ಮಗನನ್ನ ತಾಯಿ ಮಡಿಲಿಗೆ ತಂದು ಬಿಟ್ಟ ERSS-112 ಪೊಲೀಸರು-ERSS-112 policeman who returned son to mother's lap

SUDDILIVE || SHIVAMOGGA

ಮಗನನ್ನ ತಾಯಿ ಮಡಿಲಿಗೆ ತಂದು ಬಿಟ್ಟ ERSS-112 ಪೊಲೀಸರು-ERSS-112 policeman who returned son to mother's lap     

ERSS, Police


ಮನೆ ಬಿಟ್ಟು ಹೋಗಿದ್ದ ಮಗನನ್ನ ERSS-112 ಪೊಲೀಸರು ತಾಯಿ ಮಡಿಲಿಗೆ ತಂದು ಒಪ್ಪಿಸಿ ಕರ್ತವ್ಯ ಮೆರೆದಿದ್ದಾರೆ.‌

ದಿನಾಂಕಃ 16-02-2026  ರಂದು ರಾತ್ರಿ ಕಾರ್ಗಲ್ ಮಾರಿಕಾಂಬಾ ದೇವಸ್ಥಾನ ರಸ್ತೆಯ ವಾಸಿಯೊಬ್ಬರು ERSS -112 ಗೆ ಕರೆ ಮಾಡಿ, ತನ್ನ 12 ವರ್ಷದ ಮಗನು  ಮನೆ ಬಿಟ್ಟು ಹೋಗಿರುವುದಾಗಿ ದೂರು ನೀಡಿದ್ದರು.  ERV ವಾಹನದ ಅಧಿಕಾರಿಗಳಾದ ಶ್ರೀ ಪುರುಶೋತ್ತಮ್‌ ಸಿಪಿಸಿ -1256 ಮತ್ತು ಚಾಲಕರಾದ ಶ್ರೀ ಪವನ್‌ ಕುಮಾರ್‌ ಎಪಿಸಿ 266 ರವರು ಕೂಡಲೇ ಕಾರ್ಯ ಪ್ರೌವೃತ್ತರಾಗಿ, ಸ್ಥಳಕ್ಕೆ ತೆರಳಿ ಮನೆಯ ಅಕ್ಕ ಪಕ್ಕ ಹುಡುಕಿದ್ದರು.

ಮನೆ ಬಿಟ್ಟು ಹೋಗಿದ್ದ ಹುಡುಗನು ಅವರ ಮನೆಯ ಹಿಂದಿನ ತೋಟದಲ್ಲಿ ಪತ್ತೆಯಾಗಿದ್ದಾನೆ. ನಂತರ ಆತನ ಕರೆದು ಕೊಂಡು ಹೋಗಿ ಆತನ ತಾಯಿಯ ಬಳಿ ಬಿಟ್ಟಿರುತ್ತಾರೆ. ERSS -112 ಅಧಿಕಾರಿಗಳ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ERSS-112 policeman who returned son to mother's lap 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close