ಭದ್ರಾವತಿಯಲ್ಲಿ ತಹಶೀಲ್ದಾರ್ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಎ ಪತ್ರ ವೈರಲ್- VA letter alleges suicide due to pressure from Tahsildar in Bhadravati

 SUDDILIVE || BHADRAVATHI

ಭದ್ರಾವತಿಯಲ್ಲಿ ತಹಶೀಲ್ದಾರ್ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಎ ಪತ್ರ ವೈರಲ್- VA letter alleges suicide due to pressure from Tahsildar in Bhadravati   

VA, Letter


ಭದ್ರಾವತಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ತಹಶೀಲ್ದಾರ್  ಮಾನಸಿಕ ಕಿರುಕುಳದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರಬರೆದಿರುವುದು ಆತಂಕ ಮೂಡಿಸಿದೆ. 

ತಾನು ತಹಶೀಲ್ದಾರ್ ಅವರ ಒತ್ತಡಕ್ಕೆ ಮಾನಸಿಕವಾಗಿ ನೊಂದಿದ್ದು ಭದ್ರಾವತಿಯ ತಹಶೀಲ್ದಾರ್ ಪರಸಪ್ಪ ಕುರಬರ್ ಅವರ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿ ಗ್ರಾಮಲೆಕ್ಕಾಧಿಕಾರಿ ಅಭಿಷೇಕ್ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ. 

ಆಗರದಳ್ಳಿಯ ಸರ್ವೆ ನಂಬರ್ 56, 49 ಹಾಗೂ 50 ರ ಪೌತಿ ಖಾತೆ ಮಾಡಿಸುವ ಜವಬ್ದಾರಿಯನ್ನ ವಹಿಸಿಕೊಂಡ ಭದ್ರಾವತಿ ತಹಶೀಲ್ದಾರ್  ನನ್ನ ಮೇಲೆ ಒತ್ತಡ ಹೇರುತ್ತಿದ್ದು, ತಡಸ ಸರ್ವೆನಂಬರ್ 51/ಬಿ ರ ಪಿಟಿಸಿಎಲ್ ಕಾಯ್ದೆ ಅಡಿಯಲ್ಲಿ ಭದ್ರಾವತಿ ಕಚೇರಿಗೆ ಕಳುಹಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್ ಒತ್ತಡ ಹಾಕುತ್ತಿರುವುದಾಗಿ ವಿಎ ಪತ್ರ ಬರೆದಲ್ಲಿ ಉಲ್ಲೇಖಿಸಿದ್ದಾರೆ.


21 ವರ್ಷದಿಂದ ವಿಎ ವೃತ್ತಿಯಲ್ಲಿದ್ದರೂ ಲೋಪವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನು ಒಬ್ಬನೇ ದುಡಿಯುವ ವ್ಯಕ್ತಿ ನನ್ನ ತಾಯಿಗೆ ಅನಾರೋಗ್ಯವಿದೆ. ಅವರ ಆರೋಗ್ಯ ನೋಡಿಕೊಳ್ಳಬೇಕಿದೆ. ಇದನ್ನ ತಹಶೀಲ್ದಾರ್ ಅವರಿಗೆ ತಿಳಿಸಿದರೂ ಮತ್ತೆ ಪದೇ ಪದೇ ಕಿರುಕುಳ ಮತ್ತು ಒತ್ತಡ ಹಾಕುತ್ತಿದ್ದಾರೆ. ನಾನು ತಹಶೀಲ್ದಾರ್ ಅವರ ಕಿರುಕುಳಕ್ಕೆ ಆತ್ಮಹತ್ತೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿದ್ದಾರೆ.

ಇದರಿಂದ ಭದ್ರಾವತಿಯಲ್ಲಿ ಮರಳು, ಇಸ್ಪೀಟು ಜೊತೆ ವಿಎ ಅವರ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ವಿಎ ಅಭಿಷೇಕ್ ಬರೆದಿರುವ ಪತ್ರವನ್ನ ಭದ್ರಾವತಿಯ ಅಜಿತ್ ಗೌಡರು ತಮ್ಮ ಫೇಸ್ ಬುಕ್ ನಲ್ಲಿ ವೈರಲ್ ಮಾಡಿದ್ದಾರೆ. 

VA letter alleges suicide due to pressure from Tahsildar in Bhadravati 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close