SUDDILIVE || SHIVAMOGGA
ಸೈಬರ್ ಕ್ರೈಂ, ಸೀಗೆಹಟ್ಟಿಯ ಹುಡುಗನನ್ನ ಎತ್ತಹಾಕಿಕೊಂಡು ಹೋದ ಸಿಇಎನ್ ಪೊಲೀಸರು- Cybercrime, CEN police abduct boy from Seegehatti
ಹಳೆಯ ಸ್ನೇಹವನ್ನು ಬಂಡವಾಳ ಮಾಡಿಕೊಂಡು ಬ್ಯಾಂಕ್ ಖಾತೆ ಮೂಲಕ ಕೋಟ್ಯಾಂತರ ರೂಪಾಯಿ ಸೈಬರ್ ವಂಚನೆಗೆ ನೆರವಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಸಿಇಎನ್ ಪೊಲೀಸರುಬಂಧಿಸಿದ್ದಾರೆ. ಬಂಧಿತರನ್ನು ಸೀಗೆಹಟ್ಟಿಯ ಸುಧೀಂದ್ರನಾಥ್ ಎನ್. ಮತ್ತು ಬಾಪೂಜಿನಗರದ ಆರೀಫ್ ಷರೀಫ್ ಎಂದು ಗುರುತಿಸಲಾಗಿದೆ.
ನಗರದ ಶೇಷಾದ್ರಿಪುರಂ ನಿವಾಸಿ ಸತೀಶ್ ಎಂಬುವವರು ಫೆಬ್ರವರಿ 16 ರಂದು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಹಳೆಯ ಸ್ನೇಹಿತ ಸುಧೀಂದ್ರನಾಥ್ ವ್ಯವಹಾರದ ನೆಪ ಹೇಳಿ ಬ್ಯಾಂಕ್ ವಿವರಗಳನ್ನು ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ, ತನಿಖೆ ಆರಂಭಿಸಿದ ಕೇವಲ ಮೂರೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಸತೀಶ್ ಅವರನ್ನು ನಂಬಿಸಿದ್ದ ಆರೋಪಿಗಳು ಅವರ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದು ಅದನ್ನು ಮ್ಯೂಲ್ ಅಕೌಂಟ್ ಆಗಿ ಪರಿವರ್ತಿಸಿದ್ದರು. ಈ ಖಾತೆಯ ಮೂಲಕ ಸೈಬರ್ ವಂಚಕರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು. ಸತೀಶ್ ಅವರ ಖಾತೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಅಲ್ಲದೆ ಇವರ ಅಕೌಂಟ್ ಮೇಲೆ ಐದು ಸೈಬರ್ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ.
ತನಿಖೆಯಲ್ಲಿ ತಿಳಿದುಬಂದಂತೆ, ಸತೀಶ್ ಅವರ ಈ ಒಂದು ಖಾತೆಯ ಮೇಲೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 2.12 ಕೋಟಿ ರೂ. ಹಣ ವಂಚನೆಯಾಗಿದ್ದು, ಅದರಲ್ಲಿ 22.61 ಲಕ್ಷ ರೂ. ಹಣವು ಇದೇ ಮ್ಯೂಲ್ ಅಕೌಂಟ್ ಮೂಲಕ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಪೊಲೀಸರು ಆರೋಪಿಗಳಿಂದ ಮೊಬೈಲ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Cybercrime, CEN police abduct boy from Seegehatti
