SUDDILIVE || SHIVAMOGGA
ಯುವತಿಗೆ ಕಿಚಾಯಿಸಿದ 10 ಜನರಿಗೆ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಿದ ನ್ಯಾಯಾಲಯ- Court sentences 10 people to one year in jail and fines for teasing young woman
ದೇವಸ್ಥಾನಕ್ಕೆ ಹೊರಟ ಯುವತಿಯನ್ನ ಚುಡಾಯಿಸಿ ಕಿಚಾಯಿಸಿದ 10 ಜನ ಆರೋಪಿಗಳಿಗೆ ತಲಾ ಒಂದು ವರ್ಷ ಸಜೆ 8 ಸಾವಿರ ರೂ.ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2019 ನೇ ಸಾಲಿನ ಮಾರ್ಚ್ 8 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ಹಂಚಿನ ಸಿದ್ಧಾಪುರ ಗ್ರಾಮದ ವಾಸಿ ಸಾಕ್ಷಿ ಅಭಿಲಾಷ್ ರವರು ಶಿವರಾತ್ರಿ ಹಬ್ಬದ ಪ್ರಯಕ್ತ ದೇವಸ್ಥಾನಕ್ಕೆ ಹೋದಾಗ ಆರೋಪಿತಾರಾದ ರುದ್ರೇಶ್ ಹಾಗೂ ಇತರರು ಸೇರಿ ಅವರನ್ನು ನೋಡಿ ಕಿಚಾಯಿಸಿ ಅವಹೇಳನವಾಗಿ ಮಾತನಾಡಿದ್ದರಿಂದ ಈ ವಿಚಾರವಾಗಿ, ಸಂಜೆ ಆರೋಪಿತರು ಗುಂಪುಕಟ್ಟಿಕೊಂಡು ಫಿರ್ಯಾದಿ ರವರ ಮನೆಯೊಳಗೆ ನುಗ್ಗಿ ಅವಾಚ್ಯವಾದ ಶಬ್ದಗಳಿಂದ ಬೈದು ಫಿರ್ಯಾದಿ ರವರನ್ನು ಹಿಡಿದು ಎಳೆದಾಡಿ ಕಾಲುಗಳಿಂದ ಒದ್ದು ಸಾಕ್ಷಿ ಫಿರ್ಯಾದಿ ತಾಯಿ ಜಯಂತಿ ಅಜ್ಜಿ ಮತ್ತು ಅಕ್ಕ ನಿಗೆ ಮೈ ಕೈ ಮುಟ್ಟಿ ಎಳೆದಾಡಿ ಓಮಿನಿಯ ಹಿಂಭಾಗದ ಗ್ಲಾಸ್ ನ್ನು ಜಕ್ಕಂಗೊಳಿಸಿ ಹಾಗೂ ರವರ ಮನೆಯ ಹೊರಗೆ ಇದ್ದ ಸಿಸಿ ಕ್ಯಾಮೆರವನ್ನು ಕಿತ್ತು ಹಾಕಿ 3000/- ರೂಪಾಯಿಗಳನ್ನು ಲುಕ್ಸಾನು ಮಾಡಿದ್ದರು.
ಗಲಾಟೆ ಬಿಡಿಸಲು ಬಂದ ರಾಜಪ್ಪ ರವರನ್ನು ಆರೋಪಿತರೆಲ್ಲರೂ ಸೇರಿ ಒತ್ತಿ ಹಿಡಿದುಕೊಂಡಿದ್ದು ಬಲಗೈ ಕಿರುಬೆರಳನ್ನ ತಿರುವಿ ಬೆರಳು ಮುರಿದು ತೀವ್ರ ಸ್ವರೂಪದ ಗಾಯಪಡಿಸಿದ್ದು, ದೊಣ್ಣೆಯಿಂದ ಎಡಭಾಗದ ತಲೆಗೆ ಹೊಡೆದು ಸಾಮಾನ್ಯ ಸ್ವರೂಪದ ಗಾಯಪಡಿಸಿದ್ದು, ಗಲಾಟೆ ಬಿಡಿಸಲು ಬಂದ ರಾಜಪ್ಪ ರವರಿಗೆ ಅವಾಚ್ಯವಾಗಿ ಬೈದು ತಳ್ಳಾಡಿದ್ದು, ಆರೋಪಿತರೆಲ್ಲರೂ ಸೇರಿಕೊಂಡು ಜೀವಬೆದರಿಕೆಯನ್ನು ಹಾಕಿದ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಕೃಷ್ಣ ನಾಯ್ಕ್ ಎಎಸ್ಐ ಹೊಳೆಹೊನ್ನೂರು ಠಾಣೆರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ತಿಪ್ಪೇಶ್ ರಾವ್ ಅಪರ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಘನ 1 ನೇ ಎ.ಸಿ.ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಭದ್ರಾವತಿ ಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದರು.
ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ರವಿ ಕುಮಾರ್ ವಿ. ರವರು ದಿನಾಂಕ: 26~02-2026 ರಂದು 1 ರುದ್ರೇಶ್ ತಂದೆ ಸಂಗಪ್ಪ, 2 ವಿಶ್ವ ತಂದೆ ಶಿವಲಿಂಗಪ್ಪ, 3 ಶಿವು ತಂದೆ ಶಿವಲಿಂಗಪ್ಪ, 4 ಗಿರೀಶ್ ತಂದೆ ಸಿದ್ದಪ್ಪ, 5 ಶಶಿಧರ್ ತಂದೆ ಸಿದ್ದಪ, 6 ಮಧು ತಂದೆ ಶೇಖರಪ್, 7 ಶೇಖರಪ್ಪ ತಂದೆ ರಂಗಪ್ಪ, 8ರಾಜಪ್ಪ ತಂದೆ ಮಹದೇವಪ್ಪ, 9 ಮಲ್ಲಿಕಾ ತಂದೆ ಬಸವರಾಜಪ್ಪ ಮತ್ತು 10 ಹರೀಶ ತಂದೆ ಸದಾಶಿವಪ್ಪ ಹಂಚಿನ ಸಿದ್ದಾಪುರ ಗ್ರಾಮ ಭದ್ರಾವತಿ* ಇವರುಗಳಿಗೆ ತಲಾ 1 ವರ್ಷ ಕಾರಾವಾಸ ಶಿಕ್ಷೆ ಮತ್ತು 8000 ರೂ ದಂಡವನ್ನು ವಿಧಿಸಿದ್ದಾರೆ. ಹಾಗೂ ಒಟ್ಟು 80000 ರು ಗಳನ್ನು ಗಾಯಳು ಗಳಿಗೆ ನೀಡಲು ಆದೇಶಿಸಿದ್ದಾರೆ.
Court sentences 10 people to one year in jail and fines for teasing young woman
