SUDDILIVE || BHADRAVATHI
ಅರಣ್ಯ ಇಲಾಖೆ ಬಲಿಗಾಗಿ ಕಾಯುತ್ತಿದೆಯಾ?Is the Forest Department waiting for a victim?
ಭದ್ರಾವತಿಯಲ್ಲಿ ಕರಡಿ ದಿನೆ ದಿನೆ ದಾಳಿ ಹೆಚ್ಚಾಗಿದೆ. ನಿನ್ನೆ ಕೂಡ್ಲಿಗೆರೆಯಲ್ಲಿ ರಾಜೂ ಎಂಬುವರ ಮೇಲೆ ದಾಳಿ ನಡೆಸಿದ್ದರೆ, ಇಂದು ಹಡಲಘಟ್ಟದಲ್ಲಿ ನೆಂಟರ ಮನೆಗೆ ಬಂದ ಅತಿಥಿಯ ಮೇಲೆ ಕರಡಿ ದಾಳಿ ನಡೆಸಿದೆ. ಇಷ್ಟೆಲ್ಲಾ ಜನ ಸಾಮಾನ್ಯರ ಮೇಲೆ ದಾಳಿ ನಡೆಯುತ್ತಿದ್ದರು ಅರಣ್ಯ ಇಲಾಖೆ ಮೌನ ಬಲಿಗಾಗಿ ಕಾಯುತ್ತಿದೆಯಾ ಎಂಬ ಅನುಮಾನ ಕಾಡಿದೆ.
ಭದ್ರಾವತಿಯಿಂದ 9 ಕಿಮಿ ದೂರದಲ್ಲಿ ಬರುವ ಹಡ್ಲಘಟ್ಟದಲ್ಲಿ ಶಿವಕುಮಾರ್ ಎಂಬ ನೆಂಟರ ಮನೆಗೆ ಸುರೇಶ್ ಎಂಬುವರು ಬಂದಿದ್ದರು. ಸುರೇಶ್ ಅವರು ಶಿವಕುಮಾರ್ ಜೊತೆಗೆ ತೋಟಕ್ಕೆ ಹೋದಾಗ ಕರಡಿ ದಾಳಿ ನಡೆಸಿದೆ. 30 ವರ್ಷ ವಯಸ್ಕರಾದ ಸುರೇಶ್ ಕಿವಿಯ ಮೇಲೆ ಕೈ, ಬೆನ್ನಿಗೆ ಕಚ್ಚಿದೆ.
ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾದರೂ ಅರಣ್ಯ ಇಲಾಖೆ ಕ್ರಮ ಜರುಗಿಸದೆ ಇರುವುದು ಇಲಾಖೆ ಬಲಿಗೆ ಕಾಯುತ್ತಿದ್ದ ಮೇಲೆ ಗರಿಗೆದರಿ ಕೂರುತ್ತದಾ ಎಂಬ ಅನುಮಾನ ಹೆಚ್ಚಾಗಿದೆ.
Is the Forest Department waiting for a victim?
