SUDDILIVE || SHIVAMOGGA
ಕಮಲಾಕರ ಭಟ್ಟರು, ಸುಚಿತ್ರ, ಮಹೇಶ್ ನಾಯ್ಕ ಹಾಗೂ ಇಬ್ಬರು ಮಕ್ಕಳು- Kamalakara Bhatt, Suchitra, Mahesh Nayak and their two children
ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಅವರೆಕೊಪ್ಪ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಓರ್ವನ ಸಾವಾಗಿದ್ದು ಮತ್ತೋರ್ವ ಸಹೋದರನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ಸಹೋದರ ಮಹೇಶ್ ಜಟ್ಯಾ ನಾಯ್ಕ್ (37) ಹಾಗೂ ನೆರೆಮನೆಯ ಕುಮಾರ್ ನಾರಾಯಣ ನಾಯ್ಕ್ (35) ಎಂಬವರಿಗೂ ಎದೆಗೆ ಚಾಕು ಇರಿತವಾಗಿದೆ. ವಸಂತ ನಾಯ್ಕ್ ಎಂಬವರನ್ನು ಶಿವಮೊಗ್ಗ ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ದಾರಿ ಮಧ್ಯೆ ಸಾವು ಕಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹೇಶ ನಾಯ್ಕ, ತನ್ನ ಮಗಳು ಕರೆಮಾಡಿ, ತಾಯಿಯ ಅಫೇರ್ ಬಗ್ಗೆ ತಿಳಿಸಿ ಕರೆದುಕೊಂಡು ಹೋಗಿ ಎಂದು ಹೇಳಿದ್ದಳು. ಮಗಳನ್ನ ಕರೆದುಕೊಂಡು ಬರಲು ಅವರೆಕೊಪ್ಪಕ್ಕೆ ಹೋದಾಗ ಪತ್ನಿ ಸುಚಿತ್ರ ರೌಡಿಯನ್ನಕರೆಯಿಸಿ ಹಲ್ಲೆ ನಡೆಸಿರುವುದಾಗಿ ಮಹೇಶ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಗಾಯಾಳುಗಳಾದ ಮಹೇಶ್ ಶಿವಮೊಗ್ಗದ ಮೆಗ್ಗಾನ್ ನಲ್ಲಿ ದಾಖಲಾಗಿದ್ದರೆ, ಕುಮಾರ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ಧಾಪುರ ಹೊಸೂರಿನ ಸುಚಿತ್ರಾ, ಆಕೆಯ ತಂದೆ ಶಿವಮೊಗ್ಗದ ಲೋಕನಾಥ ಚೌಡಪ್ಪ ನಾಯ್ಕರಾಗಿದ್ದಾರೆ.
ಘಟನೆಯ ವಿವರ
ಅಂದಹಾಗೆ, ಮಹೇಶ ಜಟ್ಯಾ ನಾಯ್ಕ ಆರೋಪಿ ಸುಚಿತ್ರಾ ಎಂಬಾಕೆಯನ್ನು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕಳೆದ 6 ತಿಂಗಳ ಹಿಂದೆ ಮಹೇಶ್ ಎಂಬವರು ಬೆಂಗಳೂರಿನಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗಂಡನಿಗೆ ಗೊತ್ತಿಲ್ಲದೇ ಇಬ್ಬರೂ ಹೆಣ್ಣು ಮಕ್ಕಳ ಜತೆ ಶಿವಮೊಗ್ಗದ ಒಬ್ಬ ಸ್ವಾಮಿಯೊಂದಿಗೆ ಪತ್ನಿ ಸುಚಿತ್ರಾ ವಾಸವಾಗಿದ್ದರು.
ಕೌಟುಂಭಿಕ ಗಲಾಟೆಯ ಬಳಿಕ ಮಹೇಶ ಪತ್ನಿಯಿಂದ ದೂರವಿದ್ದು ಕಳೆದ 2 ತಿಂಗಳಿನಿಂದ ಅಣ್ಣ ವಸಂತ ನಾಯ್ಕ ಎಂಬಾತನ ಮನೆಯಲ್ಲಿದ್ದ. ಫೆ.1ರಂದು ಪುತ್ರಿ ತಂದೆಗೆ ಮೆಸೇಜ್ ಹಾಕಿ ತಾಯಿಯ ಟಾರ್ಚರ್‌ನಿಂದ ರಕ್ಷಣೆ ಮಾಡುವಂತೆ ಮೆಸೇಜ್ ಹಾಕಿದ್ದಳು. ಬಳಿಕ ಮಗಳನ್ನು ರಕ್ಷಣೆ ಮಾಡಿ ಪೊಲೀಸರ ಸಹಾಯದಿಂದ ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ.
ಬಳಿಕ ಮಗಳನ್ನು ತನ್ನ ಜತೆಯೇ ತನ್ನ ಅಣ್ಣನ ಮನೆಯಲ್ಲಿ ಮಹೇಶ್ ನಾಯ್ಕ್ ವ್ಯವಸ್ಥೆ ಮಾಡಿದ್ದರು. ಆದರೆ, ನಿನ್ನೆ ರಾತ್ರಿ ಮನೆಯವರು ಎಲ್ಲಾ ಊಟ ಮಾಡಲು ತಯಾರಾಗುತ್ತಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಸುಚಿತ್ರಾ, ಲೋಕನಾಥ ಹಾಗೂ ಇತರ ನಾಲ್ವರು ಮಗಳನ್ನ ಎಳೆದೊಯ್ಯಲು ಪ್ರಯತ್ನಿಸಿದಾಗ ವಸಂತ ನಾಯ್ಕ್, ಮಹೇಶ್ ನಾಯ್ಕ್ ಹಾಗೂ ಇತರರು ಅಡ್ಡ ಬಂದಿದ್ದಾರೆ.
ಈ ವೇಳೆ ಆರೋಪಿ ಸುಚಿತ್ರಾ ಕರೆದುಕೊಂಡು ಬಂದಿದ್ದ ವ್ಯಕ್ತಿಗಳಿಂದ ವಸಂತಣ್ಣ ಮಹೇಶ್ ಹಾಗೂ ಕುಮಾರ್ ಎಂಬವರಿಗೆ ಚಾಕು ಇರಿತವಾಗಿದೆ. ಚಾಕು ಇರಿದ ಬಳಿಕ ತಮ್ಮ ಕಾರನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ಒಟ್ಟು 7 ಆರೋಪಿಗಳನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಕಮಲಾಕರ ಭಟ್ಟರು ಸಹ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಅನೇಕ ವರ್ಷದಿಂದ ಗಂಡನಿಂದ ದೂರವಿದ್ದ ಸುಚಿತ್ರ ಭಟ್ಟರ ಸಂಪರ್ಕಕ್ಕೆ ಬಂದಿದ್ದಳು. ಇದು ಮಕ್ಕಳಿಗೆ ಇಷ್ಟವಿರಲಿಲ್ಲ.
Kamalakara Bhatt, Suchitra, Mahesh Nayak and their two children


