ಚಂದ್ರಗುತ್ತಿ ರೇಣುಕಮ್ಮ ದೇವಿ ಜಾತ್ರೆ : ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ-Chandragutti Renukamma Devi Fair: DC orders ban on nude service

SUDDILIVE || SHIVAMOGGA

ಚಂದ್ರಗುತ್ತಿ ರೇಣುಕಮ್ಮ ದೇವಿ ಜಾತ್ರೆ : ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ-Chandragutti Renukamma Devi Fair: DC orders ban on nude service    

Chandragutti, Renukamma

ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆ.24 ಮತ್ತು 25 ರಂದು ಶ್ರೀ ರೇಣುಕಮ್ಮ ದೇವಿ ಜಾತ್ರೆ ನಡೆಯುತ್ತಿದ್ದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ 2 ದಿನಗಳ ಕಾಲ ಬೆತ್ತಲೆ ಸೇವೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಆದೇಶಿಸಿದ್ದಾರೆ.

 ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರನ್ವಯ ರೇಣುಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿ ಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು ‘ಬೆತ್ತಲೆ ಸೇವೆ’ ಯನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ. ಈ ನಿಷೇಧಾಜ್ಞೆಯು ಶ್ರೀ ರೇಣುಕಮ್ಮ ದೇವಿಯ ರಥೋತ್ಸವ, ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲವೆಂದು ತಿಳಿಸಿದ್ದಾರೆ.

Chandragutti Renukamma Devi Fair: DC orders ban on nude service

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close