SUDDILIVE || SHIVAMOGGA
ಹಿಂದೂ ಧರ್ಮ ಜಿಹಾದ್ ಹೇಳಲಿಲ್ಲ-ಸುನೀಲ್ ಕುಮಾರ್-Hinduism did not say jihad - Sunil Kumar
ನಗರದ ವಿನೋಬ ನಗರದ ಪೊಲಿಸ್ ಠಾಣೆ ಎದುರೇ ಹಿಂದೂ ಆಯೋಜನಾ ಸಮಿತಿ ವತಿಯಿಂದ ಅರ್ಜುನ, ಕೇಶವ ಮತ್ತು ಪಾಣಿನಿ ವಸತಿಯ ಹಿಂದೂ ಸಂಗಮ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಭಾಗಿಯಾಗಿದ್ದರು.
ನಗರದಲ್ಲಿ ಇಂದು ವಿನೋಬ ನಗರ ಸೇರಿದಂತೆ 12 ವಾರ್ಡ್ ಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆದಿದೆ. ಹಿಂದೂ ಸಂಗಮದಲ್ಲಿ ಬಹುತೇಕ ರಾಷ್ಟ್ರೀಯ ಸ್ವಯಂ ಸೇವಕರು ಭಾಗಿಯಾಗಿದ್ದರೆ, ವಿನೋಬ ನಗರದಲ್ಲಿ ನಡೆದ ಸಂಗಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವುದು ವಿಶೇಷವಾಗಿತ್ತು.
ದಿಕ್ಸೂಚಿ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ಯಾರಿಗೆ ಪುನರ್ ಜನ್ಮದಲ್ಲಿ ನಂಬಿಕೆ ಇದೆಯೋ, ಗೋವನ್ನ ಪೂಜಿಸುವವರನ್ನ, ಓಂಕಾರ ಉಚ್ಚರಣೆಯಾಗುತ್ತಾರೋ, ಹಿಂಸೆಯನ್ನ ಮಾಡದವನು ಹಿಂದೂ ಎನ್ನಲಾಗಿದೆ. ಜಗತ್ತಿನಲ್ಲಿ ಹಿಂದೂಗೆ ಶೌರ್ಯದ, ಸಂಸ್ಕೃತಿಯ ಪರಂಪರೆಯಿದೆ. ಹಿಂದೂ ಜಗತ್ತನ್ನಬಯಸದ ಧರ್ಮವಾಗಿದೆ. ಖಡ್ಗ ಇಟ್ಟುಕೊಂಡು ಹಿಂದೂಗಳು ಬೇರೆ ದೇಶಕ್ಕೆ ಹೋಗಲಿಲ್ಲ. ಯೋಗ, ಆದ್ಯಾತ್ಮಕತೆ, ಆಯುರ್ವೇದದ ಮೂಲಕ ಬೇರೆ ದೇಶಕ್ಕೆ ಹೋದ್ವಿ. ಸ್ವರ್ಗ ಸಿಗಲು ಜಿಹಾದ್ ಹೇಳುವ ಧರ್ಮ ಹೇಳುತ್ತೆ. ಆದರೆ ಹಿಂದೂತ್ವ ತ್ಯಾಗ ಬಲಿದಾನವನ್ನ ಹೇಳಿಕೊಡುತ್ತದೆ ಎಂದರು.
ಹಿಂದೂ ಸಾಧು ಸಂತರಿಗೆ ಜಿಹಾದ್ ಮಾಡಿ ಎಂದು ಹೇಳಲಿಲ್ಲ. ತ್ಯಾಗ ಪುಣ್ಯ ಮಾಡು ಎಂದು ಹೇಳಿಕೊಟ್ಟಿದೆ. ಮಹಾಭಾರತ, ರಾಮಾಯಣ, ಬಸವಣ್ಣನ ವಚನ, ದಾಸರ ಪದಗಳನ್ನ ಕೇಳಿ ಬದುಕು ಕಟ್ಟಿಕೊಂಡವರು ನಾವು ಜಿಹಾದ್ ಗೆ ಹೋಗಲಿಲ್ಲ. ಈ ಉದಾತ್ತವಾದ ಸಂಸ್ಕೃತಿಯ ಮೇಲೆ ಎಷ್ಟು ದಾಳಿ ನಡೆಯಲಿಲ್ಲ. ಅರಬ್ಬರ, ತುರ್ಕರ, ಬ್ರಿಟಿಶರ ದಾಳಿ ದೇಶದ ಮೇಲೆ ನಡೆದಿದೆ. ಆದರೂ ಎದ್ದು ನಿಂತಿದ್ದೇವೆ.
ನಮ್ಮ ಪರಂಪರೆಯ ಮೇಲೆ ನೆನಪಿಸಿಕೊಳ್ಳಿತ್ತಾ ನಮ್ಮ ದೌರ್ಬಲ್ಯವನ್ನ ನಿವಾರಿಸಿಕೊಳ್ಳಬೇಕಿದೆ. ದೌರ್ಬಲ್ಯ ನಮಗೆ ಸವಾಲಾಗಿದೆ. ಜಾತಿ ಪದ್ದತಿ ದೂರ ಮಾಡಬೇಕು. ಜಾತಿ ವ್ಯವಸ್ಥೆಯಿಂದ ಹಿಂದೂ ಸಮಾಜವನ್ನ ಜಾಗೃತಗೊಳಿಸಬೇಕಿದೆ ಎಂದು ಕರೆನೀಡಿದರು.
ಶ್ರೀಲಂಕ, ಮಯಾನ್ಮರ್ ನಲ್ಲಿ ಮೇಲು ಕೀಳಿನ ವಿಷಯದಲ್ಲಿ ದಂಗೆ ಏಳಿಸಲಾಗಿದೆ. ನೂರಾರು ವರ್ಷದಿಂದ ಜಾತಿ ವಿಚಾರದಲ್ಲಿ ಭಾರತದಲ್ಲೂ ದಂಗೆ ಏಳಿಸುವ ಪ್ರಯತ್ನ ನಡೆಯಿತು. ಫಲಿಸಲಿಲ್ಲ. ಪ್ರತಿವ್ಯಕ್ತಿ ಹಿಂದೂಧರ್ಮದಲ್ಲಿ ತೊಡಗಿಸಲು ಫಣತೊಡಬೇಕಿದೆ. ಭಾರತವೂ ಬದಲಾಗಿದೆ. ಹಾವಾಡಿಗ ಭಾರತದಿಂದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಅಮೇರಿಕಾ ತೆರಿಗೆ ದಾಳಿ ಮಾಡಿದಾಗ ಭಾರತ ಸ್ವಾಭಿಮಾನಿ ಭಾರತವಾಗಿ ಬೆಳೆದಿದ್ದರಿಂದ ಯಾರಿಗೂ ತಲೆ ತಗ್ಗಿಸಲಿಲ್ಲ ಎಂದರು.
ಬೇರೆಯವರ ಜನಸಂಖ್ಯೆ ಹೆಚ್ಚಾದಾಗ ಆತಂಕಪಡುವಂತಾಗಿದೆ. ಆದರೆ ಇದು ಆತಂಕದ ವಿಷಯವಲ್ಲ. ಆದರೆ ಪ್ರತ್ಯೇಕತೆಯ ವಾದ ಆತಂಕ ಪಡುವ ವಿಷಯವಾಗಿದೆ.ಶಿವಮೊಗ್ಗದಲ್ಲಿ ಕಲ್ಲುತೂರಾಟವಾದಾಗ ಆಯ್ಕೆ ಮಾಡಿ ಕಲ್ಲು ತೂರಲಾಗಿದೆ ಎಂಬುದು ನಮಗೆ ಗೊತ್ತಿದೆ. ಹಾಗಾಗಿ ಈ ಪ್ರತ್ಯೇಕತೆ ಆಗದಂತೆ ಹಿಂದೂ ಎಚ್ಚರ ವಹಿಸಬೇಕಿದೆ ಎಂದರು.
ಆರ್ ಎಸ್ ಎಸ್ ಶಾಖೆ ಆರಂಭವಾದಾಗ 10 ಜನ ಇರಲಿಲ್ಲ. ಕಬ್ಬಡಿ ಆಡ್ತಾ ಆಡ್ತಾ ದೇಶಕಟ್ಟಲಾಗಿದೆ. ದೇಶದ ಬೌಧ್ದಕತೆ ದಿವಾಳಿತನ ಮಾಡಿ ಕಮ್ಯೂನಿಷ್ಟರಿಗೂ 100 ವರ್ಷ ಆಗಿದೆ. ಕಮ್ಯೂನಿಷ್ಟರು ಇಂದು ಜಾಗಖಾಲಿ ಮಾಡಿದ್ದಾರೆ. ಕಾರಣ ಹಿಂದೂ ಸಮಾಜ ಕಮ್ಯೂನಿಷ್ಟರನ್ನ ಸ್ಬೀಕರಿಸಲಿಲ್ಲ. ಹಾಗಾಹಿ ಆರ್ ಎಸ್ ಎಸ್ ದೇಶದಲ್ಲಿ ಜೀವಂತವಾಗಿದೆ ಎಂದು ವಿವರಿಸಿದರು.
ಕಲ್ಲಗಂಗೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಕೀಲ ಸಂಘದ ಅಧ್ಯಕ್ಷ ರಾಘವೇಂದ್ರ, ರಾಷ್ಟ್ರ ಸೇವಿಕ ಸಮಿತಿಯ ಜಿಲ್ಲಾ ಭೌದಿಕ್ ಪ್ರಮುಖ್ ದೀಪಾ ರವಿಕಿರಣ್ ವೇದಿಕೆಯಲ್ಲಿದ್ದರು.
Hinduism did not say jihad - Sunil Kumar

