SUDDILIVE || SHIVAMOGGA
ಆಗುಂಬೆ ಟನಲ್ ನಿರ್ಮಾಣಕ್ಕೆ ಡಿಪಿಆರ್ ನಿರ್ಮಿಸಲು ಕೇಂದ್ರ ಗ್ರೀನ್ ಸಿಗ್ನಲ್-Centre gives green signal to prepare DPR for Agumbe Tunnel construction
ಪರಿಸರಾಸಕ್ತರ ವಿರೋಧದ ನಡುವೆಯೂ ಆಗುಂಬೆ ಘಾಟ್ ನಲ್ಲಿ ಟನಲ್ ನಿರ್ಮಾಣಕ್ಕೆ ಡಿಪಿಆರ್ ರಚಿಸಲು ಕೇಂದ್ರ ಸರ್ಕಾರ ಟೆಂಡರ್ ಆಹ್ವಾನಿಸುವ ಮೂಲಕ ಪಶ್ಚಿಮ ಘಟ್ಟದಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆತಿದೆ.
ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ (ಕಿ.ಮೀ. 30.75 ರಿಂದ 51.60) ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರವು ₹2.33 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ. ವಿಶೇಷವಾಗಿ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ, ಭೂ-ತಾಂತ್ರಿಕ ಪರಿಶೀಲನೆಗಳು ಮತ್ತು ತಜ್ಞರ ನೇಮಕಾತಿ ಒಳಗೊಂಡಿರುವುದು ಈ ಘೋಷಣೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಿವಮೊಗ್ಗ ಸಂಸದರು ಸಾಮಾಜಿಕ ಜಾಲಾತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.
ದಶಕಗಳಿಂದ ಜನರು ಎದುರಿಸುತ್ತಿದ್ದ ಅಪಾಯಕರ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಇದು ಮೊದಲ ನಿರ್ಣಾಯಕ ಹೆಜ್ಜೆ. ಈ ಯೋಜನೆ ಮಲೆನಾಡು–ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಿಸಿ, ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ ಎಂದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಮಹತ್ವದ ನಿರ್ಧಾರಕ್ಕೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಜೀ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನೂ ಸಹ ಹಂಚಿಕೊಂಡಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣಕ್ಕೆ 16 ಸಾವಿರ ಮರ ಕಡಿತಲ ಇದೇ ಪಶ್ಚಿಮ ಘಟ್ಟದಲ್ಲಿ ಆಗುತ್ತಿದೆ. ಈಗ ಮತ್ತೆ ಟನಲ್ ನಿರ್ಮಾಣದಿಂದ ಅದೆಷ್ಟು ಮರಗಳು ಉರಳಲಿವೆ ಗೊತ್ತಿಲ್ಲ. ಅಧ್ಯಾಯನ ನಡೆಯಬೇಕಿದೆ. ಆದರೆ ಇದೇ ಪರಿಸರದ ಮಧ್ಯೆ ವಾಸುಸುವ ಮನುಷ್ಯನಿಗೆ ಜಾಗವಿಲ್ಲದಂತಾಗಿದೆ. ಇದು ಈ ದೇಶದ ಕಾನೂನಾಗಿದೆ. ಬಹುತೇಕ ಸಂಸದರ ಯೋಜನೆಗಳು ಮುಂದಿನ 20 ವರ್ಷದ ಮುಂದಾಲೋಚನೆ ಇಲ್ಲದ ಯೋಜನೆಗಳಾಗಿವೆ. ಈ ಯೋಜನೆಯೂ ಒಂದು ವೇಳೆ ನಡೆದರೆ ಏನಾಗಲಿದೆ ಕಾದು ನೋಡೋಣ
Centre gives green signal to prepare DPR for Agumbe Tunnel construction
