ಫೆ.27ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ-ಎನ್.ಹೇಮಂತ್- District Level Job Fair on 27th Feb- N. Hemant

SUDDILIVE || SHIVAMOGGA

ಫೆ.27ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ-ಎನ್.ಹೇಮಂತ್- District Level Job Fair on 27th Feb- N. Hemant   

Job, fair



ಫೆಬ್ರವರಿ 27ರಂದು ಬೆಳಿಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದ ಪಕ್ಕದಲ್ಲಿರುವ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ತುಳಸಿ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳು ಭಾಗವಹಿಸಿ, ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.  ಈ ಉದ್ಯೋಗ ಮೇಳದಲ್ಲಿ ಶಿವಮೊಗ್ಗ ಹಾಗೂ ರಾಜ್ಯದೆಲ್ಲೆಡೆಯಿಂದ 50ಕ್ಕೂ ಹೆಚ್ಚಿನ ಉದ್ಯೋಗದಾತ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿಲಿದ್ದಾರೆ. ಎಸ್.ಎಸ್.‌ಎಲ್.‌ಸಿ.ಯಲ್ಲಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ., ಯಾವುದೇ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್‌ಮತ್ತಿತರ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಯುವಕ-ಯುವತಿಯರು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದವರು ತಿಳಿಸಿದರು.

ಉಚಿತ ಪ್ರವೇಶಾವಕಾಶವಿದ್ದು, ಯುವತಿಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಈ ಉದ್ಯೋಗಮೇಳದಲ್ಲಿ ಐ.ಟಿ., ಕಂಪ್ಯೂಟರ್‌, ಆಟೋಮೊಬೈಲ್‌, ಮೆನ್ಯುಫ್ಯಾಕ್ಚರಿಂಗ್‌, ನರ್ಸಿಂಗ್‌, ಬ್ಯಾಂಕಿಂಗ್‌, ಇನ್ಶೂರೆನ್ಸ್‌ಹೀಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶಗಳು ದೊರೆಯಲಿವೆ. ವ್ಯಾಸಂಗ ಮುಂದುವರೆಸುತ್ತಿರುವ ವಿದ್ಯಾರ್ಥಿಗಳು ಇಂಟರ್ನಶಿಫ್‌ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳೂ ಸಹ ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದ ಅವರು, ಆಸಕ್ತರು ತಮ್ಮ ಸ್ವವಿವರ, ಭಾವಚಿತ್ರ, ಆಧಾರ್‌ಕಾರ್ಡ್‌, ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಅವುಗಳ ಐದು ಝೆರಾಕ್ಸ್‌ಪ್ರತಿಗಳೊಂದಿಗೆ ಭಾಗವಹಿಸಬಹುದಾಗಿದೆ. ಆನ್‌ಲೈನ್‌ಮೂಲಕ ಹಾಗೂ ಉದ್ಯೋಗಮೇಳದ ಸ್ಥಳದಲ್ಲಿ ಖುದ್ದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದರು.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎನ್.‌ಆರ್.‌ಎಲ್.‌ಎಂ.ಘಟಕ, ಜಿಲ್ಲಾ ಪಂಚಾಯತ್‌ಶಿವಮೊಗ್ಗ ಮತ್ತು ತಾಲೂಕು ಪಂಚಾಯತ್‌ಎನ್.‌ಆರ್.‌ಎಲ್.‌ಎಂ.ವಿಭಾಗಗಳನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.

District Level Job Fair on 27th Feb- N. Hemant

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close