SUDDILIVE || SHIVAMOGGA
ಸಿಜೆ ರಾಯ್ ಆತ್ಮಹತ್ಯೆಗೆ ಎಸ್ಐಟಿ ರಚನೆ-ಅನುಮಾನ ವ್ಯಕ್ತಪಡಿಸಿದ ಬಿ.ವೈ.ವಿಜೇಂದ್ರ-BY Vijendra expresses doubt over formation of SIT into CJ Roy's suicide
ಸಿಜೆ ರಾಯ್ ಆತ್ಮಹತ್ಯೆ ಮುಚ್ಚಿಹಾಕಲು ಎಸ್ಐಟಿ ರಚನೆ ಮಾಡಲಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅನುಮಾನ ವ್ಯಕ್ತಪಡಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಜೆರಾಯ್ ಆತ್ಮಹತ್ಯೆಯ ಬಗ್ಗೆ ಇನ್ನೂ ಕುಟುಂಬ ದೂರು ನೀಡಿಲ್ಲ. ಅಷ್ಟರಲ್ಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ರಾಯ್ ಅವರ ಆಪ್ತರಾದ ಜಾರ್ಜ್ ಅವರ ದೂರಿನ ಆಧಾರದ ಮೇರೆಗೆ ಎಸ್ಐಟಿ ರಚಿಸಿದೆ. ಈ ಹಿಂದೆಯೂ ಬೆಂಗಳೂರಿನಲ್ಲಿ RCB ವಿಜಯೋತ್ಸವದ ಕಾರ್ಯಕ್ರಮದ ಬಗ್ಗೆ ಎಸ್ಐಟಿ ರಚಿಸಿ ರಾಜ್ಯ ಸರ್ಕಾರ ನುಣಚಿಕೊಳ್ಳುವ ಯತ್ನ ನಡೆಸಿತ್ತು. ಅದೇ ರೀತಿ ಇಲ್ಲಿಯೂ ಸಹ ಎಸ್ಐಟಿ ರಚನೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಇಡಿ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿದ ಕಾಂಗ್ರೆಸ್ ನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಡಿಕೆಶಿಗೆ ತಿರುಗೇಟು ಕೊಟ್ಟ ವಿಜೇಂದ್ರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಯ್ ಅವರ ಅಂತ್ಯಕ್ರಿಯೆ ಮುಗಿಸುವುದರೊಳಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರ ತಪ್ಪುಗಳನ್ನ ಮುಚ್ಚಿ ಹಾಕಲು ಎಸ್ಐಟಿ ರಚಸಿಲಾಗಿದೆ ಎಂದು ಹೇಳಿದರು.
Special investigation ಏಜೆನ್ಸಿ ಅಲ್ಲ ಅದು ಸಿದ್ದರಾಮಯ್ಯ ಇನ್ ವೆಸ್ಟಿಗೇಷನ್ ಏಜೆನ್ಸಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ವ್ಯಂಗ್ಯವಾಡಿದ್ದಾರೆ.
ಬಜೆಟ್ ವೀಕ್ಷಣೆ
ಮೊದಲು ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ಕೇಂದ್ರ ಸರ್ಕಾರದ 2026-27 ನೇ ಸಾಲಿನ ಬಜೆಟ್ ಮಂಡನೆಯನ್ನ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವೀಕ್ಷಣೆ ಮಾಡಿದರು.
ಸಂಸತ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನ್ನ ಮಂಡಿಸಿದ್ದು, ಇದಕ್ಕಾಗಿ ಬಿಜೆಪಿ ಕಚೇರಿಯಲ್ಲಿ 4×8 ಅಡಿ ಎಲ್ ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಇದನ್ನ ರಾಜ್ಯಾಧ್ಯಕ್ಷರು ವೀಕ್ಷಿಸಿ ಬಹುಮುಖ್ಯ ಅಂಶಗಳನ್ಙನೋಟ್ ಮಾಡಿಕೊಂಡರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 9 ನೇ ಬಜೆಟ್ ಮಂಡಿಸಿದ್ದಾರೆ. ಕರ್ತವ್ಯ ಭವನದಲ್ಲಿ ಬಜೆಟ್ ತಯಾರಿಯಾಗಿದ್ದು, ರಾಜ್ಯದಿಂದ ಆಯ್ಕೆಯಾಗಿ ಸತತವಾಗಿ 9 ಬಜೆಟ್ ಗಳನ್ನ ನೀಡಿ ದಾಖಲೆ ನೀಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ 2047 ನೇ ವರ್ಷಕ್ಕೆ ಕಂಡಂತಹ ವಿಕಸಿತಭಾರತದ ಕನಸಿನ ಬಜೆಟ್ ಇದಾಗಿದೆ. ಮೂರು ಕರ್ತವ್ಯ ಶಕ್ತಿಗಳ ಆಧಾರದ ಮೇಲೆ ಮಂಡಿಸಲ್ಪಟ್ಟ ಬಜೆಟ್ ಸಬ್ ಕ ಸಾತ್ ಸಬ್ ಕ ವಿಕಾಸ್, ಮಹಿಳೆಯರಿಗೆ ಒತ್ತು ನೀಡುವ ಅಂಶದ ಮೇಲೆ ಬಜೆಟ್ ಮಂಡನೆಯಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಐಟಿ ಬಿಟಿ, ರೈತರ ಆದಾಯವನ್ನ ದ್ವಿಗುಣ ಮಾಡುವ ನಿಟ್ಟಿನಲ್ಲಿ, ಮಹಿಳೆಯರಿಗೆ ಒತ್ತುನೀಡಿ ಹೊಸ ತೆರಿಗೆ ಹೇರದೆ ಸರ್ವಸ್ಪರ್ಷಿ ಸರ್ವ ವ್ಯಾಪಿಯ ಬಜೆಟ್ ನೀಡಲಾಗಿದೆ ಎಂದರು.
ಭಾರತ ವಿಶ್ವ ಗುರು ಆಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ. ಎಲ್ಲರೂ ಬಜೆಟ್ ನ್ನ ಸ್ವಾಗತಿಸಿದ್ದಾರೆ. ನಾವುಸಹ ಸ್ವಾಗತಿಸಿದ್ದೇವೆ. ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾಳೆ ಉತ್ತರಿಸುವೆ. ಟೀಕಿಸುವುದೇ ಸಾಧನೆ ಮಾಡಿಕೊಂಡಿರುವ ಸಿದ್ದರಾಮಯ್ಯನವರ ಬಗ್ಗೆ ನಾಳೆ ಮಾತನಾಡುವೆ ಎಂದಿರುವ ರಾಜ್ಯಾಧ್ಯಕ್ಷರು ಜಿಯೋ ಪೊಲಿಟಿಕ್ಸ್ ಗಮನಿಸಬೇಕಿದೆ. ಅಮೇರಿಕದಲ್ಲಿ ಆರ್ಥಿಕತೆ ಕುಸಿದಿದೆ. ರಷ್ಯ ಮತ್ತು ಉಕ್ರೇನ್ ಯುದ್ಧದ ಮುಂದುವರೆದಿದೆ. ಈ ನಡುವೆ ದೇಶದ ಆರ್ಥಿಕ ಸ್ಥಿತಿಯನ್ನ ಗಮನಿಸಿ ಬಜೆಟ್ ಮಂಡಿಸಲಾಗಿದೆ. ವಿಪಕ್ಷಗಳು ಟೀಕಿಸೋದು ಸಹಜವಾಗಿದೆ. ನಾಲ್ಕನೇ ಆರ್ಥಿಕ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. ಈ ನಡುವಿನ ಬಜೆಟ್ ಮಂಡನೆ ಸ್ವಾಗತಾರ್ಹ ಎಂದರು.
ಸ್ಟಾಕ್ ಮಾರ್ಕೆಟ್ ಕುಸಿತಗೊಂಡಿದೆ. ನಿನ್ನೆ ಮೋಹನ್ ದಾಸ್ ಪೈ ತೆರಿಗೆ ಭಯೋತ್ಪಾದನೆ ನಿಲ್ಲಿಸಿ ಎಂದಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ತೆರಿಗೆಯ ಸುಧಾರಣೆ ಮಾಡಲಾಗುತ್ತಿದೆ. ಸಲಹೆ ಎಲ್ಲರೂ ಕೊಡ್ತಾರೆ. ಟ್ಯಾಕ್ಸ್ ಪ್ಲಾನ್ ಗಳನ್ನ ತಂದು ಸುಧಾರಣೆ ತರಲಾಗಿದೆ. ಸೂಕ್ತ ಸಲಹೆಯನ್ನ ವಿತ್ತ ಸಚಿವರು ಮಾಡಲಿದ್ದಾರೆ ಎಂದರು.
BY Vijendra expresses doubt over formation of SIT into CJ Roy's suicide
