SUDDILIVE || SHIVAMOGGA
ಸಿದ್ದರಾಮಯ್ಯನವರು ವಿಭಜಕ ಮನಸ್ಥಿತಿಯಿಂದ ಹೊರಬರಲಿ-ಬಿ.ವೈ.ವಿಜೇಂದ್ರ- Siddaramaiah should come out of his divisive mindset - B.Y. Vijendra
ನಿನ್ನೆ ದೇಶದ ವಿತ್ತ ಮಂತ್ರಿಗಳು ಮಂಡಿಸಿದ 9 ನೇ ಬಜೆಟ್ ಆತ್ಮನಿರ್ಭರ ಭಾರತ, ವಿಕಸಿತ ಭಾರತ, ಸ್ವಾಲಂಭಿ ಭಾರತದ ನಿರ್ಮಾಣದ ಗುರಿಯಾಗಿಸಿಗೊಂಡು ಮಂಡಿಸಲಾಗಿದೆ. ಇದು ದೇಶಾದ್ಯಂತ ಪ್ರಶಂಸೆಗೆ ಒಳಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹೇಳಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನಪ್ರಿಯಗಿಂತ ಜನಹಿತದ ಬಜೆಟ್ ಇದಾಗಿದೆ ಎಂದು ವಿತ್ತ ಸಚಿವರು ಋಜುವಾತು ಮಾಡಿದ್ದಾರೆ. ಜಾಗತಿಕ ಪರಿಸ್ಥಿತಿಯನ್ನ ಅವಲೋಕಿಸಬೇಕಿದೆ. ಟ್ರಂಪ್ ಅವರ ವಾಣಿಜ್ಯ ಸಮರಕ್ಕೆ ಎದೆಗುಂದದೆ ಪ್ರಧಾನಿಗಳ ವಿಕಸಿತ ಭಾರತದ ಗುರಿಕಡೆ ಸಾಗುವ ನಿಟ್ಟಿನಲ್ಲಿ ಸುಧಾರಣೆ ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಕೈಗಾರಿಕೆ, ಸೆಮಿಕಂಡಕ್ಟರ್, AI, ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಒತ್ತು ನೀಡಿ ಆರ್ಥಿಕ ಶಿಸ್ತನ್ನ ಕಾಪಾಡಿದ್ದಾರೆ ಎಂದರು.
ಹಿಂದಿನ ಆರ್ಥಿಕ ವರ್ಷದ ಹಣಕಾಸಿನ ಕೊರೆತೆಯು 4.4 ಕ್ಕೆ ತರಲಾಗಿದೆ. ಹಿಂದಿನ ಯುಪಿಎ ಸರ್ಕಾರ ಮೂಲಭೂತ ಸರ್ಕಾರ 2 ಲಕ್ಷ ರೂ. ನೀಡುತ್ತಿತ್ತು. ಈಗ ಎನ್ ಡಿಎ 12 ಸಾವಿರ ಕೋಟಿ ನೀಡಿದೆ. ರಸ್ತೆ, ರೈಲ್ವೆ ಬಂದರು, ವಿಮಾನ ನಿಲ್ದಾಣ ಅಭಿವೃದ್ದಿಗೆ ಹೆಚ್ಚು ಹಣ ನೀಡಲಾಗಿದೆ. ರೈತರ ಆದಾಯ ದ್ವಿಗುಣ ಮಾಡಲು ದಿಟ್ಟ ಹೆಜ್ಜೆ ಮುಂದಿಡಲಾಗಿದೆ. ಆಹಾರ, ವಾಣಿಜ್ಯ ಮೀನುಗಾರಿಕೆಗೆ ಶೇ.6 ರಷ್ಟು ಹೆಚ್ಚುವರಿ ಹಣಕಾಸು ಕೊಡುಗೆ ನೀಡಲಾಗಿದೆ ಎಂದರು.
ಈ ದೇಶ ಅಭಿವೃದ್ಧಿಗೆ 4 ವರ್ಗದ ಜನತೆಗೆ ಆದ್ಯತೆ ನೀಡಬೇಕು. ಯುವಕರು, ಬಡವರು, ರೈತರು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಶೀ ಮಾರ್ಟ್ ಮೂಲಕ ಮಹಿಳೆ ಉದ್ಯಮಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಗೊಂದು ಮಹಿಳ ಹಾಸ್ಟೆಲ್ ಸ್ಥಾಪಿಸಲಾಗುತ್ತಿದೆ. ಉನ್ನತ ಶಿಕ್ಷಣವನ್ನ ಆದ್ಯತ ವಲಯವೆಂದು ಪರಿಗಣಿಸಿ ಹೆಚ್ಚಿನ ಹಣಕಾಸು ನಿಡಲಾಗಿದೆ. ಹೈಸ್ಪೀಡ್ ರೈಲನ್ನ ಚೆನ್ನೈ- ಬೆಂಗಳೂರು, ಹೈದ್ರಾಬಾದ್ ಮತ್ತು ಬೆಂಗಳೂರಿಗೆ ನೀಡಲಾಗಿದೆ. ತೆಂಗುಬೆಳಗಾರರಿದ್ದಾರೆ, ಮೀನುಸಾಗಾಣಿಕೆ, ಶ್ರೀಗಂಧ ಬೆಳೆಗಾರರಿಗೆ ಬಜೆಟ್ ನಲ್ಲಿ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರ ಕಳೆದ ಎರಡೂವರೆ ವರ್ಷದಿಂದ ಕೇಂದ್ರ ಸರ್ಕಾರವನ್ನ ಟೀಕಿಸಿ ಕೊಂಡೆ ಬಂದಿದ್ದಾರೆ. 16 ನೇ ಹಣಕಾಸಿನ ಆಯೋಗ ಜಿಡಿಪಿ ಗೆ ಅನುಕೂಲವಾಗುವಂತೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಶೇ. 3.65% ರಿಂದ 4.13% ಗೆ ಹೆಚ್ಚಾಗಿದೆ. ಪ್ರತಿವರ್ಷ 7387 ಕೋಟಿ ರೂ. ಹೆಚ್ಚುವರಿಯಾಗಿ ಕರ್ನಾಟಕಕ್ಕೆ ಸಿಗಲಿದೆ.
63050 ಕೋಟಿ ರೂ ಮುಂದಿನ ವರ್ಷಕ್ಕೆ ಹೆಚ್ಚುವರಿಯಾಗಿ ರಾಜ್ಯಕ್ಕೆ ದೊರೆಯಲಿದೆ. ಜಾಗತಿಕ ಸವಾಲು, ಬಜೆಟ್ ನಲ್ಲಿ ಆರ್ಥಿಕ ಶಿಸ್ತನ್ನ ಕಾಪಾಡಲಾಗಿದೆ. ವಿಭಜಿತ ಮನಸ್ಸಿನಿಂದ ಹೊರಬಂದು ಒಕ್ಕೂಟದ ವ್ಯಸ್ಥೆಯ ಬಗ್ಗೆ ಸಿದ್ದರಾಮಯ್ಯನವರು ಮನಸ್ಸು ಮಾಡಬೇಕು. ವೀರಶೈವ ಲಿಂಗಾಯಿತರನ್ನ ಒಡೆಯಲು ಹೊರಟಿದ್ದ ಸಿದ್ದರಾಮಯ್ಯ ದೇಶದ ಒಕ್ಕೂಟ ವ್ಯವಸ್ಥೆಯನ್ನ ಅಣಕಿಸುವಂತಾಗಿದೆ. ಕೇಂದ್ರದ ವಿರುದ್ಧ ಬೊಟ್ಟು ಮಾಡಲು ಹೊರಟಿದ್ದಾರೆ. ವಿಭಜಕ ಮಾನಸಿಕ ಸ್ಥಿತಿ, ದೇಶದ ಅಭಿವೃದ್ಧಿ ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯರನ್ನ ಟೀಕಿಸಿದರು.
ನಮ್ಮ ತೆರಿಗೆ ನಮ್ಮಹಕ್ಕು ಎಂಬ ಪ್ರತಿಭಟನೆಯನ್ನ ಕಾಂಗ್ರೆಸ್ ಮಾಡಿತ್ತು. ಗ್ಯಾರೆಂಟಿ ಹಣಕ್ಕೆ ಅಬಕಾರಿಯ ತೆರಿಗೆಯ ಗುರಿಯನ್ನ 40 ಸಾವಿರ ಕೋಟಿ ರೂ. ಗುರಿಗೆ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಬಕಾರಿ ಗುತ್ತಿಗೆದಾರರು ನಮ್ಮ ತೆರಿಗೆ ನಮ್ಮ ಹಕ್ಕು ಅಡಿಯಲ್ಲಿ ವಿಧಾನ ಸಭೆ ಮುತ್ತಿಗೆ ಹಾಕಿದರೆ ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು. ಕರ್ನಾಟಕದ ಜೊತೆ ಮಹಾರಾಷ್ಟ್ರವೂ ಹೆಚ್ಚಿನ ತೆರಿಗೆ ನೀಡುತ್ತದೆ. ನೆರೆಟಿವ್ ಬಿಲ್ಟ್ ಮಾಡುವ ಉದ್ದೇಶದ ಹಿಂದೆ ಗ್ಯಾರೆಂಟಿಗಳನ್ನ ಸರಿಯಾಗಿ ನೀಡಲು ಆಗದ ಸರ್ಕಾರ ಈ ನೆರೆಟಿವ್ ಬಿಲ್ಟ್ ಮಾಡಿ ಕೇಂದ್ರದ ವಿರುದ್ಧ ಬೊಟ್ಟು ಮಾಡುತ್ತಿದೆ ಎಂದ ದೂರಿದರು.
ಅಧಿಕಾರಿಗಳು ರಾತ್ರಿ 3 ಗಂಟೆಯ ವರೆಗೆ ಕೆಲಸ ಮಾಡುವಂತಾಗಿದೆ. ಇದು ಸರ್ಕಾರದ ಒತ್ತಡದ ಹಿನ್ನಲೆಯಲ್ಲಿ ಅಧಿಕಾರಿಗಳು ಪರದಾಡುವಂತಾಗಿದೆ. ಈಶಾನ್ಯ ರಾಜ್ಯಗಳಿಗೆ 6½ ಸಾವಿರ ಕೋಟಿ ಹಣ ನೀಡಲಾಗುತ್ತಿದೆ. ಯುಪಿಎ ಸರ್ಕಾರ ಹೆಚ್ಚಿನ ಹಣ ಕೊಡುತ್ತಿರಲಿಲ್ಲ. 65 ರಿಂದ 70 ಜಿಲ್ಲೆಯಲ್ಲಿದ್ದ ನಕ್ಸಲರು ಜಿಲ್ಲೆಗೆ ಇಳಿಸಲಾಗಿದೆ.
ಕಳೆದ ಬಜೆಟ್ ನಲ್ಲಿ ಇನ್ ಕಂಟ್ಯಾಕ್ಸ್ ನ್ನ ಕಡಿಮೆ ಮಾಡಲಾಗಿದೆ 12 ಲಕ್ಷ ಆದಾಯ ತೆರಿಗೆ ಬರೋದಿಲ್ಲ. ಕಳೆದ ಬಜೆಟ್ ನಲ್ಲೇ ಸುಧಾರಣೆ ಮಾಡಲಾಗಿದೆ. ದ್ವೇಷಭಾಷಣದ ಕಾಯ್ದೆಗೆ ಆತುರದಿಂದ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಾಸ್ ಮಾಡಿದೆ. ವಿಪಕ್ಷಗಳನ್ನ ಮಟ್ಟಹಾಕಲು ತಂದ ಕಾಯ್ದೆಯಾಗಿದೆ. ವಿಕಾಸ ಪುತ್ತೂರುನ್ನ ತರೀಕೆರೆ ಯಲ್ಲಿ ಮಾತನಾಡಲು ಬಿಡದೆ ಪೊಲೀಸರು ನೋಟೀಸ್ ನೀಡುತ್ತಾರೆ. ಶರಣ್ ಪಂಪವೇಲ್ ಗಡಿಯನ್ನ ದಾಟದಂತೆ ನೋಟಿಸ್ ನೀಡುತ್ತಾರೆ.
ಬಾಂಗ್ಲಾದವರು ಹೆಚ್ಚಾಗಿದ್ದಾರೆ ಎಂದು ಹೇಳಿದ ಪುನೀತ್ ಕೆರೆಹಳ್ಳಿಯನ್ನ ಒಳಹಾಕಲಾಗಿದೆ. ಅಕ್ರಮ ಗೋಸಾಗಾಣಿಕೆ ಮಾಡುವವರ ಪರ ಸ್ಟೇಷನ್ ಬೇಲ್ ನೀಡಲು ಸಿದ್ದರಾಮಯ್ಯ ಸರ್ಕಾರ ಹೊರಟಿತ್ತು. ರಾಜ್ಯಪಾಲರು ಇದನ್ನ ತಡೆದಿದ್ದನ್ನ ಸ್ವಾಗತಿಸುವೆ ಎಂದರು.
Siddaramaiah should come out of his divisive mindset - B.Y. Vijendra
