SUDDILIVE || THIRTHAHALLI
ಹೆಗ್ಗೋಡು ಬಳಿ ಕಾಡುಕೋಣ ಹಾರಿ ಕಾರು ಜಖಂ-Wild buffalo jumps, damages car near Heggodu
ಕಾಡುಕೋಣದ ಹಿಂಡು ಏಕಾಏಕಿ ರಸ್ತೆ ಮೇಲೆ ಬಂದಿದ್ದು ಈ ವೇಳೆ ರಸ್ತೆಯಲ್ಲಿ ಕಾರೊಂದು ಅಡ್ಡ ಬಂದ ಪರಿಣಾಮ ಕಾರಿನ ಮೇಲೆ ಕಾಡುಕೋಣ ಹಾರಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡ ಘಟನೆ ಹೆಗ್ಗೋಡು ಬಳಿ ನಡೆದಿದೆ..
ಮಂಗಳವಾರ ಸಂಜೆ ಹರಿಹರಪುರದಿಂದ ಕಮ್ಮರಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕಾರಿಗೆ ಅಡ್ಡ ಬಂದ ಕಾಡುಕೋಣದ ಹಿಂಡಿನಲ್ಲಿ ಒಂದು ಕಾಡುಕೋಣ ಕಾರಿನ ಮೇಲೆ ಹಾರಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ..
Wild buffalo jumps, damages car near Heggodu
