SUDDILIVE || BHADRAVATHI
ಭದ್ರಾವತಿಯಲ್ಲಿ ಕರಡಿ ದಾಳಿ, ಅಪಾಯದಿಂದ ಯುವಕ ಪಾರು-Bear attack in Bhadravati, youth escapes from danger
ಭದ್ರಾವತಿಯಲ್ಲಿ ಕರಡಿ ಹಾವಳಿ ಮುಂದುವರೆದಿದೆ. ರೈತ ಕಾರ್ಮಿಕರನ್ನ ಗುರಿಯಾಗಿಸಿಕೊಂಡು ಕರಡಿಯ ದಾಳಿ ಮುಂದುವರೆದಿದೆ. ಉಕ್ಕುಂದದಲ್ಲಿ ಕರಡಿಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದರ ಬೆನ್ನಲ್ಲೇ ಕೂಡ್ಲಿಗೆರೆಯಲ್ಲಿ ಮತ್ತೀರ್ವ ಕೃಷಿ ಕಾರ್ಮಿಕನ ಮೇಲೆ ದಾಳಿ ನಡೆದಿದೆ.
ರಾಜೂ ಎಂಬ 30 ವರ್ಷದ ಯುವಕನ ಮೇಲೂ ಕರಡಿ ದಾಳಿ ನಡೆಸಿದೆ. ಇಂದು ಬೆಳಿಗ್ಗೆ ತೋಟಕ್ಕೆ ಹೋಗಿದ್ದ ರಾಜೂ ಮೇಲೆ ಕರಡಿ ದಾಳಿ ನಡೆಸಿದೆ. ಕೈಯಲ್ಲಿ ಕುಡಗೋಲು ಇದ್ದರೂ ರಾಜೂವಿನ ಮೇಲೆ ಕರಡಿ ಅಚ್ಚರಿಯ ರೀತಿಯಲ್ಲಿ ದಾಳಿ ನಡೆಸಿದೆ. ಸಧ್ಯಕ್ಕೆ ರಾಜೂವಿಗೆ ಕೈಗಳಿಗೆ ತಲೆಗೆ ಕರಡಿ ಪರಚಿದೆ. ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಆತ ಬಂದು ಚಿಕಿತ್ಸೆ ಪಡೆದಿದ್ದಾನೆ.
ಇಂದು ಬೆಳಿಗ್ಗೆ 7 ಗಂಟೆಗೆ ದಾಳಿನಡೆದರೆ, ಮಧ್ಯಾಹ್ನ 12 ಗಂಡೆಗೆ ರಾಜೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ತಿಂಗಳು ಹಿಂದಷ್ಟೆ ಕೂಡ್ಲಿಗೆರೆಯಲ್ಲಿ ಶರತ್ ಎಂಬುವರ ಮನೆಯ ಗೇಟ್ ಮುಂದೆ ಮೂರು ಕರಡಿಗಳು ಪ್ರತ್ಯಕ್ಷವಾಗಿದ್ದವು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
Bear attack in Bhadravati, youth escapes from danger


