SUDDILIVE || SHIVAMOGGA
8 ದಿನ ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಭಾಗಶಃ ರದ್ದಾಗಲಿದೆ-Mysore-Shivamogga Town Express train partially cancelled for 8 days
ಮೈಸೂರು ಮತ್ತು ಮೈಸೂರು ನ್ಯೂ ಗುಡ್ಸ್ ಟರ್ಮಿನಲ್ ಬೈಪಾಸ್ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ (RUB) ಕಾಮಗಾರಿಯ ಪ್ರಯುಕ್ತ, ಈ ಕೆಳಗಿನ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳ್ಳಲಿವೆ.
ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲನ್ನು ಫೆಬ್ರವರಿ 11, 14, 28 ಹಾಗೂ ಮಾರ್ಚ್ 02, 05, 07, 21 ಮತ್ತು 24 ರಂದು ಬೆಳಗೋಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಮೈಸೂರಿನವರೆಗೆ ಸಂಚರಿಸುವ ಬದಲಾಗಿ ಬೆಳಗುಳ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮೇಲ್ಕಂಡ ದಿನಾಂಕಗಳಂದು ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಮೈಸೂರು ನಿಲ್ದಾಣದ ಬದಲಾಗಿ ಬೆಳಗುಳ ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಶಿವಮೊಗ್ಗದತ್ತ ಪ್ರಯಾಣ ಆರಂಭಿಸಲಿದೆ.
Mysore-Shivamogga Town Express train partially cancelled for 8 days
