SUDDILIVE || SHIVAMOGGA
ಭದ್ರಾವತಿ ಮೋಹನನ ಖರಾಮತ್ತು, ಹಾರಿಹೋಯಿತು ಅಮಾಯಕೆಯ ಜೀವ- Bhadravati Mohan's betrayal, innocent life taken away
ಭದ್ರಾವತಿಯ ಸಿದ್ದಾಪುರದ ವಾಸಿ ಜಗದೀಶ್ ಕೆಎಸ್ಐಎಸ್ಎಫ್ ನಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದಾತ. ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದ ಆತ ಮದ್ಯದ ವ್ಯಸನ ಅಂಟಿಸಿಕೊಂಡಿದ್ದ. ಇದರಿಂದ ಅನಾರೋಗ್ಯಕ್ಕೀಡಾದ ಆತ ವಾರದ ಹಿಂದಷ್ಟೇ ಮೃತಪಟ್ಟಿದ್ದ.
ಪತಿ ತೀರಿ ಹೋದ ಬಳಿಕ ಪತ್ನಿ ಸ್ವಾತಿ ಖಿನ್ನತೆಕ್ಕೊಳಗಾಗಿದ್ದಳು. ಈ ಘಟನೆ ನಡೆದು ಆರೇ ದಿನಕ್ಕೆ ಪತ್ನಿ ಸ್ವಾತಿ ಕೂಡಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಕಳೆದ ಆರು ದಿನಗಳಿಂದ ಅದೇ ಗ್ರಾಮದ ಪೊಲೀಸ್ ಕಾನ್ಸಟೇಬಲ್ ಮೋಹನ್ ವಿಧವೆ ಸ್ವಾತಿಗೆ ನಿರಂತರವಾಗಿ ಫೆಸ್ ಬುಕ್ ಮತ್ತು ಮೆಸೆಂಜರ್ ನಲ್ಲಿ ಮೆಸೇಜ್ ಹಾಕುತ್ತಿದ್ದನು.
ಆತನ ಫೇಸ್ ಬುಕ್ ಬ್ಲಾಕ್ ಮಾಡಿದರು. ಬೇರೆ ಅಕೌಂಟ್ ನಿಂದ ಮತ್ತೆ ಕೆಟ್ಟದಾಗಿ ಮೆಸೇಜ್ ಹಾಕಿದ್ದ ಪೊಲೀಸ್. ನಿರಂತರವಾಗಿ ಪೊಲೀಸಪ್ಪನು ಮೆಸೇಜ್ ನಲ್ಲಿ ಟಾರ್ಚ್ ರ್ ಮತ್ತು ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಈತನ ಟಾರ್ಚರ್ ತಾಳಲಾರದೆ ಇನ್ನೂ 27 ವಯಸ್ಸಿನ ಸ್ವಾತಿ ನೇಣಿಗೆ ಶರಣಾಗಿದ್ದಾಳೆ. ತಂದೆ ಮತ್ತು ತಾಯಿ ಒಂದೇ ವಾರದ ಅಂತರದಲ್ಲಿ ಸ್ವಾಮಿ ಮನೆ ಸೇರಿದ್ದರಿಂದ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಸ್ವಾತಿ ಸಾವಿನ ಸುದ್ದಿ ಕೇಳಿದ ಹೆತ್ತವರು ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿದೆ.
ಈ ಬಗ್ಗೆ ಶಿವಮೊಗ್ಗ ಎಸ್ಪಿ ಬಿ.ನಿಖಿಲ್ ಪ್ರತಿಕ್ರಿಯಿಸಿದ್ದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ, ಸ್ವಾತಿಯ ಪತಿ ಮೃತಪಟ್ಟ ನಂತರ ಅವಳ ಬೆನ್ನು ಬಿದ್ದಿದ್ದಾನೆ. ಬಳಿಕ ಮೆಸೇಜ್ ಮಾಡಿ ಜೀವ ಹಿಂಡುತ್ತಿದ್ದನಂತೆ. ಇದರಿಂದಾಗಿ ಸ್ವಾತಿ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಮೋಹನನ ಅಕೌಂಟ್ ನ್ನು ಬ್ಲಾಕ್ ಮಾಡಿದ್ದಳಂತೆ ಎಂದು ವಿವರಿಸಿದರು.
ಆದಾಗ್ಯೂ ಮೋಹನ ತನ್ನ ಹಾಗೂ ತನ್ನ ಪತಿಯ ಸಾವಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದುದನ್ನು ತಿಳಿದ ಸ್ವಾತಿ ಇಡೀ ಘಟನೆಯನ್ನು ತನ್ನ ತಾಯಿಗೆ ವಾಟ್ಸಪ್ ಮೂಲಕ ತಿಳಿಸಿದ್ದಾಳೆ. ನನ್ನ ಸಾವಿಗೆ ಕಾರಣವಾದ ಮೋಹನನೇ ಕಾರಣ. ಆತನನ್ನು ಸುಮ್ಮನೆ ಬಿಡಬೇಡಿ ಎಂದು ಆಗ್ರಹಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ನ್ಯೂ ಟೌನ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದರು.
ಇನ್ನು ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕಿರುಕುಳಕ್ಕೆ ಪೊಲೀಸರ ಪತ್ನಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇದು ಎರಡನೇ ಪ್ರಕರಣ. ಈ ಮೊದಲು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹುದೇ ಪ್ರಕರಣ ದಾಖಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಘಟನೆ ಮರುಕಳಿಸಿದೆ. ಮೌನೇಶ್ ಎಂಬ ಪೊಲೀಸ್ ನ್ನ ಬಂಧಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆಂತರಿಕವಾಗಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.
Bhadravati Mohan's betrayal, innocent life taken away

