SUDDILIVE || SAGARA
ದೇವಿ ದರ್ಶನ ಪಡೆಯುವಾಗಲೆ ಕಾಗೋಡು ಅಸ್ವಸ್ಥ-Kagodu falls ill while having darshan of the goddess
ಇಂದಿನಿಂದ ಆರಂಭವಾಗಿರುವ ಸಾಗರ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ದಿಢೀರ್ ಅಸ್ವಸ್ಥರಾದ ಘಟನೆ ನಡೆದಿದೆ. ದೇವಿಯ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಜಾತ್ರೆಯ ಮೊದಲ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಕಾಗೋಡು ತಿಮ್ಮಪ್ಪನವರು ಆಗಮಿಸಿದ್ದರು. ದೇವಸ್ಥಾನದಲ್ಲಿ ದರ್ಶನ ಪಡೆಯುತ್ತಿದ್ದ ವೇಳೆ ಅವರಿಗೆ ತೀವ್ರ ಸುಸ್ತು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಕರ್ತರು ಹಾಗೂ ಸ್ಥಳೀಯರು ಅವರನ್ನು ಆಂಬುಲೆನ್ಸ್ ಮೂಲಕ ಸಾಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಮನೆಗೆ ಕರೆತರಲಾಗಿದೆ. ಕಾಗೋಡು ಚೇತರಿಸಿಕೊಂಡಿರುವುದಾಗಿ ಅವರ ಪುತ್ರಿ ಸ್ಪಷ್ಟಪಡಿಸಿದ್ದಾರೆ.
ಕಾಗೋಡು ತಿಮ್ಮಪ್ಪನವರು ಅಸ್ವಸ್ಥರಾಗುತ್ತಿರುವುದು ಇದು ಮೊದಲಬಾರಿಯಲ್ಲ. ಈ ಹಿಂದೆ ವೇದಿಕೆ ಮೇಲೆ ಭಾಷಣ ಮಾಡುವಾಗ ಕುಸಿದು ಬಿದ್ದಿದ್ದರು. ಶಿವಮೊಗ್ಗದ ಪ್ರತಿಭಟಬೆಯ ವೇಳೆಯೂ ಕುಸಿದು ಬಿದ್ದಿದ್ದರು.
Kagodu falls ill while having darshan of the goddess

