ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪರ್ಯಾಯವಾದ ಸಂಘ ಮಹಿಳ ಸಂಘವಲ್ಲ-ರೋಶಿನಿ ಗೌಡ ಸ್ಷಷ್ಟನೆ-Women's association is not an alternative to the state government employees' association - Roshini Gowda clarified

 SUDDILIVE || SHIVAMOGGA

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪರ್ಯಾಯವಾದ ಸಂಘ ಮಹಿಳ ಸಂಘವಲ್ಲ-ರೋಶಿನಿ ಗೌಡ ಸ್ಷಷ್ಟನೆ-Women's association is not an alternative to the state government employees' association - Roshini Gowda clarified

Womens, association


ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿ ಗೌಡ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಶೇ.50 ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಮಹಿಳಯರ ಸ್ವಾಭಿಲಂಭಿಗಳಾಗಿ ಸಂಘ ಹೊರಹೊಮ್ಮಿದ್ದೇವೆ ಎಂದರು. 

ಸಂಘ ಅಸ್ತಿಥ್ವಕ್ಕೆ ಬಂದು ಎರಡು ವರ್ಷವಾಗಿದೆ. 20 ಜಿಲ್ಲೆಯಲ್ಲಿ ಸಂಘವಿದೆ ಕೆಲ ತಾಲೂಕಿನಲ್ಲಿ ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ನ ಬಾಲಭವನದಲ್ಲಿ ಸಂಘದ ಕಚೇರಿಯಿದೆ. ಎನ್ ಪಿ ಎಸ್ ಜಾರಿ ಹೋರಾಟ, ಶಿಕ್ಷಕರ ಹೋರಾಟ, ದೈಹಿಕ ಶಿಕ್ಷಕರ ಹೋರಾಟ, ದೈಹಿಕ ಶಿಕ್ಷಕರ ಹೋರಾಟದಲ್ಲಿ ಸಕ್ರಿಯ ಬೆಂಬಲ ಹಾಗೂ ದೌರ್ಜನ್ಯಕ್ಕೊಳಗಾದ ಸರ್ಕಾರಿ ಮಹಿಳ ನೌಕರರ ಪರ ಧ್ವನಿ ಎತ್ತಲಾಗಿದೆ ಎಂದರು. 

ಮಹಿಳೆ ನೌಕರರಿಗೆ ಋತುರಜೆ ಮಂಜೂರು ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟ ಅನುಮೋದನೆಗೊಳ್ಳುವಲ್ಲಿ ಸಂಘ ಸಕ್ರೀಯ ಪಾತ್ರ ವಹಿಸಿದೆ. 8 ನೇ ವೇತನಕ್ಕೆ ಆಯೋಗ ರಚಿಸಲು, ಎನ್ ಪಿಎಸ್ ರದ್ಧತಿ-ಓಪಿಎಸ್ ಜಾರಿಗೆ, ಮಾತೃತ್ವ ರಜೆ ಒಂದು ವರ್ಷದ ವರೆಗೆ ವಿಸ್ತರಿಸಬೇಕು. ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆಗೆ

ಮೇರಿ ದೇವಾಸಿಯಾ ಜನ್ಮದಿನದಂದು ಸೆ.13 ಮಹಿಳಾ ಸರ್ಕಾರಿ ನೌಕರರ ದಿನ ಎಂದು ಘೋಷಿಸಬೇಕು. ಮಹಿಳೆಯರಿಗೆ ಮುಂಗಡ ಹಣವನ್ನ 50 ಸಾವಿರ ರೂ.ಗೆ ಹೆಚ್ಚಿಸಬೇಕು.ವಿದೇಶ ಪ್ರವಾಸಕ್ಕೆ 15 ದಿನಗಳ ಒಳಗೆ ಮಂಜೂರು ಮಾಡಬೇಕು ಎಂಬ ಬೇಡಿಯನ್ನ ಸರ್ಕಾರದ ಮುಂದೆಯಿಡಲಾಗಿದೆ ಎಂದರು. 

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪರ್ಯಾಯವಲ್ಲ

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪರ್ಯಾಯವಾಗಿ ಈ ಸಂಘ ರಚನೆಗೊಂಡಿದೆಯಾ ಎಂಬ‌ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ರೋಶಿನಿ ಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲದಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ. ಸರ್ಕಾರ ಮತ್ತು ರಾಜ್ಯ ಸಂಘಟನೆ ಗೆ ನೀಡಬೇಕು ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಎಲ್ಲರಿಗೂ ಸಂಘಟಿತರನ್ನಾಗಿಸುವ ಉದ್ದೇಶದಿಂದ ಈ ಸಂಘ ರಚನೆಯಾಗಿದೆ ಎಂದು ವಿವರಿಸಿದರು. 

ರಾಜ್ಯ ಸಂಘಟನೆಯನ್ನ ಒಡೆದಿಲ್ಲ. ಈ ಎಲ್ಲಾ ಬೇಡಿಕೆಗಳನ್ನ ರಾಜ್ಯ ನೌಕರರ ಸಂಘದ ಮುಂದೆ ಇಡಲಾಗಿತ್ತು. ಸೂಕ್ಷ್ಮವಾದ ಮಹಿಳೆಯರ ಸಮಸ್ಯೆಯನ್ನ ಹೇಳಿಕೊಳ್ಳಬೇಕಿತ್ತು. ಹಾಗಾಗಿ ಮಹಿಳ ಸಂಘವನ್ನ ರಚಿಸಲಾಗಿದೆ. ಇದು ರಾಜ್ಯ ಸರ್ಕಾರಿ ನೌಕರರ ಸಂಘದ ಪರ್ಯಾಯವಾಗಿಲ್ಲ. 

ಹಾಗಾದರೆ ಸಂಘದಲ್ಲಿಯೇ ಮಹಿಳ ಘಟಕ ರಚಿಸಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೊಟೇಷನ್ ಸಿಸ್ಟಮ್ ಮಾಡಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕೇಳಲಾಗಿತ್ತು. ಒಂದು ಅವಧಿಗೆ ಪುರುಷರನ್ನ ಮತ್ತೊಂದು ಅವಧಿಗೆ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಮನವಿ ನೀಡಲಾಗಿತ್ತು. ಸಹಕಾರ ಇಲಾಖೆ ಸಂಘದ ಬೈಲದಲ್ಲಿ ತಿದ್ದುಪಡಿ ಮಾಡಿ ಎಂದು ಹೇಳಿತ್ತು. ಇದನ್ನ ತಿದ್ದುಪಡಿ ಮಾಡಿ ಎಂದು ಸಂಘಕ್ಕೆ ಕೇಳಿದ್ದೆ. 10 ಸಾವಿರ ಜನ ಸದಸ್ಯರು ಇದ್ದಾರೆ. ನಾವು  ರಾಜ್ಯ ನೌಕರರ ಸಂಘದಲ್ಲಿದ್ದೇವೆ.  100 ಜನ ಸದಸ್ಯರನ್ನ ನೇಮಿಸಿಕೊಂಡಿರಲಿಲ್ಲ. ಹಾಗಾಗಿ ಮಹಿಳ ರಾಜ್ಯ ಸರ್ಕಾರಿ ನೌಕರರ ಸಂಘವನ್ನ ರಚಿಸಲಾಗಿದೆ ಎಂದರು. 

2.5 ಲಕ್ಷ ಜನ ಸದಸ್ಯರಿದ್ದಾರೆ. ಎಲ್ಲರೂ ಆ ಸಂಘದಲ್ಲಿ ಸದಸ್ಯರಿದ್ದಾರೆ.ಶಿವಮೊಗ್ಗದಲ್ಲಿ ಜಿಲ್ಲಾ ಘಟಕ ರಚಿಸಬೇಕಿದೆ ಎಂದು ಹೇಳಿದರು. 

Women's association is not an alternative to the state government employees' association - Roshini Gowda clarified

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close