SUDDILIVE || SHIVAMOGGA
ಬಂಜಾರ ಸಮುದಾಯದಿಂದ ಜಯಂತಿಗೆ ಕಪ್ಪುಬಾವುಟ ಪ್ರದರ್ಶನ- Banjara community displays black flags on Jayanti
ಶಿವಮೊಗ್ಗ ಜಿಲ್ಲಾಡಳಿತದಿಂದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮೀಸಲಾತಿಯನ್ನ ಸಮರ್ಪಕವಾಗಿ ಹಂಚಿಲ್ಲ ಎಂದು ಆರೋಪಿಸಿ ಬಂಜಾರ ಸಮುದಾಯ ವಿರೋಧ ವ್ಯಕ್ತಪಡಿಸಿ ಕಪ್ಪುಬಾವುಟ ಪ್ರದರ್ಶಿಸಿದೆ.
ಸೇವಾಲಾಲ್ ಜಯಂತಿ ಗೆ ಬಂಜಾರ ಸಮುದಾಯದಿಂದಲೇ ವಿರೋಧ ವ್ಯಕ್ತವಾಗಿದೆ. ಕಾರ್ಯಕ್ರಮ ವಿರೋಧಿಸಿ, ಮುತ್ತಿಗೆ ಹಾಕಲು ಯತ್ನಿಸಿದ ಬಂಜಾರ ಸಮೂದಾಯದ ಜನರು, ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸೇವಾಲಾಲ್ ಜಯಂತಿಗೆ ವಿರೋಧ ವ್ಯಕ್ತವಾಗಿದೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸೇವಾಲಾಲ್ ಜಯಂತಿಗೆ ಮುತ್ತಿಗೆ ಹಾಕಲು ಬಂದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಬಂಜಾರ ಸಂಘದಿಂದ ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗಿದೆ.
ಒಳ ಮೀಸಲಾತಿಯಲ್ಲಿ ಬಂಜಾರಿಗೆ ಸರ್ಕಾರ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜ್ಯ ಸರ್ಕಾರ ಬಂಜಾರ ಸಮುದಾಯಕ್ಕೆ ಮರಣ ಶಾಸನ ಬರೆದಿದೆ ಎಂದು ದೂರಲಾಗಿದೆ. ಬಂಜಾರ ಕನ್ವೆನ್ಷನ್ ಹಾಲ್ ನಿಂದ ಕುವೆಂಪು ರಂಗಮಂದಿರದ ವರೆಗೂ ಪ್ರತಿಭಟನಾ ಜಾಥಾ ನಡೆದಿದೆ. ಕುವೆಂಪು ರಂಗಮಂದಿರದ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ ಕಪ್ಪುಬಾವುಟ ಪ್ರದರ್ಶನಕ್ಕೆ ಯತ್ನಿಸಲಾಗಿತ್ತು. ಪೊಲೀಸರು ಇದನ್ನ ವಿಫಲಗೊಳಿಸಿದರು.
ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಲಾಗಿತ್ತು. ಕುವೆಂಪು ರಂಗಮಂದಿರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರನ್ನ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಬಂಜಾರ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ್ದರಿಂದ ಜಿಲ್ಲಾಡಳಿತದಿಂದ ಸೇವಾಲಾಲ್ ಜಯಂತಿ ಆಚರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತವಾಗಿದೆ.
Banjara community displays black flags on Jayanti

