SUDDILIVE || BHADRAVATHI
ಕೆರೆಏರಿ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನ-Theft at Kereeri Choudeshwari Temple
ತಾಷ್ಕೆಂಟ್ ನಗರದ ಹೊರವಲಯದಲ್ಲಿರುವ ಶ್ರೀ ಕೆರೆಏರಿ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಸುಮಾರು ₹89,000 ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿದ್ದಾರೆ.
ಅರ್ಚಕ ಉಮೇಶ್ ಅವರು ಪೂಜೆ ಮುಗಿಸಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಮರುದಿನ ಬೆಳಗ್ಗೆ ಪೂಜೆಗೆ ಬಂದಾಗ ದೇವಸ್ಥಾನದ ಬಾಗಿಲನ್ನು ಆಯುಧದಿಂದ ಮೀಟಿ ಮುರಿದಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೇವಸ್ಥಾನದ ಒಳಗೆ ಪರಿಶೀಲಿಸಿದಾಗ ದೇವಿಯ ವಿಗ್ರಹದ ಮೇಲಿದ್ದ ₹16,000 ಮೌಲ್ಯದ 2 ಬಂಗಾರದ ತಾಳಿಗಳು ಮತ್ತು ₹45,000 ಮೌಲ್ಯದ 6 ಗ್ರಾಂ ತೂಕದ ಚಿನ್ನದ ಮೂಗುತಿ ಕಳವು ಮಾಡಲಾಗಿದೆ. ಇದರೊಂದಿಗೆ ದೇವರ ಮೇಲಿದ್ದ ₹4,000 ಮೌಲ್ಯದ 80 ಗ್ರಾಂ ತೂಕದ ಬೆಳ್ಳಿಯ, ₹2,000 ಮೌಲ್ಯದ 40 ಗ್ರಾಂ ತೂಕದ ಬೆಳ್ಳಿಯ ತ್ರಿಶೂಲ ಹಾಗೂ ಭಕ್ತರ ಆಶೀರ್ವಾದಕ್ಕೆ ಬಳಸುವ ₹22,000 ಮೌಲ್ಯದ 250 ಗ್ರಾಂ ತೂಕದ ಬೆಳ್ಳಿಯ ಕಿರೀಟವನ್ನು ಅಪಹರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಪಿ. ಲಿಂಗೇಶ್ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ
Theft at Kereeri Choudeshwari Temple
