ಅಂತರ್ ರಾಜ್ಯ ಸರಗಳ್ಳರು ಮತ್ತು ಒಂಟಿ ಮನೆ ದರೋಡೆಕೋರರ ಬಂಧನ- Inter-state chain thieves and single-family home robbers arrested

SUDDILIVE || SHIVAMOGGA

ಅಂತರ್ ರಾಜ್ಯ ಸರಗಳ್ಳರು ಮತ್ತು ಒಂಟಿ ಮನೆ ದರೋಡೆಕೋರರ ಬಂಧನ- Inter-state chain thieves and single-family home robbers arrested   

Chain, thieves



ದಿನಾಂಕ 18/11/2025 ರಂದು ಮದ್ಯಾಹ್ನ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ *60 ಅಡಿ ರಸ್ತೆ ವಿನೋಬನಗರ 16 ಕ್ರಾಸ್ ನ ರಸ್ತೆಯಲ್ಲಿ ಒಬ್ಬ ಮಹಿಳೆಯು ನಡೆದುಕೊಂಡು ಹೋಗುವಾಗ ಯಾರೋ ಒಬ್ಬ ಅಪರಿಚಿತ ವ್ಯೆಕ್ತಿ ಹಿಂಬದಿಯಿಂದ ನಡೆದುಕೊಂಡು ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ತಳ್ಳಿ ಸ್ವಲ್ಪ ದೂರದಲ್ಲಿ ಬೈಕ್ ಸ್ಟಾಟ್ ಮಾಡಿಕೊಂಡು ಕಾಯುತ್ತಿದ್ದ ವ್ಯೆಕ್ತಿಯ ಬೈಕ್ ಹತ್ತಿಕೊಂಡು ಹೋಗಿದ್ದು. ಈ ಬಗ್ಗೆ ಪಿರ್ಯಾದುದಾರರಾದ ಶ್ರೀಮತಿ ಹೊನ್ನಮ್ಮ ರವರು ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. 

ಈ  ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಬಂಗಾರದ ಮಾಂಗಲ್ಯ ಸರ ಮತ್ತು ಆರೋಪಿತರನ್ನು ಪತ್ತೆ ಮಾಡಲು *ಶ್ರೀ ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ,  ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ರಮೇಶ್  ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಡಿವೈಎಸ್ಪಿ ಸಂಜೀವ್ ಕುಮಾರ್ ಟಿರವರ ಮಾರ್ಗದರ್ಶನದಲ್ಲಿ, ವಿನೋಬ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸಂತೋಷಕುಮಾರ್ ಡಿ.ಕೆರವರ ಉಸ್ತುವಾರಿಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಶ್ರೀ ರಾಜು ಕೆ ಆರ್ ಸಿಪಿಸಿ, ಶ್ರೀ ಚಂದ್ರಾನಾಯ್ಕ ಬಿ ಸಿಪಿಸಿ, ಶ್ರೀ ಮಲ್ಲಪ್ಪ ಎಸ್ ಜಿ ಸಿಪಿಸಿ 1174, ಅರುಣಕುಮಾರ್ ಎನ್ ಕೆ ಸಿಪಿಸಿ 1543, ಶ್ರೀ ಮನುಶಂಕರ ಸಿಪಿಸಿ 1556, ರವರ ತಂಡ ರಚಿಸಲಾಗಿದೆ.  

ಆರೋಪಿತನಾದ 1) ಅರಸು @ ವಲ್ಲರಸು ಆರ್  25 ವರ್ಷ, ಕೊಯಮತ್ತೂರು ವಾಸ ನಂ 199, ಉತ್ತರ ಈ.ಬಿ. ಬೀದಿ ಸೋಮಾಸಿಪಡಿ ಗ್ರಾಮ ತಿರುವಣಮಲೈ ತಾಲ್ಲೂಕ್ ಮತ್ತು ಜಿಲ್ಲೆ ತಮಿಳುನಾಡು ರಾಜ್ಯ  2) ಕಾಲು @ ಇಬ್ರಾಹಿಂ ಪಾಶಾ @ ಇಬ್ರಾಹಿಂ ಬಾಶಾ, ಗೋರಿ ಪಾಳ್ಯ 1ನೇ ಕ್ರಾಸ್ ಜೆ.ಜೆ.ಆರ್ ನಗರ ಪಾದರಾಯಪುರ ಗುಡ್ಡದಹಳ್ಳಿ ಹತ್ತಿರ ಬೆಂಗಳೂರು 3) ಕೇಶವನ್ 43 ವರ್ಷ ಸೇಲಂ ತಾಲ್ಲೂಕ್ ಮತ್ತು ಜಿಲ್ಲೆ ತಮಿಳುನಾಡು 4. ಸತೀಶ್ ಕುಮಾರ್  40 ವರ್ಷ ಡ್ರೈವರ್ ಕೆಲಸ ವಾಸ ತರಕಾರಿ ಮಾರುಕಟ್ಟೆ ಹತ್ತಿರ ಬತ್ತಲಪಲ್ಲಿ ಹೊಸೂರು ತಮಿಳುನಾಡು ರಾಜ್ಯ ಹಾಲಿ ವಾಸ ಎಡವನಹಳ್ಳಿ ಅತ್ತಿಬೆಲೆ ಬೆಂಗಳೂರು ಇವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  

ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಆರೋಪಿತರ ಕಡೆಯಿಂದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಬಂಗಾರ ಅದರ ಬೆಲೆ 4,80,000/- ರೂ ಗಳು ಇದು ವಿನೋಬನಗರ ಠಾಣೆ ಸಿ ಆರ್ ನಂ 265/2025 ಕಲಂ 309(4) ಬಿಎನ್ಎಸ್ ಕೇಸಿಗೆ ಸಂಬಧಿಸಿದ್ದು, ಕೃತ್ಯಕ್ಕೆ ಉಪಯೋಗಿಸಿದ ಟಿಎನ್ 90 ಎಲ್ 6618 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಎನ್ 250 ಬೈಕ್ ಅದರ ಬೆಲೆ 1,50,000/- ರೂ ಗಳು ಮತ್ತು ಎ3. ಕೇಶವನ್ ಆರೋಪಿತನ ಕಡೆಯಿಂದ 70 ಗ್ರಾಂ ತೂಕದ ಮಾಂಗಲ್ಯ ಸರ ಅದರ ಬೆಲೆ 8,50,000/- ರೂ ಗಳು ಇದು ಮೈಸೂರು ಪಿರಿಯಾಪಟ್ಟಣ ಠಾಣೆ ಸಿ ಆರ್ ನಂ 243/2025 ಕಲಂ 309(4) ಬಿಎನ್ಎಸ್ ಕೇಸಿಗೆ ಸಂಬಂಧಿಸಿದ್ದು ಹಾಗೂ 60 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 10,20,000/- ರೂ ಇವು ವಿನೋಬನಗರ ಠಾಣೆ ಸಿ ಆರ್ ನಂ 197/2022 ಕಲಂ 380 ಐಪಿಸಿ ಕೇಸಿಗೆ ಸಂಬಂಧಿಸಿದ್ದವುಗಳನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ. ಒಟ್ಟು ಅಂದಾಜು ಮೌಲ್ಯ 25,00,000/- ರೂ ಗಳಾಗಿರುತ್ತವೆ.

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ.  ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.

Inter-state chain thieves and single-family home robbers arrested   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close