏರಿಕೆ-ತೇಜಸ್ವಿ ಸೂರ್ಯ-Price hike for supply of guarantee schemes - Tejaswi Surya    

Tejaswi, surya


ರಾಜ್ಯದಲ್ಲಿ ಮೆಟ್ರೋ ದರ ಏರಿಕೆ ಮಾಡಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ,  ದೇಶದಲ್ಲಿ ಎಲ್ಲೂ ಇಲ್ಲದ ಮೆಟ್ರೋ ರೈಲು ದರ ರಾಜ್ಯದಲ್ಲಿ ಏಕೆ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಸಿ 8 ತಿಂಗಳು ಸಹ ಆಗಿಲ್ಲ. ಅದಾಗಲೇ ಮತ್ತೆ ಮೆಟ್ರೋ ರೈಲು ದರ ಏರಿಸಿದ್ದಾರೆ. ಸೋಮವಾರದಿಂದ ಮತ್ತೆ ಮೆಟ್ರೋ ದರ ಏರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. 8-10 ತಿಂಗಳ ಹಿಂದಷ್ಟೇ BMRCL ನವರು ಶೇ. 72 ರಷ್ಟು ದರ ಏರಿಸಿದ್ದರು. ಬೆಂಗಳೂರು ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂದು ಕುಖ್ಯಾತಿ ಪಡೆದಿದೆ. ಈ ಹಿಂದೆ ಮೆಟ್ರೋ ಕಟ್ಟಲು ಸರ್ಕಾರ ಸಾಲ ಮಾಡುತ್ತಿತ್ತು. ಈಗ ಮೆಟ್ರೋ ರೈಲಿನಲ್ಲಿ ಓಡಾಡಲು ಜನರು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು. 

ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಸಮನ್ವಯತೆ ಮಾಡದೇ ಏಕಾಏಕೀ ಶೇ. 5 ರಷ್ಟು ದರ ಏರಿಕೆ ಮಾಡಿದೆ. ರಾಜ್ಯ ಸರ್ಕಾರ ಕೇವಲ ದರ ಏರಿಕೆ ರಾಜಕಾರಣದಲ್ಲಿ ತೊಡಗಿದೆ. 

ಕೇಂದ್ರ ಸರ್ಕಾರ ದರ ಏರಿಕೆ ಮಾಡಿದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿ, ಡಿ.ಕೆ. ಶಿವಕುಮಾರ್ ಅವರು ಈ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಲಿ, ಅದು ಬಿಟ್ಟು ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡೋದು ಬೇಡ ಎಂದು ಸಲಹೆ ನೀಡಿದರು. 

ಗ್ಯಾರಂಟಿ ಸ್ಕೀಮ್ ಗಳನ್ನು ಮಾಡಿರುವ ರಾಜ್ಯ ಸರ್ಕಾರ ಅದಕ್ಕೆ ದುಡ್ಡು ಹೊಂದಿಸಲು ಈ ರೀತಿ ದರ ಏರಿಕೆ ಮಾಡಿದೆ. ರಾಜ್ಯ ಬೊಕ್ಕಸದಲ್ಲಿ ಹಣ ಉಳಿದಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗಿದೆ. 200-220 ರೂ. ಬೆಂಗಳೂರರಿಗೆ ಖರ್ಚಾಗುವ ಸ್ಥಿತಿ ಬಂದಿದೆ. ಮೆಟ್ರೋದಲ್ಲಿ ಜನರು ಸಂಚರಿಸಿ ಟ್ರಾಫಿಕ್ ಸುಧಾರಣೆಯತ್ತ ಸರ್ಕಾರ ಗಮನ ಹರಿಸಬೇಕಿತ್ತು. 

ಆದರೆ ಬೆಂಗಳೂರರಿಗೆ ನರಕಯಾತನೆ ನೀಡಲು ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೊರಟಿದ್ದಾರೆ. ಕೇಂದ್ರ ಸರ್ಕಾರಕ್ಕೆ ದರ ಕಡಿಮೆ ಮಾಡಲು ಒಂದೇ ಒಂದು ಪತ್ರ ಬರೆಯಲಿ ಸಾಕು. ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯರಿಗೆ ಈ ಕುರಿತು ಬದ್ಧತೆ ಇಲ್ಲವಾಗಿದೆ. ಯಾಕೆ ಇವರು ದರ ಇಳಿಕೆಗೆ ಪತ್ರ ಬರೆಯುತ್ತಿಲ್ಲ

ರಾಜ್ಯ ಸರ್ಕಾರ ಕೋರ್ಟ್ ಗೆ ಯಾಕೆ ಹೋಗಲಿಲ್ಲ?

ನಾನು ಮೆಟ್ರೋ ದರ ಏರಿಕೆ ಮಾಡಿದಾಗ ಕೋರ್ಟ್ ಗೆ ಹೋಗಿದ್ದೆ, ಅದೇರೀತಿ ಇವರು ಸಹ ಕೇಂದ್ರ ಸರ್ಕಾರ ಮೆಟ್ರೊ ದರ ಏರಿಸಿದರೆ ಅದರ ವಿರುದ್ಧ ಕೋರ್ಟ್ ಗೆ ಹೋಗಲಿ, ಇವರು ಇದನ್ನು ಮಾಡದೇ ಮಾದ್ಯಮಗಳ ಮುಂದೆ ಬಂದು ಇದನ್ನು ನಾವು ಮಾಡಿಲ್ಲ ಕೇಂದ್ರ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಇದನ್ನು ನಂಬಲು ಜನರೇನು ದಡ್ಡರಿದ್ದಾರಾ ? ಎಂದು ಪ್ರಶ್ನಿಸಿದರು. 

ಕೇಂದ್ರಕ್ಕೆ ಪತ್ರ ಬರೆದು ರಾಜ್ಯ ಸರ್ಕಾರ ಪ್ರಶ್ನಿಸಲಿ ಎಂದು ಸವಾಲು ಹಾಕಿದ ತೇಜಸ್ವಿ ಸೂರ್ಯ, 24 ಗಂಟೆಯೊಳಗೆ ಅದನ್ನು ಕಡಿಮೆ ಮಾಡಿಸುವ ಜವಬ್ದಾರಿ ಕರ್ನಾಟಕದ ಸಂಸದರದ್ದಾಗಿದೆ. ಪ್ರಧಾನ ಮಂತ್ರಿಗಳ ಕುರ್ಚಿ ಬಳಿ ಬಂದು ಪ್ರತಿಭಟನೆಗೆ ಮುಂದಾಗಿರೋದು ದೇಶದ ದುರಂತವಾಗಿದೆ. ಸಂಸತ್ತಿನ ಇತಿಹಾಸದಲ್ಲಿಯೇ ಇದು ಪ್ರಥಮವಾಗಿದೆ

ಮೊದಲ ಬಾರಿಗೆ ಪ್ರಧಾನಿ ವಾಪಾಸ್ ಆಗಿದ್ದಾರೆ

ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ದೇಶದ ಪ್ರಧಾನಿ ಮಾತನಾಡದೇ ಹಾಗೆಯೇ ಹೋಗಿದ್ದಾರೆ. ಸದನ ಇರುವುದೇ ಭಾಷಣಗಳ ಮೂಲಕ ಚರ್ಚೆ ಮಾಡಲು, ಆದರೆ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಚರ್ಚೆಗೆ ಮುಂದಾಗದೇ ಇರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಡೀ ದೇಶ ಇದನ್ನು ಗಮನಿಸಿದೆ ಎಂದರು‌ 

ಅಗತ್ಯ ಬಿದ್ದಾಗ ಇಡೀ ದೇಶ ಇದಕ್ಕೆ ಉತ್ತರ ನೀಡಿದೆ. 95 ಚುನಾವಣೆಗಳನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೋತಿದೆ. ಮುಂದಿನ ದಿನಗಳಲ್ಲಿ 5 ಚುನಾವಣೆಗಳು ಬರಲಿದ್ದು ಅವು ಕೂಡ ಸೋಲಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೆಂಚುರಿ ಹೊಡೆಯುವುದು ಶತಸಿದ್ಧ ಎಂದರು. 

ದೇಶದ ಜನ ಪಂಚಾಯತ್ ಎಲೆಕ್ಷನ್ ಇರಬಹುದು ಪಾರ್ಲಿಮೆಂಟ್ ಚುನಾವಣೆ ಇರಬಹುದು ಕಾಂಗ್ರೆಸ್ ಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. 


ವಾಪಾಸ್ ಬ್ಯಾಲೆಟ್ ಪೇಪರ್ ಬಳಕೆ ವಿಚಾರ


ವಾಪಾಸ್ ಬ್ಯಾಲೆಟ್ ಪೇಪರ್ ನ್ನ ಚುನಾವಣೆಗೆ ಬಳಸಬೇಕೆಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು, ಇಡೀ ಪ್ರಪಂಚದಲ್ಲಿ ಟೆಕ್ನಾಲಜಿಯಲ್ಲಿ ಲೀಡರ್ ಶಿಪ್ ಕೊಡುತ್ತಿರುವ ನಗರ ಎಂದರೆ  ಬೆಂಗಳೂರು. 

ಸರ್ಕಾರವಾಗಿ ನಾವು ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗಬೇಕೋ ಹಿಂದೆ ತೆಗೆದುಕೊಂಡು ಹೋಗಬೇಕೋ ?ಇಡೀ ಪ್ರಪಂಚ ನಮ್ಮ ಭಾರತದ ಚುನಾವಣೆ ಚೆನ್ನಾಗಿದೆ ಎಂದು ನೋಡುತ್ತಾರೆ. ಆದರೆ ಎಲೆಕ್ಷನ್ ಹಾಳು ಮಾಡುವ ಬ್ಯಾಲೆಟ್ ಪೇಪರ್ ಬಳಕೆ ಮತ್ತೆ ಎಷ್ಟು ಸರಿ !?ಇದು ರಾಜ್ಯ ಮತ್ತು ರಾಜ್ಯದ ನಾಯಕತ್ವ ಯಾವಕಡೆ ತೆಗೆದುಕೊಂಡು ಹೋಗುತ್ತಿದ್ದಾರೆಂಬುದು ತಿಳಿಯುತ್ತದೆ ಎಂದು ಆಗ್ರಹಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ ಇವರಿಗೆ ವೋಟಿಂಗ್ ಯಂತ್ರಗಳು ಸರಿಯಾಗಿತ್ತು. ಕಾಂಗ್ರೆಸ್ ಸೋತ ಕಡೆಗೆ ಪ್ರಶ್ನೆ ಮಾಡಿದ್ರು, ಇವರ ಸಮಸ್ಯೆಯಿಂದ ಸೋತ ಬಳಿಕ ಇವಿಎಂ ಯಂತ್ರದ ಬಗ್ಗೆ ದೂಷಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

Price hike for supply of guarantee schemes - Tejaswi Surya

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close