11 ಕೆವಿ ಮಾರ್ಗದ ನಿರ್ವಹಣ ಕೆಲಸದಿಂದ ಹಲವೆಡೆ ವಿದ್ಯುತ್ ವ್ಯತ್ಯಯ-Power outages in many places due to maintenance work on 11 kV line

 SUDDILIVE || SHIVAMOGGA

11 ಕೆವಿ ಮಾರ್ಗದ ನಿರ್ವಹಣ ಕೆಲಸದಿಂದ ಹಲವೆಡೆ ವಿದ್ಯುತ್ ವ್ಯತ್ಯಯ-Power outages in many places due to maintenance work on 11 kV line

Power, outage

ಹಲವೆಡೆ 11 ಕೆವಿ ಮಾರ್ಗದ ನಿರ್ವಾಹಣ ಕೆಲಸ ಇರುವುದರಿಂದ ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

11 ಕೆವಿ ಮಾರ್ಗದ ನಿರ್ವಹಣಾ ಕೆಲಸವಿರುವುದರಿಂದ ಬೊಮ್ಮನಕಟ್ಟೆ ಎ ಮತ್ತು ಬಿ ಬ್ಲಾಕ್, ಸಾನ್ವಿ ಲೇಔಟ್, ನಿಗಡೆ ಲೇಔಟ್, ಎಂ.ಬಿ.ಎಸ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 18 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಶಿವಮೊಗ್ಗ ಗ್ರಾಮೀಣ ಉಪವಿಭಾಗ ಗಾಜನೂರು 11 ಕೆವಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿದ್ದು, ಅನುಪಿನಕಟ್ಟೆ, ಪುರದಾಳು, ಅಗಸವಳ್ಳಿ, ಕಲ್ಲೂರು, ಗೋವಿಂದರಾಜಪುರ, ಹನುಮಂತಾಪುರ, ಬೆಳ್ಳೂರು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 19 ಮತ್ತು 20 ರಂದು ಬೆಳಗ್ಗೆ 09.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಶಿವಮೊಗ್ಗ ನಗರ ಉಪವಿಭಾಗ ಮಂಡ್ಲಿ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿದ್ದು, ಅರಮನೆ ಹೋಟೆಲ್ ಎದರು ಮತ್ತು ಹಿಂಭಾಗ, ನಾಗಭೂಷಣ ಪೆಟ್ರೋಲ್ ಬಂಕ್, ಮಲ್ನಾಡ್ ಆಸ್ಪತ್ರೆ, ದಿಗಂತ ಮುದ್ರಣ, ಬೈಪಾಸ್ ರಸ್ತೆ, ಸುಲಾನ್ ಮೊಹಲ್ಲಾ, ಶಿವಶಂಕರ ರೈಸ್ ಮಿಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 18 ರಂದು ಬೆಳಗ್ಗೆ 09.00 ರಿಂದ ಮಧ್ಯಾಹ್ನ 2.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outages in many places due to maintenance work on 11 kV line

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close