SUDDILIVE || BHADRAVATHI
ತಾಯಿಯ ಅಂತ್ಯಕ್ರಿಯೆಗೆ ಹೋದಾಗ ಮನೆಯ ಬಾಗಿಲು ಮುರಿದು ಕಳ್ಳತನ- Burglary breaks into house door while attending mother's funeral
ತಾಯಿಯ ಅಂತ್ಯಕ್ರಿಯೆಗೆ ಹೋದಾಗ ಮನೆಯ ಮುಂಭಾಗದ ಬಾಗಿಲನ್ನ ಆಯುಧದಿಂದ ಮೀಟಿ 132 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಹಾಗೂ 34,000 ನಗದು ಹಣವನ್ನು ಕದ್ದಿರುವ ಘಟನೆ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭದ್ರಾವತಿಯ ಪೇಪರ್ ಟೌನ್ ನಲ್ಲಿ ವಾಸವಾಗಿದ್ದ ತಾಯಿ ಲಕ್ಕಮ್ಮ ರವರು ಅನಾರೋಗ್ಯದಿಂದ ಫೆಬ್ರವರಿ 9ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಮರಣ ಹೊಂದಿದ್ದರು. ಸಂಜೆಯ ವೇಳೆಗೆ ಹೊಸ ಸಿದ್ದಾಪುರದ ಎಂಟಿ ಬಿ ಲೇಔಟ್ ನಲ್ಲಿ ವಾಸವಾಗಿದ್ದ ಮಗಳು ಸರೋಜಾ ಎಂಬುವರು ಪತಿ ಹಾಗೂ ಮಗ ಪ್ರೇಮ್ ನೊಂದಿಗೆ ಅಂತ್ಯಕ್ರಿಯೆಗೆ ತೆರಳಿದ್ದರು.
ಸರೋಜಮ್ಮನವರ ಮತ್ತೊಬ್ಬ ಮಗ ಹರೀಶ್ ಎಂಬಾತನು ಬೆಂಗಳೂರಿನಲ್ಲಿದ್ದು ಆತ ಭದ್ರಾವತಿಯ ಎಂಟಿಬಿ ಲೇಔಟ್ ನಲ್ಲಿದ್ದ ಮನೆಗೆ ಬಂದು ಫ್ರೆಶ್ ಅಪ್ ಆಗಿ ಅಂತಕ್ರಿಯೆಗೆ ತೆರಳಿದ್ದನು. ಸರೋಜ ರವರು ತಾಯಿ ಅಂತ್ಯಕ್ರಿಯೆ ಮುಗಿಸಿಕೊಂಡು ಎಂಟಿಬಿ ಲೇಔಟ್ ನಲ್ಲಿರುವ ಮನೆಗೆ ತೆರಳಿದಾಗ ಮನೆಯ ಮುಂಭಾಗಲನ್ನು ಯಾವುದೋ ಆಯುಧದಿಂದ ಮೀಟಿರುವುದು ಕಂಡುಬಂದಿದೆ.
ತಕ್ಷಣವೇ ಒಳಗೋಗಿ ನೋಡಿದಾಗ ಕುಟುಂಬಸ್ಥರಿಗೆ ಶಾಕ್ ಆಗಿದೆ. ಮನೆಯ ಬೀರುವಿನಲ್ಲಿ ಇಟ್ಟಿದ್ದ 132 ಗ್ರಾಂ ಚಿನ್ನಾಭರಣ 34, 4ದು ಹಣ ಅರ್ಧ ಕೆಜಿ ಬೆಳ್ಳಿಯ ವಸ್ತುಗಳು ಸೇರಿ ಒಟ್ಟು 7,44,000 ಬೆಲೆಬಾಳುವ ಆಭರಣ ವಸ್ತುಗಳು ಕೊಳ್ಳುವಾಗಿವೆ ಕೊಳ್ಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ಸರೋಜಾ ರವರು ನ್ಯೂಟನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
Burglary breaks into house door while attending mother's funeral
