SUDDILIVE || SHIVAMOGGA
ಜೈಲಿನಲ್ಲಿ ಮುಂದು ವರೆದ ಗಾಂಜಾ ಹಾವಳಿ- Marijuana epidemic continues in prison
ಶಿವಮೊಗ್ಗದ ಸೋಗಾನೆಯಲ್ಲಿರುವ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾದ ಗಾಂಜಾ, ಮೊಬೈಲ್ ಸಿಗರೇಟು ಮೊದಲಾದ ವಸ್ತುಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಮೂರನೇ ಎಫ್ಐಆರ್ ದಾಖಲಾಗಿದೆ.
ಜೈಲಿನಲ್ಲಿದ್ದ ಭದ್ರಾವತಿಯ ವಿಚಾರಣ ಸಜಾ ಬಂದಿಯನ್ನ ನೋಡಲು ಬಂದ ಸಂದರ್ಶಕ ಒಂದು ಟವಲ್ ತಂದಿದ್ದು ಟವೆಲ್ ನಲ್ಲಿ ಗಾಂಜಾ ಸಾಗಿಸುವ ಪ್ರಯತ್ನ ಮಾಡಿರುವ ಆರೋಪದ ಅಡಿಯಲ್ಲಿ ಇವರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೈದಿಗಳ ಸಂದರ್ಶನಕ್ಕೆ ಬರುವವರನ್ನ ಮೊದಲು ಆಕ್ಸೆಸ್ ಕಂಟ್ರೋಲ್ ನಲ್ಲಿ ತಪಾಸಣೆ ನಡೆಸಲಾಗುವುದು. ತಪಾಸಣೆ ಮಾಡುವ ವೇಳೆ ಭದ್ರಾವತಿಯ ಮೊಹಮದ್ ಅಫ್ಜಲ್ ನ್ನನೋಡಲು ಬಂದ ಹೊಸೂರಿನ ಮೊಹಮದ್ ರಿಯಾಜ್ ಒಂದು ಟವೆಲ್ ತಂದಿದ್ದನು. ಟವೆಲ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಇದರ ವಿರುದ್ಧ ಜೈಲಿನ ಪ್ರಭಾರ ಅಧಿಕಾರಿ ತುಂಗನಗರದಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ಪ್ರಕರಣ ಈ ವರ್ಷ ಮೂರನೆಯದ್ದಾಗಿದೆ. ಮೊದಲು ಸಿಗರೇಟ್ ಮತ್ತು ಮೊಬೈಲ್ ನ್ನ ಜೈಲಿನಲ್ಲಿ ಜ.30 ರಂದು ಪತ್ತೆಯಾಗಿತ್ತು. ಅದಾದ ನಂತರ ಗಾಂಜಾವನ್ನ ಜೈಲಿನ ಬಂದಿಗಳಿಗೆ ಸಾಗಿಸಲು ಕಪ್ಪು ಟೇಪು ಸುತ್ತಿ ಜೈಲಿನ ಒಳಗೆ ಬಿಸಾಕಿದ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಐವರು ಆರೋಪಿಗಳನ್ನ ಬಂಧಿಸಲಾಗಿತ್ತು. ಕಳೆದ ವರ್ಷವೂ ಖೈದಿ ನ್ಯಾಯಾಲಯದಿಂದ ವಾಪಾಸ್ ಆಗುವಾಗ ಮೊಬೈಲ್ ಪತ್ತೆಯಾದ ಪ್ರಕರಣ,
ಜಂಗ್ಲಿಯನ್ನ ನೋಡಲು ಬಂದವರು ವೀಟಾ ಮಾರೀಗೋಲ್ಡ್ ಬಿಸ್ಕತ್ ನಲ್ಲಿ, ಜೈಲಿನ ಖೈದಿಗಳಿಗೆ ನೀಡುವ ಬಾಳೆ ಗೊನೆಯಲ್ಲಿ ಗಾಂಜಾ ಸಾಗಿಸುವ ಯತ್ನ ನಡೆದು ಪತ್ತೆಯಾದ ಪ್ರಕರಣಗಳು ದಾಖಲಾಗಿವೆ.
ಒಟ್ಟಿನಲ್ಲಿ ಗಾಂಜಾದ ಅಮಲಿನಲ್ಲಿ ಜೈಲಿನ ಖೈದಿಗಳು ತೇಲಾಡಲು ಹವಣಿಸುತ್ತಿದ್ದಾರೆ. ಇದಕ್ಕೆ ಮದ್ಯದ ದರವನ್ನ ಸರ್ಕಾರ ಯದ್ವತದ್ವ ಹೆಚ್ಚಿಸಿದ ಪರಿಣಾಮವೂ ಕಾರಣವಾಗಿರ ಎನ್ನಲಾಗಿದೆ. ಗಾಂಜಾ ದರದಲ್ಲಿ ಕಡಿಮೆ ಸಿಗುವುದರಿಂದ ಜೈಲಿನ ಒಳಗಡೆ ಮಾತ್ರವಲ್ಲ ಜೈಲಿನ ಹೊರಗಡೆಯೂ ಲಭ್ಯವಾಗುವ ಗಾಂಜಾ ಹಾವಳಿಗೆ ಮದ್ಯದ ದರ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.
Marijuana epidemic continues in prison
