ಸ್ಪೆಷಲ್ ಕ್ಲಾಸ್ ನಂತರ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆಕೊಡಿ ಇಲ್ಲ, ಬಂದ್ ಮಾಡಿ-ಕರವೇ ಆಗ್ರಹ-Students not provided with proper security after special classes, demand bandh - Karave

SUDDILIVE || SHIVAMOGGA

ಸ್ಪೆಷಲ್ ಕ್ಲಾಸ್ ನಂತರ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆಕೊಡಿ ಇಲ್ಲ, ಬಂದ್ ಮಾಡಿ-ಕರವೇ ಆಗ್ರಹ-Students not provided with proper security after special classes, demand bandh - Karave   

Karave, demand

ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಾಲಾ ಅವಧಿ ಮುಗಿದ ನಂತರ ನಡೆಸುವ ವಿಶೇಷ ತರಗತಿಗಳನ್ನು ಸ್ಥಗಿತಗೊಳಿಸುವ ಕುರಿತು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಊರಗಡೂರಿನಲ್ಲಿ ಬಾಲಕನ ಹತ್ಯೆಯಾದ ಬಳಿಕ ಸಂಘಟನೆಯ ಈ ಮನವಿ ವಿಶೇಷ ಗಮನ ಸೆಳೆದಿದೆ. 

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಾಲಾ ಅವಧಿ ಮುಗಿದ ನಂತರ ನಡೆಸುತ್ತಿರುವ ವಿಶೇಷ ತರಗತಿಗಳನ್ನು ನಿಲ್ಲಿಸುವಂತೆ ಮನವಿ ಸಲ್ಲಿಸಲಾಗುತ್ತಿದೆ. ಇಂತಹ ವಿಶೇಷ ತರಗತಿಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಒತ್ತಡ ಉಂಟಾಗುತ್ತಿದೆ. ಅಲ್ಲದೆ, ವಿಶೇಷ ತರಗತಿಗಳ ನಂತರ ವಿದ್ಯಾರ್ಥಿಗಳು ಮನೆಗೆ ತೆರಳುವ ಸಮಯ ತಡರಾತ್ರಿ ಆಗುತ್ತಿರುವುದರಿಂದ ಅವರ ಭದ್ರತೆಗೂ ಸೂಕ್ತ ವ್ಯವಸ್ಥೆ ಇರುವುದಿಲ್ಲ.

ಆದ್ದರಿಂದ, ವಿಶೇಷ ತರಗತಿಗಳನ್ನು ನಡೆಸುವ ಖಾಸಗಿ ಹಾಗೂ ಸರ್ಕಾರಿ ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದ ಹೊರತು ಇಂತಹ ವಿಶೇಷ ತರಗತಿಗಳಿಗೆ ಅನುಮತಿ ನೀಡಬಾರದು ಎಂದು ವಿನಂತಿಸಲಾಗುತ್ತದೆ.

ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ವಿಶೇಷ ತರಗತಿಗಳನ್ನು ನಡೆಸುವ ಅಗತ್ಯವಿದ್ದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿ ಅಗತ್ಯ ನಿಯಮಗಳು ಮತ್ತು ಶರತ್ತುಗಳನ್ನು ವಿಧಿಸಬೇಕು. ಆ ನಿಯಮಗಳಿಗೆ ಒಪ್ಪಿಗೆ ನೀಡಿದ ಶಾಲೆಗಳಿಗೆ ಮಾತ್ರ ಇಂತಹ ವಿಶೇಷ ತರಗತಿಗಳನ್ನು ನಡೆಸಲು ಅನುಮತಿ ನೀಡಬೇಕು. ಜೊತೆಗೆ, ವಿಶೇಷ ತರಗತಿಗಳು ಮುಗಿದ ನಂತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ತಲುಪುವವರೆಗೆ ಶಾಲಾ ಆಡಳಿತ ಮಂಡಳಿಯೇ ಸಂಪೂರ್ಣ ಜವಾಬ್ದಾರಿಯಾಗಿರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. 

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಾಮದ್ ರಫಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್ ಜಿಲ್ಲಾ ಉಪಾಧ್ಯಕ್ಷರು ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್ ಯುವ ಅಧ್ಯಕ್ಷ ಸಂತೋಷ್ ಜಿಲ್ಲಾ ಕಾರ್ಯದರ್ಶಿ ನೂರುಲ್ಲಾ ಖಾನ್ ಗ್ರಾಮಾಂತರಧ್ಯಕ್ಷ ಮಂಜುನಾಥ್ ಹೆಚ್ಎಂ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

Students not provided with proper security after special classes, demand bandh - Karave  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close