SUDDILIVE || SHIVAMOGGA
ಗುತತ್ತಿಗೆ ಆಧಾರದಲ್ಲಿ ಸರ್ಕಾರಿ ಕೆಲಸ ಕೊಡಿಸುವಾಗಿ ವಂಚನೆ-ಎಸ್ಪಿಗೆ ದೂರು- Fraudulently offering government jobs based on intelligence - Complaint to SP
ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣಪಡೆದು ಮಹಿಳೆಯೊಬ್ಬರು ವಂಚಿಸಿರುವ ಘಟನೆ ಎಸ್ಪಿ ನಿಖಿಲ್ ಅವರ ಅಂಗಳ ಪ್ರವೇಶಿಸಿದೆ. 3 ಲಕ್ಷದಲ್ಲಿ 1.60 ಲಕ್ಷ ರೂ. ಹಿಂದಿರುಗಿಸಿ ಉಳಿದ ಹಣ ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಹೊಳೆಹೊನ್ನೂರು ನಿವಾಸಿ ಆಸ್ಮಾಬಾನು ಎಂಬುವರು ಪದವೀದರರಾಗಿದ್ದು ತಮ್ಮ ಮನೆ ನಿರ್ವಹಣೆಗೆ ಸರ್ಕಾರಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವಂತೆ ತಮ್ಮ ಮಾವನವರ ಮೂಲಕ ಸಂಪರ್ಕಕ್ಕೆ ಬಂದ ಶಿವವಮೊಗ್ಗ ನೇತಾಜಿ ವೃತ್ತದ ನಾಜಿಮಾರವರಿಗೆ ಕೇಳಿದ್ದಾರೆ. ಗುತ್ತಿಗೆ ಆಧಾರದ ಮೇರೆಗೆ ಸರ್ಕಾರಿ ಕೆಲಸಕ್ಕೆ ಕಾಯುತ್ತಿದ್ದ ಆಸ್ಮಾಬಾನು ನಾಜಿಮಾರವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು.
ನಾಜಿಮಾರವರು ಆಸ್ಮಾಬಾನುರವರಿಂದ ದಾಖಲಾತಿ ಪಡೆದು ಗುತ್ತಿಗೆ ಆಧಾರದ ಮೇರೆಗೆ ಕೆಲಸ ಪಡೆಯಲು ಹಣಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ. ಕೂಲಿಕೆಲಸ ಮಾಡಿಕೊಂಡ ಜೀವನ ನಡೆಸುತ್ತಿದ್ದ ಆಸ್ಮಬಾನು ಅವರು ನಾಜಿಮಾರವರ ಬೇಡಿಕೆಗೆ 3 ಲಕ್ಷ ರೂ. ಹಣ ಹೊಂದಿಸಿ ನೀಡಿದ್ದರು. ಹಣ ಪಡೆದ ನಂತರ ಈಗಲ್ ಡಿಟೆಕ್ಟಿವ್ ಏಜೆನ್ಸಿಯ ಮೂಲಕ ಕಾಂಗ್ರೆಸ್ ಕಚೇರಿಯಲ್ಲಿ ಕೆಲಸವಿದೆ ಎಂದು ಮತ್ತು ಉಪ ಅರಣ್ಯ ಸಂರಕ್ಷಣಾವನ್ಯಜೀವಿ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಪರೇಟರ್ ಕೆಲಸವಿರುವ ಅದೇಶವು ಬಂದಿರುವ ಬಗ್ಗೆ ನಾಜಿಮಾ ತೋರಿಸಿರುವುದು ಆಸ್ಮಾಬಾನು ಅವರಲ್ಲಿ ಅನುಮಾನ ಮೂಡಿಸಿದೆ.
ಇದರಿಂದ ಹಣವಾಪಾಸ್ ನೀಡುವಂತೆ ಆಸ್ಮಾಬಾನು ನಾಜಿಮಾರವರಿಗೆ ಕೋರಿದ್ದಾರೆ. ಹಣಕೊಡುವುದಾಗಿ ಒಪ್ಪಿಕೊಂಡು 1.60 ಲಕ್ಷ ಹಣವನ್ನ ತಂದುಕೊಟ್ಟರೂ ಬಾಕಿ ಉಳಿದ 1.40 ಲಕ್ಷ ರೂ. ನೀಡಿಲ್ಲ ಎಂದು ಎಸ್ಪಿ ಅವರಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಹಣ ನೀಡಿ ಎಂದರೆ ಇವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನ ಮತ್ತು ಈಗಲ್ ಡಿಟೆಕ್ಟಿವ್ ಏಜೆನ್ಸಿಯವರನ್ನ ಕೇಳಿ ಎಂದು ಉಡಾಫೆಯಿಂದ ಉತ್ತರ ನೀಡಿರುವುದಾಗಿ ಆರೋಪಿಸಲಾಗಿದೆ.
ನಾಜಿಮಾರವರು ಹಣ ಪಡೆಯುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನ ಮತ್ತು ಶಾಸಕ ಚೆನ್ನಬಸಪ್ಪರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದೂ, ಬಾಕಿ ಹಣ ಕೊಡುವ ಸಂದರ್ಭದಲ್ಲಿ ಮಹಿಳಾ ಠಾಣೆ, ಏಜೆನ್ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನ ದುರ್ಬಳಕೆ ಮಾಡಿಕೊಂಡು ಹಣ ನೀಡದೆ ವಂಚಿಸಿದ್ದಾರೆ ಎಂದು ಆಸ್ಮಾಬಾನು ಎಸ್ಪಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
Fraudulently offering government jobs based on intelligence - Complaint to SP

