SUDDILIVE || SHIVAMOGGA
ಸಂಭ್ರಮದ ಬಾಲಸುಬ್ರಹ್ಮಣ್ಯ ದೇವರ ಜಾತ್ರ ಮಹೋತ್ಸವ-The festive festival of Balasubrahmanya God
ಶಿವಮೊಗ್ಗದ ಗುಡ್ಡೇಕಲ್ ನಲ್ಲಿರುವ ಬಾಲಸುಬ್ರಹ್ಮಣ್ಯಂ ಸ್ವಾಮಿ ದೇವಸ್ಥಾನದಲ್ಲಿ ಏಳನೇ ವರ್ಷದ ತೈಪೂಸಮ್ ಜಾತ್ರಾ ಮಹೋತ್ಸವ ವಿಜೃಂಭಣೆಯಾಗಿ ನಡೆದಿದೆ.
ಬಾಲಸುಬ್ರಮಣ್ಯಂ ಸ್ವಾಮಿ ದೇವಸ್ಥಾನ ಟ್ರಸ್ಟ್ ಹಾಗೂ 7ನೇ ವರ್ಷದ ಜಾತ್ರಾ ಸಮಿತಿ ವತಿಯಿಂದ ನಡೆದಿರುವ ಈ ಜಾತ್ರಾ ಮಹೋತ್ಸವವು ಬೆಟ್ಟದ ಮೇಲೆ ಕುಳಿತಿರುವ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಗೆ ಹಾಲಿನ ಕೊಡ ಅಭಿಷೇಕ ಮತ್ತು ಕಾವಡಿ ಹೊತ್ತು ಬರುವ ಜಾತ್ರಾ ಮಹೋತ್ಸವ ಇದಾಗಿದೆ.
ಶಾಲಿವಾಹನ ಶಕ ೧೯೪೭ನೇ ಶ್ರೀ ವಿಶ್ವ ವಸು ನಾಮ ಸಂವತ್ಸರದ ಮಾಘಮಾಸ ಪೌರ್ಣಿಮೆಯ ದಿನವಾದ ಇಂದು ಬೆಳಿಗ್ಗೆ 7:00ಗೆ ಬಹಳ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ನಮಸ್ಕರಿಸಿ ದೀಪಾ ಆರಾಧನೆ ನಡೆದಿದೆ 8:00ಗೆ ಭವ್ಯ ಅಲಂಕಾರದೊಂದಿಗೆ ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಿಂದ ಒಂದು ಭಾಗ ಮೆರವಣಿಗೆ ಹೊರಟರೆ
ಮತ್ತೊಂದು ಭಾಗವು ಗಾಂಧಿ ಬಜಾರ್ ರೇಣುಕಾಂಬ ದೇವಸ್ಥಾನದಿಂದ ಹೊರಟು ಶಿವಪ್ಪ ನಾಯಕ ವೃತ್ತದಲ್ಲಿ ಎರಡೂ ಮೆರವಣಿಗೆ ಸಂಗಮವಾಗಿ ಗುಡ್ಡೇಕಲ್ ದೇವಸ್ಥಾನವನ್ನ ತಲುಪಿದೆ. ಈ ವೇಳೆ ಮೆರವಣಿಗೆಯಲ್ಲಿ ಮಹಿಳೆಯರು ಹಾಲಿನ ಕೊಡ ಹೊತ್ತು ಬಂದರೆ ಪುರುಷರು ಕಾವಡಿ ಹೊತ್ತು ಬಂದಿದ್ದಾರೆ. ನಂತರ ದೇವಸ್ಥಾನದಲ್ಲಿ ದೇವರ ಅಭಿಷೇಕ ನಡೆದಿದೆ. ನಂತರ ಪ್ರಸಾದ ವಿನಿಯೋಗ ನಡೆದಿದೆ. ಇದು 7 ನೇ ವರ್ಷದ ಬಾಲಸುಬ್ರಹ್ಮಣ್ಯ ದೇವರ ಜಾತ್ರ ಮಹೋತ್ಸವವಾಗಿದೆ.
The festive festival of Balasubrahmanya God


