SUDDILIVE || SHIVAMOGGA
ಸಂತ ಸೇವಾಲಾಲ್ ಜಯಂತ್ಯೋತ್ಸವ ಬಹಿಷ್ಕರಿಸಲು ನಿರ್ಧಾರ- Decision to boycott Sant Sevalal Jayanti celebrations
ಫೆ.15 ರಂದು ನಡೆಯುವ ಸಂತ ಸೇವಾಲಾಲ್ ಜಯಂತಿಯೋತ್ಸವವನ್ನ ಜಿಲ್ಲಾ ಮೀಸಲಾತಿ ಸಂರಕ್ಷಣಾ ಒಕ್ಕೂಟ ಸಹೋಗ ಬಹಿಷ್ಕರಿಸುವುದಾಗಿ ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಹಯೋಗದ ಅಧ್ಯಕ್ಷ ಎಂ. ವೈ ನಾನ್ಯನಾಯ್ಕ, ಸಂತ ಸೇವಾಲಾಲ್ ಅವರ 287 ನೇ ಜಯಂತ್ಯೋತ್ಸವವನ್ನ ಬಹಿಷ್ಕರಿಸಲಾಗುತ್ತಿದೆ. ಮೀಸಲಾತಿಯನ್ನಮೂರು ಭಾಗವಾಗಿ ವಿಂಗಡಿಸಿದ ಸರ್ಕಾರದ ಈ ಕಾರ್ಯಕ್ರಮವನ್ನ ಬಹಿಷ್ಕರಿಸಲಾಗುತ್ತಿದೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ತೋರಿಸಿ ದಿಕ್ಕಾರ ಕೂಗಲಾಗುವುದು. ಜಯಂತಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದಲ್ಲಿ ಕಪ್ಪುಬಾವುಟ ಪ್ರದರ್ಶಿಸಲಾಗುವುದಿಲ್ಲ. ಸೇವಾಲಾಲ್ ರ ಆಶಯಗಳಿಗೆ ಒತ್ತು ನೀಡದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಇದು ಪ್ರತಿಭಟನೆಯಾಗಿದೆ ಎಂದರು.
ಮೀಸಲಾತಿಯ ವಿಚಾರದಲ್ಲಿ ಸರ್ಕಾರ ABC ಯಾಗಿ ವಿಂಗಡಿಸಿ ಬಂಜಾರ ಸಮುದಾಯಕ್ಕೆ ಘನಘೋರ ಅನ್ಯಾಯವಾಗಿದೆ. ಸಮುದಾಯಕ್ಕೆ ಮರಣಶಾಸನ ಬರೆದಿರುವ ಹಿನ್ನಲೆಯಲ್ಲಿ ಜಂತ್ಯೋತ್ಸವವನ್ನ ಬಹಿಷ್ಕರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
Decision to boycott Sant Sevalal Jayanti celebrations
