ಚಿಲ್ರೆ ಖರ್ಗೆ-ಈಶ್ವರಪ್ಪ ಕಿಡಿ- Chilre Kharge-Eshwarappa Kidi

 SUDDILIVE || SHIVAMOGGA

ಚಿಲ್ರೆ ಖರ್ಗೆ-ಈಶ್ವರಪ್ಪ ಕಿಡಿ-  Chilre Kharge-Eshwarappa Kidi    

Chilre, kharge

ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಮೇಲೆ ಮಸೀದಿ ಮೇಲಿಂದ ಚಪ್ಪಲಿ, ಕಲ್ಲು ತೂರಾಟ ಆಗಿದ್ದನ್ನು ಮಾಜಿ ಉಪಮುಖ್ಯಮಂತ್ರಿ, ರಾಷ್ಟçಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಯ ಮೇಲೆ ಸುಮಾರು ೨೦೦ ಜನ ಮುಸ್ಲಿಂ ಗೂಂಡಾಗಳು ಮಸೀದಿ ಮೇಲಿಂದ ಮೆರವಣಿಗೆಗಾರರ ಮೇಲೆ ಕಲ್ಲು ತೂರಾಟ ಮಾಡಿದ್ದರ ಪರಿಣಾಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅನೇಕ ಪೊಲೀಸರು ಹಾಗೂ ಮೆರವಣಿಗೆಗಾರರು ಗಾಯಾಳುಗಳಾದರು. ಆದರೂ ಬಾಗಲಕೋಟೆ ಜಿಲ್ಲಾ ರಕ್ಷಣಾಧಿಕಾರಿಗಳು ತಮ್ಮ ತಲೆಗೆ ಕಲ್ಲುಬಿದ್ದು ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೂ ಮಾಧ್ಯಮದ ಎದುರು ಹೇಳಿಕೆ ನೀಡಿ ಕೆಲವು ಸಣ್ಣ ಕಲ್ಲುಗಳ ತೂರಾಟವಾಗಿದೆ. ಯಾರಿಗೂ ಪೆಟ್ಟಾಗಲಿಲ್ಲ ಎಂದು ಹೇಳಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ. ಎಸ್ಪಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್, ತುಘಲಕ್ ಸರ್ಕಾರದಂತೆ ವರ್ತಿಸುತ್ತಿದ್ದು, ದೇಶದ್ರೋಹಿ, ಗೂಂಡಾ ಮುಸಲ್ಮಾನರಿಗೆ ಆಶೀರ್ವಾದ, ಬೆಂಬಲ ನೀಡುತ್ತಿರುವುದೇ ಈ ಎಲ್ಲಾ ಅನಿಷ್ಠ ಬೆಳವಣಿಗೆಗೆ ಕಾರಣವಾಗಿದೆ. ಈಗಾಗಲೇ ನೆಲಮಂಗಳ, ಚಿಕ್ಕಮಗಳೂರು, ಮದ್ಧೂರು, ಚಿತ್ತಾಪುರ, ದಾವಣಗೆರೆ, ಹುಬ್ಬಳ್ಳಿ ಮೊದಲಾದೆಡೆ ಇಂತಹ ದುಷ್ಕೃತ್ಯಗಳು ನಡೆದಿದ್ದರೂ ಕಾಂಗ್ರೆಸ್ ಗೂಂಡಾ ಮುಸಲ್ಮಾನರಿಗೆ ರಕ್ದಣಾ ನೀಡುತ್ತಿದೆ. ಔರಂಗ ಜೇಬನ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ ಮುಖಂಡರು ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕು. ಯಾವ ಮಸೀದಿಗಳಿಂದ ಕಲ್ಲು ತೂರಾಟವಾಗಿದೆಯೋ ಆ ಮಸೀದಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಅಲ್ಲಿನ ಮೌಲ್ವಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಕಾಂಗ್ರೆಸ್ ರಾಜಕೀಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ `ರಣರಂಗ ಬಿಟ್ಟು ಓಡಿಹೋಗುವ ಹೇಡಿ ನಾನಲ್ಲ’ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾಂಗ್ರೆಸ್ ನಾಯಕರ ಬಗ್ಗೆ, ಪಟ್ಟಭದ್ರರ ಹಾಗೂ ಜಾತಿಯ ಬಗ್ಗೆ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲದಿದ್ದಲ್ಲಿ ಅವರೇ ಹೇಡಿಗಳಾಗುತ್ತಾರೆ ಎಂದು ಅವರು, ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣವಾಗಿದೆ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಕಾರಣ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಂದೇಶ ರವಾನಿಸಿದ್ದಾರೆ. ಇಲ್ಲಿಯೂ ಸಹ ಅವರು ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿರುವುದರಿಂದ ರಾಜ್ಯದ ಜನತೆ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತಮ್ಮ, ಹೈಕಮಾಂಡ್ ಹಾಗೂ ಡಿಕೆಶಿ ನಡುವೆ ನಡೆದ ಮಾತುಕತೆ ಏನೆಂಬುದನ್ನು ಬಹಿರಂಗಪಡಿಸಬೇಕು ಇಲ್ಲದಿದ್ದಲ್ಲಿ ಇದೇ ಗೊಂದಲ ಮುಂದುವರೆದು ಆಡಳಿತದ ಮೇಲೆ ದುಷ್ಪರಿಣಾಮವಾದರೆ ಅದಕ್ಕೆ ಅವರೇ ಹೊಣೆಗಾರಿಕೆ ಹೋರಬೇಕು ಎಂದು ತಾಕೀತು ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟçಭಕ್ತ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಈ. ವಿಶ್ವಾಸ್, ಮೋಹನ್ ಜಾದವ್, ಕುಬೇಡಪ್ಪ, ಮಹಾಲಿಂಗಶಾಸ್ತಿçÃ, ರಾಜು, ಎಂ.ಜಿ. ಬಾಲು, ಗಿರೀಶ್, ಅರುಣ್ ಇನ್ನಿತರರಿದ್ದರು.

ಚಿಲ್ರೆ ಖರ್ಗೆ

ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕಖರ್ಗೆ ಅವರು ನೀಡಿದ `ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿಸಲಾಗುತ್ತಿದೆ’ ಎಂಬ ಹೇಳಿಕೆಗೆ, ಚಿಲ್ರೆ ಖರ್ಗೆ ಬಗ್ಗೆ ನಾನು ಮಾತನಾಡುವುದಿಲ್ಲ. ಅವನಷ್ಟು ಅಯೋಗ್ಯ ಬೇರೆ ಇಲ್ಲ ಎಂದರಲ್ಲದೆ ವಿಧಾನಸೌಧದಲ್ಲಿ ಸರ್ಕಾರ ಮಾಧ್ಯಮದವರಿಗೆ ನಿರ್ಬಂಧ ಹೇರಿರುವುದು ತುಘಲಕ್ ದರ್ಬಾರದಂತೆ ಆಗಿದೆ. ಈ ಹಿಂದೆ ಪತ್ರಿಕಾ ಸ್ವಾತಂತ್ರö್ಯಕ್ಕಾಗಿ ನಾವೂ ಕೂಡ ಜೈಲಿಗೆ ಹೋಗಿದ್ದೆವು. ಆಡಳಿತದಲ್ಲಿ ಮಾಧ್ಯಮದ ಪಾತ್ರ ಏನೆಂಬುದು ನಮಗೆ ತಿಳಿದಿದೆ. ಆದರೆ ಕಾಂಗ್ರೆಸ್ ಈಗ ಅಭಿವ್ಯಕ್ತಿ ಸ್ವಾತಂತ್ರö್ಯಕ್ಕೆ ಕಡಿವಾಣ ಹಾಕುತ್ತಿರುವುದು ಸಂವಿಧಾನ ವಿರೋಧಿ ಎಂದು ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Chilre Kharge-Eshwarappa Kidi


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close