ಮೆಗ್ಗಾನ್ ಅವ್ಯವಸ್ಥೆ ಸರಿಪಡಿಸುವಂತೆ ಅಧೀಕ್ಷಕರಿಗೆ ಸಂಘಟನೆ ಮನವಿ-Organization appeals to superintendent to fix Megan's mess

 SUDDILIVE || SHIVAMOGGA

ಮೆಗ್ಗಾನ್ ಅವ್ಯವಸ್ಥೆ ಸರಿಪಡಿಸುವಂತೆ ಅಧೀಕ್ಷಕರಿಗೆ ಸಂಘಟನೆ ಮನವಿ-Organization appeals to superintendent to fix Megan's mess    

Meggan, Mess

ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಬ್ವಂದಿಗಳ ವಿಳಂಬ ನೀತಿ ಮತ್ತು ಉಡಾಫೆತನದ ಉತ್ತರ ಮತ್ತು ಶುಕ್ರೂಶಕಿಯರ ತಾತ್ಸಾರ ವರ್ತನೆಯ ವಿರುದ್ಧ ಕರವೇ ಜನಮನ ರಾಜ್ಯ ಸಂಘಟನೆ ಮೆಗ್ಗಾನ್ ಅಧೀಕ್ಷಕ ಡಾ.ತಿಮ್ಮಪ್ಪನವರಿಗೆ ಮನವಿ ಸಲ್ಲಿಸಿದೆ. 

 ಮೆಗ್ಗಾನ್ ಆಸ್ಪತ್ರೆಯಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ವಿಳಂಬ ನೀತಿಯ ಸೇವಾ ಮನೋಭಾವನೆಯಿಂದ ಸ್ಥಳೀಯ ಮತ್ತು ಪರ ಊರಿನಿಂದ ಬರುವ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂಧಿಗಳಿಂದ ಆಗುತ್ತಿರುವ ತೊಂದರೆಗಳನ್ನು ಈ ಕೂಡಲೇ ಸಂಬಂಧಪಟ್ಟ ಆಡಳಿತ ವರ್ಗ ಸರಿಪಡಿಸಿಕೊಳ್ಳದಿದ್ದರೆ ರೋಗಿಗಳ ಪರವಾಗಿ ಧರಣಿಯನ್ನು ಮಾಡುವುದಾಗಿ ಸಂಘಟನೆ ಎಚ್ಚರಿಸಿದೆ. 

ರೋಗಿಗಳ ನೋದಣಿ ವ್ಯವಸ್ಥೆ ಸರಿಪಡಿಸುವುದು: 

ಅನಾರೋಗ್ಯದಿಂದ ಬಂದಂತಹ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸಿ ರೋಗಗಳು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿರುವುದು ಸರಿಯೇ? ಎಙದು ಪ್ರಶ್ನಿಸಿರುವ ಸರತಿ ಸಾಲು ನಿಲ್ಲುವ ಬದಲು ಮೊಬೈಲ್ ಬಳಸಿ ಆನ್‌ಲೈನ್ ನೋದಣಿ ಮಾಡಿಕೊಳ್ಳಬೇಕು.  ಔಷಧಗಳಿಗೆ ಆನ್ ಲೈನ್  ವ್ಯವಸ್ಥೆ ಮಾಡುವುದಾದರೆ ಅನಾರೋಗದಿಂದ ಬಳಲುವ ರೋಗಿ ಮತ್ತು ಸಂಬಂಧಿಕರಿಗೆ ಆನ್ ಲೈನ್ ಮಾಡುವ ವ್ಯವಸ್ಥೆ ನಿಮ್ಮಲ್ಲಿ ಸುಸ್ಥಿತಿಯಲ್ಲಿ ಇಲ್ಲ ಏಕೆ? ಇದನ್ನೆಲ್ಲಾ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಯಾರು? ಅವರಿಗೆ ಜವಾಬ್ದಾರಿ ಇಲ್ಲವೇ? ಎಂದು ಸಂಘಟನೆ ಸಾಲು ಸಾಲು ಪ್ರಶ್ನಿಸಿದೆ. 

ಎರಡನೇಯದಾಗಿ ಲಂಚದ ಅವ್ಯವಸ್ಥೆ ಹೇಗಿದೆಯಿಂದರೆ ಯಾವ ಸಿಬ್ಬಂದಿಯೂ ಇವರಿಂದ ಹೊರತಾಗಿಲ್ಲ, ಇದಕ್ಕೆಲ್ಲ ನಿರ್ಭಂದ ಹೇರಲಾಗುವುದಿಲ್ಲವೇ, ನಿಮ್ಮ ಆಡಳಿತ ವ್ಯವಸ್ಥೆಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಇದಕ್ಕೆಲ್ಲ ಕಡಿವಾಣ ಹಾಕಲು ನಿಮ್ಮಿಂದ ಸಾಧ್ಯವಾಗುವುದಿಲ್ಲವಾದರೆ ನಾವು ಬೃಹತ್ ಹೋರಾಟ ಹಮ್ಮಿಕೊಂಡು ಆಸಮರ್ಪಕ ಆಡಳಿತದ ವಿರುದ್ಧ ಧರಣಿ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. 

ಎಂ.ಆ‌ರ್.ಐ ಸ್ಕ್ಯಾನಿಂಗ್‌ಗಾಗಿ ರೋಗಿಗಳನ್ನು ತಿಂಗಳಾನುಗಟ್ಟಲೆ ಅಲೆದಾಡಿಸುವುದು. ಇದಕ್ಕೆ ಕಾರಣವೇನು? ಸ್ಕಾನಿಂಗ್‌ಗೆ ಬಂದವರು ಲಂಚ ಕೊಟ್ಟರೆ 2-3 ದಿನದಲ್ಲೇ ಸ್ಯಾನಿಂಗ್ ಆಗುತ್ತದೆ. ಇಲ್ಲದಿದ್ದರೆ ತಿಂಗಳುಗಟ್ಟಲೇ ದೂರದ ದಿನಾಂಕ ಕೊಡಲಾಗುತ್ತದೆ. ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲವೇ? ಅಥವಾ ಗೊತ್ತಿದ್ದರೂ ಸುಮ್ಮನಿರುವುದೇಕೆ?ಬಾಣಂತಿಯರು ಈ ಆಸ್ಪತ್ರೆಗೆ ದಾಖಲಾಗಲು ಭಯಪಡುತ್ತಿದ್ದಾರೆ. ಕಾರಣ ಇಲ್ಲಿ ಹಣ ಕೊಟ್ಟರೆ ಸರಿಯಾದ ಚಿಕಿತ್ಸೆ ದೊರೆಯುತ್ತದೆ. ಇಲ್ಲದಿದ್ದರೆ ನಮ್ಮನ್ನು ಯಾರೂ ಲೆಕ್ಕಿಸುವುದಿಲ್ಲ ಮತ್ತು ಹಣಕ್ಕಾಗಿ ಮಕ್ಕಳನ್ನು ಅದಲು ಬದಲು ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇಂತಹ ಘಟನೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ನಡೆಯಲು ಅವಕಾಶವಿಲ್ಲದ ಹಾಗೆ ಆಡಳಿತ ವರ್ಗ ಜವಾಬ್ದಾರಿಯುತವಾಗಿ ನಡೆದುಕೊಂಡು ಬಾಣಂತಿಯರ ಕುಟುಂಬವರ್ಗದ ಮಖ್ಯಸ್ಥರನ್ನು ಕರೆಯುಸಿ ಜನನವಾದ ಮಗುವನ್ನು ಕೂಡಲೇ ಅವರಿಗೆ ತೋರಿಸಿ ಪಾರದರ್ಶಕತೆಯನ್ನು ಮೆರೆಯುವಂತೆ ಆಗ್ರಹಿಸಲಾಯಿತು. 

ತುಂಬಾ ತುರ್ತು ಚಿಕಿತ್ಸೆಯ ಆವಶ್ಯಕತೆ ಇರುವ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸಿ ಸತಾಯಿಸಿ ಅವರಿಗೆ ಮತ್ತಷ್ಟು ನೋವು ಉಂಟುಮಾಡುವುದನ್ನು ಆಡಳಿತ ವರ್ಗ ಗಮನಹರಿಸಿ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ಸ್ಪಂದಿಸಬೇಕು.ಔಷದ ವಿಭಾಗದಲ್ಲಿ ಇರುವವರು ವೈದ್ಯರುಗಳು ಬರೆದು ಕಳಿಸಿದ ಚೀಟಿಯಲ್ಲಿರುವ ಔಷಧಿಗಳನ್ನು ಕೊಡದೇ ಇನ್ಯಾವುದೋ ಔಷದಿಗಳನ್ನು ಕೊಡಲಾಗುತ್ತಿದೆ. ಈ ಬಗ್ಗೆ ಕ್ರಮಜರುಗಿಸಬೇಕು.  ಔಷದ ವಿಭಾಗದಲ್ಲಿ ತರಬೇತಿ ಪಡೆದ ಅನುಭವವುಳ್ಳ ಸಿಬ್ಬಂಧಿಗಳಬ್ನ ನೇಮಿಸಬೇಕು. ಮತ್ತು ಔಷಧಿಗಳ ದಾಸ್ತಾನು ಇದ್ದರೂ ಕೂಡ ವೈದ್ಯರುಗಳು ಆಸ್ಪತ್ರೆಯ ಸಮೀಪವಿರುವ ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿಯನ್ನು ಬರೆದುಕೊಟ್ಟು ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳಿಸಿಕೊಡುವುದನ್ನ ನಿಲ್ಲಿಸಬೇಕು.  

ಔಷದಿಯನ್ನು ತರಿಸಿಕೊಂಡು ಔಷಧಿ ಅಂಗಡಿಯವರಿಂದ ಕಮಿಷನ್ ಪಡೆದುಕೊಳ್ಳುತ್ತಿರುವುದು ಕೂಡ ಗಮನಕ್ಕೆ ಬಂದಿರುತ್ತದೆ. ಇದಕ್ಕೂ ಕೂಡ ಕಡಿವಾಣ ಹಾಕಬೇಕು,  ಔಷಧಿಗಳು ದಾಸ್ತಾನು ಇಲ್ಲದಿದ್ದರೆ ದಾಸ್ಥಾನ ಇಲ್ಲದ ಔಷಧಿಗಳ ಬಗ್ಗೆ ರೋಗಿಗಳಿಗೆ ತಿಳಿಯುವಂತೆ ಫಲಕವನ್ನು ಹಾಕಿ ರೋಗಿಗಳಿಗೆ ತಿಳುವಳಿಕೆ ನೀಡಬೇಕು. 

ಬಿಲ್ಲಿಂಗ್ ವ್ಯವಸ್ಥೆಗಾಗಿ ಕೌಂಟರ್‌ಗಳನ್ನು ಹೆಚ್ಚಿಸಬೇಕು. ಇರುವ ಕೌಂಟರ್‌ಗಳಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಂದು ಸೇವೆಯನ್ನು ನೀಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರತ ವೈದ್ಯರುಗಳು ಸೇವಾ ಸಮಯದಲ್ಲಿ ಆಸ್ಪತ್ರೆಯ ಹೊರಗೆ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದು ಬಹುಪಾಲು ಇದೇ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಬೇಕು. 

ಇವೆಲ್ಲದಕ್ಕೂ ಕಡಿವಾಣ ಹಾಕಿ ಪಾರದರ್ಶಕವಾದ ಸೇವೆಯನ್ನು ರೋಗಿಗಳಿಗೆ ನೀಡಬೇಕು.  ಈ ಎಲ್ಲಾ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳವೇ ಕಡೆಗಣಿಸಿದರೆ ಇದಕ್ಕೆಲ್ಲಾ ನಾಂದಿ ಹಾಡುವ ತನಕ ನಮ್ಮ ಸಂಘಟನೆಯು ಹಗಲು ರಾತ್ರಿ ಧರಣಿ ನಡೆಸುವುದು ಶತಸಿದ್ದವಾಗಿರುತ್ತದೆ. ಆದ ಕಾರಣ ನಾವು ಆಕ್ಷೇಪಣೆ ವ್ಯಕ್ತಪಡಿಸಿದ ವಿಷಯಗಳೆಲ್ಲ ನಿಮ್ಮ ಗಮನದಲ್ಲಿದ್ದರೂ ಕೂಡ ನಾವು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರುತ್ತಿದ್ದೂ ಕೆಲವೇ ದಿನಗಳಲ್ಲಿ ಇದನ್ನೆಲ್ಲಾ ಸರಿಪಡಿಸದಿದ್ದರೆ ಮುಂದಿನ ಹೋರಾಟಕ್ಕೆ ನಾವು ಸಜ್ಜಾಗುತ್ತೇವೆ ಎಂದು ಸಂಘಟನೆ ಆಗ್ರಹಿಸಿದೆ.

ಕರವೇ ಜನಮನ ರಾಜ್ಯ ಸಂಘಟನೆಯಿಂದ ಶಿವಮೊಗ್ಗ ಮೆಗನ್ ಆಸ್ಪತ್ರೆ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ            ಕರವೇ, ಜನ ಮನ, ರಾಜ್ಯ ಸಂಘಟನೆಯ ಪ್ರತಿಭಟನೆರಾಜ್ಯಾಧ್ಯಕ್ಷರಾದ. ಕೆ ಜನಾರ್ಧನ ಸಾಲಿಯಾನ್ ರವರ ನೇತೃತ್ವದಲ್ಲಿ ಮೆಗ್ಗಾನ್,ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ, ಎಚ್ಚರಿಕೆಯೊಂದಿಗೆ ಸರಿಪಡಿಸಿ ಕೊಳ್ಳಲು ಗಡುವು ನೀಡಿ ಮನವಿ ಯನ್ನು ಕೊಟ್ಟಿದ್ದು. ಪ್ರತಿಭಟನೆ ಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್, ಮಾಲತೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್ ಕೆ, ಮತ್ತು ರಾಮಣ್ಣ ರಾಗಿಗುಡ್ಡ, ಪಾರ್ತಿಬನ್, ಜಿಲ್ಲಾ ಸಂಚಾಲಕರಾದ ಹರ್ಷಿತ್ ಭಾರದ್ವಾಜ್, ತಾಲೂಕು ಸಂಚಾಲಕರಾದ ಪ್ರತಾಪ್, ಮತ್ತು ಪದಾಧಿಕಾರಿಗಳಾದ ಶೋಭಾ, ಪುಷ್ಪ,ಪ್ರಮುಖ ರಾದ ಲಕ್ಷ್ಮೀಶ,ಸಂಗೇಶ್ವರ, ಮತ್ತಿತರರು ಭಾಗವಹಿಸಿದ್ದರು.           

Organization appeals to superintendent to fix Megan's mess

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close