ವೆಲೆಂಟೈನ್ ಡೇ ದಿನದಂದು ಹಿಂದೂ ಯುವತಿಯರಿಗೆ ರಕ್ಷಣೆ ನೀಡುವಂತೆ ಹಿಂದೂ ಜನಜಾಗೃತಿ ವೇದಿಕೆ ಆಗ್ರಹ-Hindu Janajagruti Vedike demands protection for Hindu girls

 SUDDILIVE || SHIVAMOGGA

ವೆಲೆಂಟೈನ್ ಡೇ ದಿನದಂದು ಹಿಂದೂ ಯುವತಿಯರಿಗೆ ರಕ್ಷಣೆ ನೀಡುವಂತೆ ಹಿಂದೂ ಜನಜಾಗೃತಿ ವೇದಿಕೆ ಆಗ್ರಹ-Hindu Janajagruti Vedike demands protection for Hindu girls on Valentine's Day

Valentains, day


ವೆಲಂಟೈನ್ ಡೇ ದಿನದಂದು ಹಿಂದೂ ಯುವತಿಯರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾಧಿಕಾರಿಗಳಿ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಹಾಗೂ ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಮನವಿ ಸಲ್ಲಿದೆ. 

14 ಫೆಬ್ರವರಿಯಂದು ‘ವೆಲಂಟೈನ್ ಡೇ’ ಆಚರಿಸುವ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ, ಇದರ ಪರಿಣಾಮವಾಗಿ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯತ್ತ ಸಾಗುತ್ತಿದೆ. 

‘ವೆಲಂಟೈನ್ ಡೇ’ ಹಿನ್ನೆಲೆಯಲ್ಲಿ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿವೆ ಆದ್ದರಿಂದ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂಘಟನೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ.ಚಂದ್ರಪ್ಪ ಎಸ್ ಗುಂಡಪಲ್ಲಿ ಜಿಲ್ಲಾ ದಂಡಾಧಿಕಾರಿ ಶ್ರೀ.ಪ್ರಭುಲಿಂಗ ಕವಳಿಕಟ್ಟಿ, ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ಶ್ರೀ. ರಂಜಿತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ.ಗಿರಿರಾಜ್ ಜಿ ಕೆ, ತಾಲೂಕು ಪೋಲಿಸ್ ಉಪ ಆದಿಕ್ಷಕರಾದ ಶ್ರೀ ಅರವಿಂದ್ ಎನ್ ಕುಲ್ಗಜ್ಜಿ ಇವರಿಗೆ ಮನವಿಯನ್ನು ನೀಡಲಾಯಿತು.


ವ್ಯಾಲೆಂಟೈನ್ ಡೇ ವೇಳೆ ‘ಪಾರ್ಟಿಗಳಲ್ಲಿ’ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದು ಬೆಳಕಿಗೆ ಬಂದಿದೆ. ಇದಲ್ಲದೇ, ಈ ದಿನ ಗರ್ಭನಿರೋಧಕ ಸಾಮಗ್ರಿಗಳ ಹೆಚ್ಚಿನ ಮಾರಾಟವು ಅನೈತಿಕ ಸಂಬಂಧಗಳ ಹೆಚ್ಚಳವನ್ನು ತೋರಿಸುತ್ತದೆ. ಯುವತಿಯರನ್ನು ಪ್ರಭಾವಿತ ಮಾಡಲು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರು ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಫೆಬ್ರವರಿ 14 ರಂದು ನಗರದಲ್ಲಿ ವಿಶೇಷ ಪೊಲೀಸ್ ತಂಡವನ್ನ ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಷ್ಟೇ ಅಲ್ಲದೆ ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ‘ವಿಶೇಷ ಹೆಲ್ಪ್‌ಲೈನ್ ನಂಬರ್’ ಅನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯ ಮೂಲಕ ಬೇಡಿಕೆ ಇಡಲಾಗಿದೆ.

ಈ ವೇಳೆ ಪರಿಸರ ಶ್ರೀ. ರಮೇಶ್, ವಿಶ್ವ ಹಿಂದೂ ಪರಿಷತ್ ಶ್ರೀ.ನಟರಾಜ್,ಹಿಂದೂಪುರ ಸಂಘಟನೆಯ ಶ್ರೀ. ಪ್ರಪುಲ್ ಚಂದ್ರ, ಭಗತ್ ಸೇನೆಯ ಶ್ರೀ. ಯೋಗೀಶ್ ಆರ್ ಎಸ್ ಎಸ್ ಶ್ರೀ. ಜಗದೀಶ್, ಬಾಲಗೋಕುಲ ಜಿಲ್ಲಾ ಸಂಯೋಜಕರಾದ ಸೌ. ಸಾವಿತ್ರಿ ಷಣ್ಮುಖ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಶ್ವನಾಥ್, ಶ್ರೀ. ಸುಮಂತ್ ಗೌಡ, ಶ್ರೀ. ವಿಠ್ಠಲ್ ಆಚಾರ್, ಸೌ. ಸೀಮಾ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Hindu Janajagruti Vedike demands protection for Hindu girls

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close