ಫೆ.24 ರಿಂದ ಮಾರಿ ಜಾತ್ರೆ, ಹೇಗೆ ನಡೆಯುತ್ತೆ ಜಾತ್ರೆ? Mari fair from Feb. 24, how will the fair be held?

 SUDDILIVE || SHIVAMOGGA

ಫೆ.24 ರಿಂದ ಮಾರಿ ಜಾತ್ರೆ, ಹೇಗೆ ನಡೆಯುತ್ತೆ ಜಾತ್ರೆ? Mari fair from Feb. 24, how will the fair be held?    

Mari, fair


ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನದ ಜಾತ್ರೆ ಫೆ.24 ರಿಂದ 28 ರವರೆಗೆ ನಡೆಯಲಿದ್ದು ಫೆ.24 ರಂದು ಬೆಳಿಗ್ಗೆ  5 ಗಂಟೆಗೆ  ಗಾಂಧಿ ಬಜಾರ್ ನಲ್ಲಿ ದೇವಿಯ  ಪ್ರತಿಷ್ಠಾಪನೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಗೆ  ತಾಯಿಯನ್ನ‌ ಗಾಂಧಿ ಬಜಾರ್ ನಲ್ಲಿ ಮಡಲಕ್ಕಿ ಅರ್ಪಿಸಲಾಗುವುದು ಮತ್ತು ಪೂಜೆ ನಡೆಯಲಿದೆ. 

ಅಂದು ರಾತ್ರಿ 9 ಗಂಟೆಗೆ ಅಮ್ಮನನ್ನ ಕೋಟೆ ದೇವಸ್ಥಾನದ ಗದ್ದುಗೆಗೆ ಉತ್ಸವದ ಮೂಲಕ ತರಲಾಗುವುದು. ಫೆ.25 ರಿಂದ 28 ರವರೆಗೆ ಹರಕೆ, ಬೆಳಿಗ್ಗೆ 6-30 ರಿಂದ ಪೂಜೆ, ಪ್ರಸಾದ ವಿನಿಯೋಗ ನಾಡೆಯಲಿದೆ. ಫೆ.28 ರಂದು ಸಂಜೆ 6-30 ಕ್ಕೆ ಮಹಾಮಂಗಳಾರತಿ, 7 ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದೆ. ಈ ಕುರಿತು ಜಾತ್ರ ಮಹೋತ್ಸವದ ಅಂತವಾಗಿ ಜಾತ್ರೆಗೆ ಪ್ರಚಾರ ನೀಡುವ ಅಂಕೆ ಹಾಕಲಾಯಿತು. 

ಅಂಕೆ ಹಾಕುವ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟೆ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್ ಕೆ ಮರಿಯಪ್ಪ, ಹಾಗೂ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಈ ಬಾರಿ 1.6 ಕೆಜಿ ಬಂಗಾರದ ಮುಖವಾಡ ಮಾಡಿಸಲಾಗಿದೆ. ಈ ಬಾರಿ ಧರಿಸಲಾಗುವುದು. ಜಾತ್ರೆಯಲ್ಲಾದರೂ ಹಾಕಲಾಗುವುದು ಅಥವಾ ವಾರ್ಷಿಕೋತ್ಸವ ನಡೆಸಲಾಗುವುದು. 16 ಕೆಜಿ ಬೆಳ್ಳಿಗೌರಿ ವಿಗ್ರಹ, ಜರ್ಮನ್ ಟೆಂಟ್ ನಿರ್ಮಾಣ ‌ಬಿಹೆಚ್ ರಸ್ತೆಯಲ್ಲೂ ಟೆಂಟ್ ಹಾಕಲಾಗುವುದು. ಬಜಾರ್ ನಲ್ಲಿ ಮಹಾದ್ವಾರ ನಿರ್ಮಿಸಲಾಗುವುದು. ಕಾಳಿ ಅಲಂಕಾರ ಮಾಡಲಾಗುವುದು 20 ಅಡಿ ಕಾಳಿ ನಿರ್ಮಿಸಲಾಗುವುದು. ಮುಖ್ಯದ್ವಾರಗಳಿಗೆ ಅಕಾರ ನಿರ್ಮಿಸಲಾಗುವುದು. ಲೈಟಿಂಗ್ ಫ್ಲೆಕ್ಸಿ ಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು. 

ಕೋಟೆ ಶ್ರೀ ಮಾರಿಕಾಂಬದೇವಿ ದೇವಸ್ಥಾನವು ಇತಿಹಾಸ ಪ್ರಸಿದ್ಧವಾದ ದೇವಾಲಯವಾಗಿರುತ್ತದೆ. ಕೆಳದಿ ಶಿವಪ್ಪನಾಯಕ ಅರಸರ ಕಾಲದಲ್ಲೂ ಸಹ ಪ್ರಸಿದ್ದಿಯಾಗಿದೆ. ಇದು ಮೊದಲು "ಬಯಲು ಮಾರಿ""ಬಿಸಿಲು ಮಾರಿ" "ಕೆಂಚ ಮಾರಿ'' ಎಂದು ಭಕ್ತರಿಂದ ಕರೆಯಲ್ಪಡುವ ಪ್ರಸಿದ್ಧಿಗೊಂಡ ಶಕ್ತಿ ಕ್ಷೇತ್ರ ಕೋಟೆ ಮಾರಿಕಾಂಬ ಜಾತ್ರೆಯಾಗಿದೆ. ಶ್ರೀ ದೇವಿಯ ದೇವಸ್ಥಾನವನ್ನು ನಿರ್ಮಿಸಿ ಪುರ ಪ್ರಮುಖರುಗಳು ಸೇರಿ ಹಿಂದಿನಿಂದಲೂ ಜಾತ್ರೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಅತ್ಯಂತ ಸೌಹಾರ್ದಯುತ ಹಾಗೂ ಭಾವೈಕ್ಯತೆಯಿಂದ ನಡೆಸಿಕೊಂಡು ಬರುತ್ತಿದ್ದು, ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿಯನ್ನು ಪಡೆದಿರುತ್ತದೆ. 

ಜಾತ್ರೆ ನಡೆಸುವ ಅಂಗವಾಗಿ ಎಲ್ಲಾ ಬಾಬುದಾರರುಗಳೂ, ಸದಸ್ಯರುಗಳು ಮತ್ತು ಇತರೆ ಭಕ್ತಾದಿಗಳಿಂದ ಕೂಡಿದ ವಿವಿಧ ಉಪ ಸಮಿತಿಗಳನ್ನು ರಚಿಸಿ, ಎಲ್ಲರನ್ನೂ ಜಾತ್ರೆಗೆ ತೊಡಗಿಸಿಕೊಂಡು ಭೇದ ಭಾವವಿಲ್ಲದೆ ಶ್ರೀ ದೇವಿಯ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. 

ಈ ಬಾರಿ ಫೆಬ್ರವರಿ 24ರ ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ.ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಸಮಾಜದ ಮುತ್ತೈದೆಯರು ಮಂಗಳದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ.ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯದಾರಣೆ ಮಾಡಿ ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಮಂಗಳವಾರ ರಾತ್ರಿ 9 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡ್ಲಕ್ಕಿ ನೀಡಿ ಉಡಿ ತುಂಬಿ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ. ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಉಪ್ಪಾರ ಸಮಾಜ ಬಾಂಧವರು ಗದ್ದಿಗೆಗೆ ತರುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತಸ್ಥ ಸಮಾಜದವರು ಗಂಗೆಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ ಎಂದರು. 

ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹರಿಜನ ಸಮಾಜ(ವಿದ್ಯಾನಗರದ ಕರ್ಲಟ್ಟಿ) ಬಾಂಧವರು ಬೇವಿನುಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, 10ರಿಂದ ಸಂಜೆ 4 ಗಂಟೆಯವರೆಗೆ ಉಪ್ಪಾರ ಸಮಾಜದವರು, ತದನಂತರ ಮಧ್ಯಾಹ್ನ 4 ರಿಂದ 10.30 ರವರೆಗೆ ಮಡಿವಾಳ ಸಮಾಜದವರ ಸರದಿಯಂತೆ ನಾಲ್ಕು ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ ಎಂದು ತಿಳಿಸಿದರು. 

ಫೆಬ್ರವರಿ 28ರ ಶನಿವಾರ ರಾತ್ರಿ 7 ಗಂಟೆಗೆ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ಕಲಾ ತಂಡಗಳ ಮೆರುಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಅಮ್ಮನವರನ್ನು ಮಧ್ಯರಾತ್ರಿ ವನಕ್ಕೆ ತೆಗೆದುಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರವನ್ನು ನಡೆಸಿ, ಪೂಜೆ ಸಲ್ಲಿಸಿ ವನದಿಂದ ಹಿಂದಿರುಗಲಿದ್ದಾರೆ. 

ಮಾರ್ಚ್ 6 ರಿಂದ 8ರ ವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಉದಯೋನ್ಮುಖ ಪೈಲ್ವಾನರುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ - ಅಂತರರಾಜ್ಯದ ಹೆಸರಾಂತ ಪೈಲ್ವಾನರುಗಳಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯುತ್ತದೆ. ಡೊನೇಷನ್ ಪಡೆದಿಲ್ಲ. ದೇವಸ್ಥಾನದಿಂದ ಚಂದ ಎತ್ತುತ್ತಿಲ್ಲ. ಅಂಗಡಿ ಹರಾಜು, ಎಕ್ಸಿ ಬಿಷನ್, ಕಳೆದ 10 ವರ್ಷ್ಇಂದ ಕೋಟೆ ಮಾರಿಕಾಂಬ ಜಾತ್ರ ಸಮಿತಿಯಿಂದ ಚಂದ ಎತ್ತುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. 

Mari fair from Feb. 24, how will the fair be held?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close